Hyderabad Case: ಪಾಳು ಮನೆಯಲ್ಲಿತ್ತು ಅಸ್ಥಿ ಪಂಜರ; ಗುರುತು ಪತ್ತೆಗೆ ಸಹಾಯ ಮಾಡಿದ ನೋಕಿಯಾ ಫೋನ್!
ಕಳೆದು ಹೋದ ಕ್ರಿಕೆಟ್ ಚೆಂಡನ್ನು ಹುಡುಕುತ್ತಿದ್ದ ಬಾಲಕನಿಗೆ ಮನೆಯೊಂದರಲ್ಲಿ ಮಾನವನ ಅಸ್ಥಿ ಪಂಜರ ( Skeleton At hyderabad house) ಪತ್ತೆಯಾದ ಆಘಾತಕಾರಿ ಪ್ರಕರಣ ಹೈದರಾಬಾದ್ (Hyderabad Case) ನಲ್ಲಿ ನಡೆದಿದೆ. ಬಾಲಕ ಬೆಚ್ಚಿ ಬಿದ್ದು, ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಸುತ್ತಮುತ್ತಲಿನ ನಿವಾಸಿಗಳು ಪೊಲೀಸರಿಗೆ (Hyderabad police) ಮಾಹಿತಿ ನೀಡಿದ್ದಾರೆ.


ಹೈದರಾಬಾದ್: ಕಳೆದು ಹೋದ ಕ್ರಿಕೆಟ್ ಚೆಂಡನ್ನು ಹುಡುಕುತ್ತಿದ್ದ ಬಾಲಕನಿಗೆ ಮನೆಯೊಂದರಲ್ಲಿ ಮಾನವನ ಅಸ್ಥಿ ಪಂಜರ ( Skeleton At hyderabad house) ಪತ್ತೆಯಾದ ಆಘಾತಕಾರಿ ಪ್ರಕರಣ ಹೈದರಾಬಾದ್ (Hyderabad Case) ನಲ್ಲಿ ನಡೆದಿದೆ. ಬಾಲಕ ಬೆಚ್ಚಿ ಬಿದ್ದು, ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಸುತ್ತಮುತ್ತಲಿನ ನಿವಾಸಿಗಳು ಪೊಲೀಸರಿಗೆ (Hyderabad police) ಮಾಹಿತಿ ನೀಡಿದ್ದಾರೆ. ಈ ಅಸ್ಥಿ ಮಧ್ಯವಯಸ್ಕ ಅಮೀರ್ ಖಾನ್ ಎಂಬವರದ್ದು ಎಂದು ಗುರುತಿಸಲಾಗಿದೆ. ಅವರು ಸುಮಾರು 10 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕಳೆದು ಹೋದ ಕ್ರಿಕೆಟ್ ಚೆಂಡನ್ನು ಹುಡುಕುತ್ತಿದ್ದ ಬಾಲಕ ಸೋಮವಾರ ಹೈದರಾಬಾದ್‌ನ ನಾಂಪಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಬೀಗ ಹಾಕಿದ ಶಿಥಿಲಗೊಂಡ ಮನೆಯೊಂದರಲ್ಲಿ ಅಸ್ಥಿಪಂಜರದ ಅವಶೇಷಗಳನ್ನು ನೋಡಿದ್ದಾನೆ. ಬಳಿಕ ಮನೆಯಲ್ಲಿ ತಿಳಿಸಿದ್ದು, ಸ್ಥಳೀಯರು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಅಸ್ಥಿ ಮಧ್ಯವಯಸ್ಕ ಅಮೀರ್ ಖಾನ್ ಎಂಬವರದ್ದು ಎಂದು ಗುರುತಿಸಲಾಗಿದೆ. ಅವರು ಸುಮಾರು 10 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇವರು ಸುಮಾರು 2015 ರಿಂದ ಈ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಮಾಹಿತಿ ತಿಳಿದ ತಕ್ಷಣ ಹಬೀಬ್‌ನಗರ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಆಗಮಿಸಿ ಬೀಗ ಹಾಕಿದ್ದ ಮನೆಯ ಬಾಗಿಲನ್ನು ಒಡೆದು ಅಡುಗೆ ಮನೆಯಲ್ಲಿದ್ದ ಮಧ್ಯ ವಯಸ್ಕ ವ್ಯಕ್ತಿಯ ಅಸ್ಥಿಪಂಜರವನ್ನು ಪತ್ತೆ ಮಾಡಿದ್ದಾರೆ. ಬಳಿಕ ಮೃತ ದೇಹದ ಬಳಿ ಬಿದ್ದಿದ್ದ ಸ್ವಿಚ್ಡ್ ಆಫ್ ಮೊಬೈಲ್ ಒಂದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಸ್ವಿಚ್ ಆನ್ ಮಾಡಿ ಪರಿಶೀಲಿಸಿದಾಗ ಮೃತ ವ್ಯಕ್ತಿಯ ಗುರುತು, ಮಾಹಿತಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಅಮೀರ್ ಖಾನ್ ಅವಿವಾಹಿತ ವ್ಯಕ್ತಿಯಾಗಿದ್ದು 2015 ರಿಂದ ಈ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಯಾರಿಗೂ ಅವರ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದು ಕೂಡ ಯಾರ ಗಮನಕ್ಕೂ ಬಂದಿಲ್ಲ.
ಆ ವ್ಯಕ್ತಿಯ ಕುಟುಂಬ ಸದಸ್ಯರು ಹಲವು ವರ್ಷಗಳ ಹಿಂದೆ ಅವರೊಂದಿಗಿನ ಸಂಪರ್ಕ ಕಡಿದುಕೊಂಡು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಯಾವುದೇ ಅವಲಂಬಿತರಿಲ್ಲದ ಕಾರಣ ನಾಪತ್ತೆ ಪ್ರಕರಣವೂ ದಾಖಲಾಗಿಲ್ಲ.
ಅಮೀರ್ ಖಾನ್ ಹೇಗೆ ಸತ್ತರು ಎಂಬುದನ್ನು ಪತ್ತೆ ಹಚ್ಚಲು ಅಸ್ಥಿಪಂಜರದ ಅವಶೇಷಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಅಸ್ವಾಭಾವಿಕ ಸಾವಿನ ಪ್ರಕರಣವೆಂದು ದಾಖಲಿಸಲಾಗಿದ್ದು ತನಿಖೆ ಮುಂದುವರಿಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಬೈಕ್‌ನಲ್ಲಿ ಜೋಡಿಗಳ ರೊಮ್ಯಾನ್ಸ್; ಹಸಿ-ಬಿಸಿ ವಿಡಿಯೊ ಫುಲ್ ವೈರಲ್
ಮೃತನ ಬಗ್ಗೆ ಮಾಹಿತಿ ನೀಡಿದ ನೋಕಿಯಾ ಫೋನ್
ಹೈದರಾಬಾದ್ ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರದ ಗುರುತು ಪತ್ತೆಗೆ ನೋಕಿಯಾ ಫೋನ್ ಸಹಾಯ ಮಾಡಿದೆ. ಇದರಲ್ಲಿ ಸಾಕಷ್ಟು ಟೆಕ್ಸ್ಟ್ ಮೆಸೇಜ್ ಗಳು ಸಿಕ್ಕಿವೆ. ಇವರ ಮನೆಯಲ್ಲಿ ರದ್ದುಗೊಂಡಿರುವ ಹಳೆಯ ನೋಟುಗಳು ಪತ್ತೆಯಾಗಿದೆ.
ನಾಂಪಲ್ಲಿಯಲ್ಲಿ ವಾಸವಿದ್ದ ಮುನೀರ್ ಖಾನ್ ಎಂಬವರಿಗೆ 10 ಮಕ್ಕಳಿದ್ದರು. ಅವರಲ್ಲಿ ಮೂರನೇ ಮಗ ಅಮೀರ್ ಖಾನ್. ಇವರು ಅವಿವಾಹಿತರಾಗಿದ್ದರಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇತರರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಫೋನ್ ನಲ್ಲಿ 2015 ರಲ್ಲಿ ಬಂದಿರುವ 84 ಮಿಸ್ಡ್ ಕಾಲ್‌ಗಳು ಇವೆ. ಹೀಗಾಗಿ ಅವರು 2015ರಲ್ಲಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಸುಮಾರು 50 ವರ್ಷ ವಯಸ್ಸಿನವರಾಗಿದ್ದ ಅಮೀರ್ ಖಾನ್ ಬಹುಶಃ ಮಾನಸಿಕ ಅಸ್ವಸ್ಥರಾಗಿರಬಹುದು. ಅವರ ಹಾಸಿಗೆಯ ದಿಂಬಿನ ಕೆಳಗೆ 2016ರಲ್ಲಿ ರದ್ದುಗೊಂಡ ನೋಟುಗಳು ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.