WTC Points Table: ವಿಶ್ವ ಟೆಸ್ಟ್ ಅಂಕಪಟ್ಟಿಯಲ್ಲಿ ಕುಸಿದ ಭಾರತ; ಆಸೀಸ್ ಅಗ್ರಸ್ಥಾನಿ
ಭಾರತ ವಿರುದ್ಧ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡ ಶ್ರೀಲಂಕಾವನ್ನು ಹಿಂದಿಕ್ಕಿ 66.67 ಗೆಲುವಿನ ಪ್ರತಿಶತದೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ. ಶ್ರೀಲಂಕಾ(66.67) ಮೂರನೇ, ಭಾರತ(33.33) ನಾಲ್ಕನೇ ಸ್ಥಾನದಲ್ಲಿದೆ. ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆದ್ದ ಬಳಿಕ ಯಾವುದೇ ಟೆಸ್ಟ್ ಆಡದ ಕಾರಣ ಸದ್ಯ 9ನೇ ಸ್ಥಾನದಲ್ಲಿದೆ.


ದುಬೈ: ಲಂಡನ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡ ಭಾರತ 2025-2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ(WTC Points Table) ಅಂಕ ಪಟ್ಟಿಯಲ್ಲಿ ಒಂದು ಸ್ಥಾನದ ನಷ್ಟದೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಾರಿದೆ. ವಿಂಡೀಸ್ ತಂಡವನ್ನು ಅಂತಿಮ ಟೆಸ್ಟ್‌ನಲ್ಲಿ 27 ರನ್‌ಗೆ ಆಲೌಟ್ ಮಾಡುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಶೇ.100 ಗೆಲುವಿನ ಪ್ರತಿಶತ ಹೊಂದಿದೆ.
ಭಾರತ ವಿರುದ್ಧ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡ ಶ್ರೀಲಂಕಾವನ್ನು ಹಿಂದಿಕ್ಕಿ 66.67 ಗೆಲುವಿನ ಪ್ರತಿಶತದೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ. ಶ್ರೀಲಂಕಾ(66.67) ಮೂರನೇ, ಭಾರತ(33.33) ನಾಲ್ಕನೇ ಸ್ಥಾನದಲ್ಲಿದೆ. ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆದ್ದ ಬಳಿಕ ಯಾವುದೇ ಟೆಸ್ಟ್ ಆಡದ ಕಾರಣ ಸದ್ಯ 9ನೇ ಸ್ಥಾನದಲ್ಲಿದೆ. ಈ ವರ್ಷದ ಕೊನೆಯಲ್ಲಿ ಭಾರತ ವಿರುದ್ಧ ಸರಣಿ ಆಡುವ ಮೂಲಕ ದಕ್ಷಿಣ ಆಫ್ರಿಕಾ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ ನ್ಯೂಜಿಲ್ಯಾಂಡ್, ಪಾಕಿಸ್ತಾನ ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಟೆಸ್ಟ್ ಪಂದ್ಯವನ್ನು ಇನ್ನಷ್ಟೇ ಆಡಬೇಕಿದೆ. ಮೂರು ಟೆಸ್ಟ್ ಪಂದ್ಯಗಳಲ್ಲಿ ಸೋತಿರುವ ವೆಸ್ಟ್ ಇಂಡೀಸ್ ಶೂನ್ಯ ಗೆಲುವಿನ ಪ್ರತಿಶತದೊಂದಿಗೆ ಆರನೇ ಸ್ಥಾನದಲ್ಲಿದೆ.
ಅಗ್ರ-5 ತಂಡಗಳು
ಆಸ್ಟ್ರೇಲಿಯಾ- 36 ಅಂಕ
ಇಂಗ್ಲೆಂಡ್- 24 ಅಂಕ
ಶ್ರೀಲಂಕಾ- 16 ಅಂಕ
ಭಾರತ- 12 ಅಂಕ
ಬಾಂಗ್ಲಾದೇಶ- 4 ಅಂಕ
ಇದನ್ನೂ ಓದಿ IND vs ENG: ಲಾರ್ಡ್ಸ್ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್ ವಿರುದ್ಧ ಆರ್ ಅಶ್ವಿನ್ ಕಿಡಿ!