Celebrity Fashion 2025: ಸಿಂಪಲ್ ಲಂಗ-ದಾವಣಿ ಲುಕ್ನಲ್ಲಿ ಮಿಂಚಿದ ನಟಿ ಭೂಮಿಕಾ!
Celebrity Fashion 2025: ಆಷಾಡ ಪೂಜೆಯ ಪ್ರಯುಕ್ತ ನಟಿ ಭೂಮಿಕಾ ಧರಿಸಿದ್ದ ಲಂಗ- ದಾವಣಿಯ ಟ್ರೆಡಿಷನಲ್ ಔಟ್ಫಿಟ್ ಹುಡುಗಿಯರಿಗೆ ಇಷ್ಟವಾಗಿದೆ. ಈ ಸಿಂಪಲ್ ಡಿಸೈನ್ನ ಉಡುಗೆಯ ಸ್ಟೈಲಿಂಗ್ ಹೇಗೆ? ಮೇಕೋವರ್ ಹೇಗೆ? ಎಂಬುದರ ಬಗ್ಗೆ ಅವರು ಒಂದೈದು ಸಿಂಪಲ್ ಟಿಪ್ಸ್ ನೀಡಿದ್ದಾರೆ.

ಚಿತ್ರಗಳು: ಭೂಮಿಕಾ, ನಟಿ


ಆಷಾಡ ಸೀಸನ್ನ ಟೆಂಪಲ್ ರನ್ ಸಂದರ್ಭದಲ್ಲಿ ನಟಿ ಭೂಮಿಕಾ ಲಂಗ- ದಾವಣಿಯಲ್ಲಿ ಕಾಣಿಸಿಕೊಂಡಿದ್ದು, ಟ್ರೆಡಿಷನಲ್ ಉಡುಗೆ ಪ್ರಿಯರನ್ನು ಸೆಳೆದಿದೆ. ಅವರು ಧರಿಸಿದ್ದ, ತೀರಾ ಸಿಂಪಲ್ ಆಗಿದ್ದ ರೆಡ್ ಶೇಡ್ನ ಲಂಗ-ದಾವಣಿಯು ಸಾಕಷ್ಟು ಹುಡುಗಿಯರನ್ನು ಆಕರ್ಷಿಸಿದೆ. ಸದಾ ಗ್ರ್ಯಾಂಡ್ ಲುಕ್ ಲಂಗ-ದಾವಣಿ ಬೇಡ! ಸಿಂಪಲ್ ಲುಕ್ನದ್ದು ಸಾಕು! ಎನ್ನುವವರು ಹೇಗೆಲ್ಲಾ ಸ್ಟೈಲಿಂಗ್ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ನಟಿ ಭೂಮಿಕಾ ಸರಳ ಟಿಪ್ಸ್ ನೀಡಿದ್ದಾರೆ.
ಹೀಗಿರಲಿ ಸಿಂಪಲ್ ಲಂಗ-ದಾವಣಿ
ಸಿಂಪಲ್ ಲಂಗ-ದಾವಣಿ ಪ್ರಿಯರು ಆದಷ್ಟೂ ದೇಸಿ ವಿನ್ಯಾಸದನ್ನು ಚೂಸ್ ಮಾಡಬೇಕು. ನಾರ್ತ್ ಸ್ಟೈಲ್ನ ಡಿಸೈನ್ನಲ್ಲಿ ಹೊಲೆಸಬಾರದು. ಅದು ಪಕ್ಕಾ ಸ್ಥಳೀಯ ಲುಕ್ ನೀಡುವಂತಿರಬೇಕು.

ಸಾದಾ ವಿನ್ಯಾಸಕ್ಕೆ ಪ್ರಾಮುಖ್ಯತೆ
ಮೊಟಿವ್ಸ್, ಬುಟ್ಟಾ ಹೀಗೆ ಫ್ಯಾಬ್ರಿಕ್ನ ಒಡಲ ತುಂಬೆಲ್ಲಾ ಡಿಸೈನ್ ಇರುವುದು ಬೇಡ. ಸಾದಾ ಬಣ್ಣದ ಫ್ಯಾಬ್ರಿಕ್ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಅದು ತೀರಾ ಗ್ರ್ಯಾಂಡ್ ಲುಕ್ ನೀಡಬಹುದು. ಆದಷ್ಟೂ ಒಂದೇ ವರ್ಣದ್ದಾಗಿದ್ದರೇ ಉತ್ತಮ.

ಬಾರ್ಡರ್ ಇರುವಂತದ್ದನ್ನು ಸೆಲೆಕ್ಟ್ ಮಾಡಿ
ಇನ್ನು, ಲಂಗ-ದಾವಣಿ ಹೊಲೆಸುವಾಗ ಆದಷ್ಟೂ ಬಾರ್ಡರ್ ಇರುವಂತಹದ್ದನ್ನು ಸೆಲೆಕ್ಟ್ ಮಾಡಿ. ಆಗ ಇದು ಸಿಂಪಲ್ ಆಗಿದ್ದರೂ ನೋಡಲು ಟ್ರೆಡಿಷನಲ್ ಲುಕ್ ನೀಡುತ್ತದೆ. ಅಲ್ಲದೇ ಟ್ರೆಡಿಷನಲ್ ಟಚ್ ನೀಡುತ್ತದೆ.

ಪಕ್ಕಾ ದೇಸಿ ಲುಕ್ ನಿಮ್ಮದಾಗಲಿ
ಸ್ಥಳೀಯ ಡಿಸೈನ್ನಲ್ಲಿ ಲಂಗ-ದಾವಣಿಯನ್ನು ಹೊಲೆಸಿ, ಧರಿಸಿದಾಗ ಪಕ್ಕಾ ಹಳ್ಳಿ ಹುಡುಗಿಯಂತೆ ಬಿಂಬಿಸುತ್ತದೆ. ನೋಡಲು ದೇಸಿ ಲುಕ್ ನೀಡುತ್ತದೆ. ಹಾಗಾಗಿ ಸ್ಟಿಚ್ಚಿಂಗ್ ಮಾಡಿಸುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಲಂಗ-ದಾವಣಿ ಮೇಕೋವರ್
ಲಂಗ-ದಾವಣಿ ಧರಿಸಿದಾಗ ಯಾವುದೇ ಕಾರಣಕ್ಕೂ ವೆಸ್ಟರ್ನ್ ಲುಕ್ ನೀಡುವಂತಹ ಮೇಕೋವರ್ ಮಾಡಬಾರದು. ಮೇಕಪ್ ಹಾಗೂ ಹೇರ್ಸ್ಟೈಲ್ ಟ್ರೆಡಿಷನಲ್ ಲುಕ್ಗೆ ಹೊಂದಬೇಕು. ಹಣೆಗೆ ಬಿಂದಿ, ಕಣ್ಣಿಗೆ ಕಾಡಿಗೆ ಹಚ್ಚಿದಲ್ಲಿ, ಥೇಟ್ ಹಳ್ಳಿ ಹುಡುಗಿಯ ಲುಕ್ ನಿಮ್ಮದಾಗುವುದು ಎನ್ನುತ್ತಾರೆ ನಟಿ ಭೂಮಿಕಾ.