Heavy Rain: ಆಯತಪ್ಪಿ ಚರಂಡಿಗೆ ಬಿದ್ದ ಶಾಲಾ ಬಾಲಕಿ! ಮುಂದೇನಾಯ್ತು? ವಿಡಿಯೊ ನೋಡಿ
ಉತ್ತರ ಪ್ರದೇಶದ ಮೈನ್‌ಪುರಿಯ ಭೋಗಾಂವ್ ನಗರ ಪಂಚಾಯತ್‌ನಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದರಿಂದ ಪ್ರೇಮ್ ಚಿರೈಯಾ ಪ್ರದೇಶದ ಐದರಿಂದ ಆರು ವರ್ಷದ ಬಾಲಕಿಯೊಬ್ಬಳು ಒಂಬತ್ತು ಇಂಚು ಅಗಲದ ಚರಂಡಿ ಗೋಡೆಯ ಉದ್ದಕ್ಕೂ ನಡೆದು ಶಾಲೆಗೆ ಹೋಗುವಾಗ ಆಯತಪ್ಪಿ ಕೆಸರಿಗೆ ಬಿದ್ದು ಗಾಯಗೊಂಡಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ದೇಶದ ಹಲವು ಕಡೆ ಭಾರಿ ಮಳೆಯಾಗುತ್ತಿದ್ದು(Heavy Rain), ಹಲವು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥವಾಗಿದೆ. ಇದೀಗ ಉತ್ತರ ಪ್ರದೇಶದ ಮೈನ್‌ಪುರಿಯ ಭೋಗಾಂವ್ ನಗರ ಪಂಚಾಯತ್‌ನಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಹೀಗಾಗಿ ಪ್ರೇಮ್ ಚಿರೈಯಾ ಪ್ರದೇಶದ ಐದರಿಂದ ಆರು ವರ್ಷದ ಬಾಲಕಿಯೊಬ್ಬಳು ಒಂಬತ್ತು ಇಂಚು ಅಗಲದ ಚರಂಡಿ ಗೋಡೆಯ ಉದ್ದಕ್ಕೂ ನಡೆದು ಶಾಲೆಗೆ ಹೋಗಲು ಪ್ರಯತ್ನಿಸುತ್ತಿರುವ ವಿಡಿಯೊವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೋಡುಗರನ್ನು ಬೆಚ್ಚಿಬೀಳಿಸಿದೆ.
ವೈರಲ್ ಆದ ವಿಡಿಯೊದಲ್ಲಿ ಬಾಲಕಿ ಚರಂಡಿ ಬಳಿ ನಡೆದುಕೊಂಡು ಹೋಗುವಾಗ ಬ್ಯಾಲೆನ್ಸ್ ತಪ್ಪಿ ಕೆಸರಿನಲ್ಲಿ ಬಿದ್ದಿದ್ದಾಳೆ. ಇದರಿಂದ ಅವಳಿಗೆ ಸಣ್ಣಪುಟ್ಟ ಗಾಯಗಳಾಗಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಶನಿವಾರ(ಜುಲೈ 12) ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ನೀರು ತುಂಬಿದ ಹಾದಿಯಲ್ಲಿ ಇತರ ಮಕ್ಕಳು ಓಡಾಡುವುದು ವಿಡಿಯೊದಲ್ಲಿ ಕಂಡುಬಂದಿದೆ. ನಗರ ಪಂಚಾಯತ್‌ನ ನಿರ್ಲಕ್ಷ್ಯದಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ನಿವಾಸಿಗಳಿಗೆ ನಡೆದಾಡಲು ಅನಾನುಕೂಲವಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
यूपी के मैनपुरी की तस्वीर..स्कूल जाती हुई एक बच्ची कीचड़ में जा गिरी..गनीमत रही कि उसे चोट नहीं पहुंची..
— Gaurav Srivastava (@gauravnewsman) July 14, 2025
लखनऊ से मैनपुरी की दूरी तकरीबन 250 किलोमीटर है pic.twitter.com/pZlFQ9WA7h
ವರದಿಗಳ ಪ್ರಕಾರ, ಸ್ಥಳೀಯರು ಜಿಲ್ಲಾಡಳಿತದ ಬಳಿ ಈ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ. ಆದರೂ ನೀರು ನಿಲ್ಲುವ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹಾಗಾಗಿ ಈ ಘಟನೆಯಿಂದ ನಗರ ಪಂಚಾಯತ್ ಅಧ್ಯಕ್ಷರು ಮತ್ತು ಅಧಿಕಾರಿಗಳ ದಕ್ಷತೆಯ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ. ಭೋಗಾಂವ್‌ನ ಉಪ-ಜಿಲ್ಲಾ ಅಧಿಕಾರಿ (ಎಸ್‌ಡಿಒ) ಸಂಧ್ಯಾ ಶರ್ಮಾ ಅವರನ್ನು ಸಂಪರ್ಕಿಸಿದಾಗ, ಈ ಘಟನೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಹಾಗೂ ಈ ವಿಷಯವನ್ನು ತನಿಖೆ ಮಾಡಿ ಕೂಡಲೇ ಪರಿಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪತ್ನಿಯ ಕಾಟಕ್ಕೆ ಬೇಸತ್ತು ವಿಚ್ಛೇದನ; ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!
ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು ಉತ್ತರಪ್ರದೇಶದಲ್ಲಿ ಮಾತ್ರವಲ್ಲ ದೇಶದ ಹಲವು ಕಡೆಗಳಲ್ಲಿ ಜನರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಸಿಕಾರ್ ಜಿಲ್ಲೆಯ ಲಕ್ಷ್ಮಣ್‌ಗಢ ಪ್ರದೇಶದ ಗಡೋರಾ ಗ್ರಾಮದ ಶಾಲಾ ವಿದ್ಯಾರ್ಥಿನಿಯೊಬ್ಬಳು ರಸ್ತೆಯಲ್ಲಿ ಮೊಣಕಾಲು ಆಳದವರೆಗೆ ಬಂದಿರುವ ನೀರಿನಲ್ಲಿ ನಡೆದುಕೊಂಡು ಹೋಗುತ್ತಾ ರಾಜಕೀಯ ನಾಯಕರು ಮತ್ತು ಸರ್ಕಾರಿ ವ್ಯವಸ್ಥೆಗಳನ್ನು ಅಣಕಿಸಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.ವೈರಲ್ ಆದ ವಿಡಿಯೊದಲ್ಲಿ, ಸಮವಸ್ತ್ರ ಧರಿಸಿರುವ ಶಾಲಾ ವಿದ್ಯಾರ್ಥಿನಿ ರಸ್ತೆಯಲ್ಲಿ ತುಂಬಿ ಹರಿಯುತ್ತಿದ್ದ ನೀರಿನ ಮೇಲೆ ನಡೆದುಕೊಂಡು ಹೋಗುವಾಗ ಸಾರ್ವಜನಿಕ ಸೌಲಭ್ಯಗಳ ಬಗ್ಗೆ ಮಾತನಾಡಿದ್ದಾಳೆ. ಆಕೆಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದೆ. ವಿದ್ಯಾರ್ಥಿಯು ಈ ವಿಡಿಯೊದಲ್ಲಿ ಸರ್ಕಾರಿ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾಳೆ.