ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Justin Bieber : ಪಾಪ್‌ ಸಿಂಗರ್‌ ಜಸ್ಟೀನ್‌ ಬೀಬರ್‌ ವಿಚ್ಛೇದನ? ಪತ್ನಿ ಫೋಟೋ ಹಾಕಿ ಹೇಳಿದ್ದೇನು?

ಪಾಪ್ ಸೂಪರ್‌ಸ್ಟಾರ್ ಜಸ್ಟಿನ್ ಬೀಬರ್ (Justin Bieber ) ಮತ್ತು ಅವರ ಪತ್ನಿ ಹೈಲಿ ರೋಡ್ ಬೀಬರ್ ಅವರ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹಬ್ಬಿದ್ದವು. 6 ವರ್ಷಗಳ ದಾಂಪತ್ಯದ ನಂತರ ಜಸ್ಟಿನ್ ಬೀಬರ್ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದು $300 ಮಿಲಿಯನ್ ಜೀವನಾಂಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು.

ಪಾಪ್‌ ಸಿಂಗರ್‌ ಜಸ್ಟೀನ್‌ ಬೀಬರ್‌ ವಿಚ್ಛೇದನ?

Profile Vishakha Bhat May 9, 2025 4:42 PM

ವಾಷಿಂಗ್ಟನ್‌: ಪಾಪ್ ಸೂಪರ್‌ಸ್ಟಾರ್ ಜಸ್ಟಿನ್ ಬೀಬರ್ (Justin Bieber ) ಮತ್ತು ಅವರ ಪತ್ನಿ ಹೈಲಿ ರೋಡ್ ಬೀಬರ್ ಅವರ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹಬ್ಬಿದ್ದವು. 6 ವರ್ಷಗಳ ದಾಂಪತ್ಯದ ನಂತರ ಜಸ್ಟಿನ್ ಬೀಬರ್ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದು $300 ಮಿಲಿಯನ್ ಜೀವನಾಂಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಇದೀಗ ಅವರು ತಮ್ಮ ವಿಚ್ಛೇದನ ಕುರಿತು ಸ್ಪಷ್ಟನೆ ನೀಡಿದ್ದಾರೆ. ಜಸ್ಟಿನ್ ಬೀಬರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಕೆಲವು ಪೋಸ್ಟ್‌ಗಳು ಈ ಎಲ್ಲ ವದಂತಿಗಳಿಗೆ ತೆರೆ ಎಳೆದಂತೆ ಕಾಣುತ್ತಿದೆ.

ಇತ್ತೀಚೆಗೆ ನಡೆದ 2025ರ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಜಸ್ಟಿನ್‌ ಪತ್ನಿ ಹೇಲಿ ಬೀಬರ್ ಒಬ್ಬರೇ ಭಾಗವಹಿಸಿದ್ದರು. ಅವರು ಕಪ್ಪು ಬಣ್ಣದ ವೈವ್ ಸೈಂಟ್ ಲಾರಂಟ್ ಬ್ಲೇಜರ್ ಮಿನಿಡ್ರೆಸ್ ಧರಿಸಿ ಮನಮೋಹಕವಾಗಿ ಮೆಟ್ ಗಾಲಾ ಮೆಟ್ಟಿಲುಗಳ ಮೇಲೆ ನಡೆದುಕೊಂಡು ಹೋದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಬಾರಿ ಚರ್ಚೆಗೆ ಕಾರಣವಾಯಿತು. ಜಸ್ಟಿನ್ ಇಲ್ಲದಿದ್ದರಿಂದ ದಂಪತಿಯ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮತ್ತೆ ಮಾತುಕತೆ ಶುರುವಾಯಿತು.

ಈ ಸಂದರ್ಭದಲ್ಲಿ ಹೇಲಿ ತನ್ನ ಸ್ನೇಹಿತೆ ಕೆಂಡಲ್ ಜೆನ್ನರ್ ಜೊತೆ ಪೋಸ್ ಕೊಟ್ಟಿದ್ದರು. ಇದು ಮತ್ತೆ ಅವರ ವಿಚ್ಛೇದನದ ಸುದ್ದಿ ಮತ್ತೆ ಆನ್‌ಲೈನ್‌ನಲ್ಲಿ ಹರಿದಾಡಿತ್ತು.

ಈ ಸುದ್ದಿಯನ್ನೂ ಓದಿ: DK Suresh: ತಮಿಳುನಾಡಿನಲ್ಲಿ ಚಾಟಿ ಏಟಿನ ಸಿನಿಮಾ ಬಂದಿದೆ, ಮುನಿರತ್ನ ಸಿನಿಮಾಗೆ ಆ್ಯಸಿಡ್ ಮೊಟ್ಟೆ ಎಂದು ಕರೆಯಬಹುದೇ? ಡಿ.ಕೆ.ಸುರೇಶ್‌ ವ್ಯಂಗ್ಯ

ಆದರೆ ಇದೀಗ ಜಸ್ಟೀನ್‌ ಬೀಬರ್‌ ಇದೀಗ ತಮ್ಮ ಪತ್ನಿಯ ಫೋಟೋಗಳನ್ನು ಶೇರ್‌ ಮಾಡಿ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಐ ಸೀ ಇಟ್ ಐ ಲೈಕ್ ಇಟ್ ಅಂಡ್ ಐ ವಾಂಟ್ ಇಟ್ ಎಂಬ ಕ್ಯಾಪ್ಷನ್ ಹಾಕಿದರು. ಈ ಪೋಸ್ಟ್‌ಗಳನ್ನು ದಂಪತಿಯ ಮಧ್ಯದ ವಿಚ್ಚೇದನೆಗೆ ವದಂತಿಗೆ ತೆರೆ ಬಿದ್ದಂತೆ ಕಾಣುತ್ತಿದೆ. ಅನೇಕ ಅಭಿಮಾನಿಗಳು ಜಸ್ಟಿನ್ ಬೀಬರ್ ಹೆಚ್ಚಿನ ಬಹಿರಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವುದು ಸರ್ವೇಸಾಮಾನ್ಯ ಎಂದು ಭಾವಿಸಿದ್ದಾರೆ. ಅವರು ಕಳೆದ ಬಾರಿ 2021ರಲ್ಲಿ ಹೇಲಿ ಜೊತೆ ಮೆಟ್ ಗಾಲಾಕ್ಕೆ ಹೋಗಿದ್ದರು, ಅದಕ್ಕಿಂತಲೂ ಮುಂಚೆ 2015ರಲ್ಲಿ ಹಾಜರಾದರು. ಜಸ್ಟಿನ್ ಹಲವು ಬಾರಿ ತನ್ನ ಜೀವನದಲ್ಲಿ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆಯೆಂದು ಹೇಳಿರುವುದು ಕೂಡ ಇದಕ್ಕೆ ಕಾರಣವಾಗಿದೆ.