Assault Case: ಜೀವನಾಂಶ ಕೇಳಿದ ಮೊದಲ ಹೆಂಡತಿಗೆ ಮಚ್ಚಿನಿಂದ ಕೊಚ್ಚಿದ ರಾಕ್ಷಸ
ತಿಮ್ಮಪ್ಪ ಯಾದವ್ ಹಾಗೂ ಪತ್ನಿ ಪದ್ಮಾವತಿಗೆ ನಾಲ್ಕು ಜನ ಮುದ್ದಾದ ಮಕ್ಕಳಿದ್ದಾರೆ. ಮೊದಮೊದಲು ಮಟ್ಕಾ ದಂಧೆ ನಡೆಸುತ್ತಿದ್ದ ತಿಮ್ಮಪ್ಪ ಬಳಿಕ ಪತ್ನಿಗೆ ನಿತ್ಯ ಟಾರ್ಚರ್ ಶುರು ಮಾಡಿದ್ದ. ಎರಡನೇ ಮದುವೆ ಆಗಲು ಹೊರಟಿದ್ದ. ಹೀಗಾಗಿ ಪತ್ನಿ ಪದ್ಮಾವತಿ ಕೋರ್ಟ್ ಮೊರೆ ಹೋಗಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು.

ಆರೋಪಿ ತಿಮ್ಮಪ್ಪ ಪತ್ನಿ ಜೊತೆ

ರಾಯಚೂರು: ಪತ್ನಿಯನ್ನು ಬಿಟ್ಟು ಎರಡನೇ ಮದುವೆ ಆಗಲು ಹೊರಟ ವ್ಯಕ್ತಿಯೊಬ್ಬ ಜೀವನಾಂಶ (alimony) ಕೇಳಿದ ತನ್ನ ಮೊದಲ ಪತ್ನಿ (Wife) ಹಾಗೂ ನಾದಿನಿ ಮೇಲೆ ಮಚ್ಚಿನಿಂದ ಮನಬಂದಂತೆ ಹಲ್ಲೆ (Assault case) ಮಾಡಿದ್ದಾನೆ. ರಾಯಚೂರು (Raichur news) ತಾಲೂಕಿನ ಏಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಿಮ್ಮಪ್ಪ ಯಾದವ್ ಎನ್ನುವ ವ್ಯಕ್ತಿಯೇ ಈ ರೀತಿ ರಾಕ್ಷಸಾವತಾರ ತಾಳಿ ದಾಳಿ ನಡೆಸಿದವನು. ಆರೋಪಿ ತಿಮ್ಮಪ್ಪ ತನ್ನ ಪತ್ನಿ ಪದ್ಮಾವತಿ, ಪದ್ಮಾವತಿಯ ತಂಗಿ ಭೂದೇವಿಯನ್ನು ಮಚ್ಚಿನಿಂದ ಹೊಡೆದಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.
ತಿಮ್ಮಪ್ಪ ಯಾದವ್ ಹಾಗೂ ಪತ್ನಿ ಪದ್ಮಾವತಿಗೆ ನಾಲ್ಕು ಜನ ಮುದ್ದಾದ ಮಕ್ಕಳಿದ್ದಾರೆ. ಮೊದಮೊದಲು ಮಟ್ಕಾ ದಂಧೆ ನಡೆಸುತ್ತಿದ್ದ ತಿಮ್ಮಪ್ಪ ಬಳಿಕ ಪತ್ನಿಗೆ ನಿತ್ಯ ಟಾರ್ಚರ್ ಶುರು ಮಾಡಿದ್ದ. ಎರಡನೇ ಮದುವೆ ಆಗಲು ಹೊರಟಿದ್ದ. ಹೀಗಾಗಿ ಪತ್ನಿ ಪದ್ಮಾವತಿ ಕೋರ್ಟ್ ಮೊರೆ ಹೋಗಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಕೋರ್ಟ್ ಕೂಡ ಪತ್ನಿ ಪದ್ಮಾವತಿಗೆ ಜೀವನಾಂಶ ಕೊಡುವಂತೆ ಪತಿ ತಿಮ್ಮಪ್ಪಗೆ ಸೂಚಿಸಿತ್ತು. ಕಳೆದ ಎರಡು ತಿಂಗಳ ಹಿಂದಷ್ಟೇ ಆರೋಪಿ ತಿಮ್ಮಪ್ಪ ಪತ್ನಿಗೆ ಜೀವನಾಂಶ ಕೊಡಲಾಗದೇ ಜೈಲು ಸೇರಿದ್ದ. ಬಳಿಕ ಜೈಲಿನಿಂದ ಹೊರಬಂದು ಪತ್ನಿಗೆ ಟಾರ್ಚರ್ ಕೊಡಲಾರಂಭಿಸಿದ್ದಾನೆ.
ತಿಮ್ಮಪ್ಪ ಐದು ಎಕರೆ ಜಮೀನು ಮಾಲೀಕ. ಹೀಗಾಗಿ ತನ್ನ ನಾಲ್ಕು ಮಕ್ಕಳ ಭವಿಷ್ಯಕ್ಕಾಗಿ ಪದ್ಮಾವತಿ ಜಮೀನಿನಲ್ಲಿ ಪಾಲು ಕೇಳಿದ್ದರು. ನಿನ್ನೆಯಷ್ಟೇ ಪದ್ಮಾವತಿ ಜೀವನಾಂಶದ ಕುರಿತು ಮತ್ತೆ ಕೋರ್ಟ್ಗೆ ಹೋಗಿದ್ದಳು. ಆಕೆಯ ತಂಗಿ ಭೂದೇವಿಗೂ ನಿಶ್ಚಿತಾರ್ಥವಾಗಿದ್ದು ಇನ್ನೊಂದು ತಿಂಗಳಲ್ಲಿ ಮದುವೆಯಿದೆ. ಹೀಗಾಗಿ ಅಕ್ಕ ಪದ್ಮಾವತಿ ಜೊತೆ ಟೇಲರಿಂಗ್ ಕೆಲಸ ಕಲಿಯಲು ಜೊತೆಗಿದ್ದಳು. ನಿನ್ನೆ ಗ್ರಾಮದಲ್ಲಿ ಅಕ್ಕತಂಗಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಪಾಪಿ ತಿಮ್ಮಪ್ಪ ಇಬ್ಬರ ಮೇಲೂ ಮಚ್ಚಿನಿಂದ ಕೊಚ್ಚಿದ್ದಾನೆ.
ಘಟನೆಯಲ್ಲಿ ಪದ್ಮಾವತಿಯ ಕೈ ಬೆರಳುಗಳು ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಅಕ್ಕನ ಜೊತೆಗಿದ್ದ ತಂಗಿಯ ಮುಂಗೈ ತುಂಡಾಗಿದ್ದು, ಸದ್ಯ ರಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಚ್ಚಿನಿಂದ ದಾಳಿ ಮಾಡಿದ್ದ ತಿಮ್ಮಪ್ಪನನ್ನು ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Murder Case: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಟ್ವಿಸ್ಟ್, ಅತ್ತೆಯೇ ಕೊಲೆಗಾತಿ!