NIA raid: ಕಾರವಾರ ನೌಕಾನೆಲೆ ಮಾಹಿತಿ ಸೋರಿಕೆ: ಎನ್‌ಐಎಯಿಂದ ಇಬ್ಬರು ಆರೆಸ್ಟ್
ಮುದುಗ ಗ್ರಾಮದ ನಿವಾಸಿ ವೇತನ್ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯಕ್ ಎಂಬವರನ್ನು ಎನ್ಐಎ ಅಧಿಕಾರಿಗಳು ಇದೀಗ ಅರೆಸ್ಟ್ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದುಗ ಗ್ರಾಮದಲ್ಲಿ ನಿನ್ನೆ ಇಬ್ಬರ ಬಗ್ಗೆಯೂ ಎನ್ಐಎ ತಂಡ ಮಾಹಿತಿ ಕಲೆಹಾಕಿತ್ತು. ನೌಕಾನೆಲೆ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಕಾರವಾರಕ್ಕೆ ಭೇಟಿ ನೀಡಿದ್ದರು.

ಐಎನ್‌ಎಸ್ ಕದಂಬ ನೌಕಾನೆಲೆ

ಉತ್ತರಕನ್ನಡ : ಕಾರವಾರದ ಕದಂಬ ನೌಕಾನೆಲೆಯ ( INS Kadamba Naval Base) ಕೆಲವು ರಹಸ್ಯ ಮಾಹಿತಿ ಸೋರಿಕೆಯಾದ (espionage) ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಆಗಸ್ಟ್ 28ರಂದು ತಾಲ್ಲೂಕಿನ ಮುದಗಾ, ತೊಡೂರು ಮತ್ತು ಅಂಕೋಲಾದ ಮೂವರು ಯುವಕರನ್ನು ವಿಚಾರಣೆ ನಡೆಸಿದ್ದ NIA ತಂಡ ಪುನಃ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಮಿಸಿ (NIA raid) ಇಬ್ಬರು ಆರೋಪಿಗಳನ್ನು ಆರೆಸ್ಟ್ ಮಾಡಿದ್ದಾರೆ.
ಮುದುಗ ಗ್ರಾಮದ ನಿವಾಸಿ ವೇತನ್ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯಕ್ ಎಂಬವರನ್ನು ಎನ್ಐಎ ಅಧಿಕಾರಿಗಳು ಇದೀಗ ಅರೆಸ್ಟ್ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದುಗ ಗ್ರಾಮದಲ್ಲಿ ನಿನ್ನೆ ಇಬ್ಬರ ಬಗ್ಗೆಯೂ ಎನ್ಐಎ ತಂಡ ಮಾಹಿತಿ ಕಲೆಹಾಕಿತ್ತು.
ನೌಕಾನೆಲೆ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಕಾರವಾರಕ್ಕೆ ಭೇಟಿ ನೀಡಿದ್ದರು. 2024ರ ಅಗಸ್ಟ್ ತಿಂಗಳಲ್ಲಿ ಎನ್ಐಎ ಅಧಿಕಾರಿಗಳು ಮೂವರನ್ನು ವಿಚಾರಣೆ ನಡೆಸಿದ್ದರು. ಮೂವರ ವಿಚಾರಣೆ ನಡೆಸಿ ನೋಟಿಸ್ ನೀಡಿದ್ದರು. ಮುದುಗ ಗ್ರಾಮದ ವೇತನ್ ತಾಂಡೇಲ್, ತೋಳೂರಿನ ಸುನಿಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯಕನನ್ನು ಎನ್ಐಎ ವಿಚಾರಣೆ ನಡೆಸಿ ಬಿಟ್ಟಿದ್ದರು. ಇದೀಗ ಪ್ರಕರಣ ಸಂಬಂಧ ತನಿಖೆ ನಡೆಸಲು ಮತ್ತೆ ಅಧಿಕಾರಿಗಳು ಬಂದಿದ್ದಾರೆ.
ಶಂಕಿತ ಆರೋಪಿಗಳ ಹನಿಟ್ರ್ಯಾಪ್ ಮಾಡಿ ಮಾಹಿತಿ ಪಾಕಿಸ್ತಾನದ ಏಜೆಂಟರು ಇಲ್ಲಿನ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಹನಿಟ್ರ್ಯಾಪ್ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದ ಪಾಕಿಸ್ತಾನದ ಏಜೆಂಟ್, ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಫೇಸ್‌ಬುಕ್ ಮೂಲಕ ಇವರಿಬ್ಬರನ್ನು ಪರಿಚಯ ಮಾಡಿಕೊಂಡಿದ್ದ. ಈ ವೇಳೆ ವೇತನ್, ಸುನಿಲ್, ಅಕ್ಷಯ ನಾಯಕ್ ಮಾಹಿತಿ ಪಡೆದಿದ್ದರು. ಈ ಹಿಂದೆ ಕಾರವಾರದ ಚಂಡ್ಯದಲ್ಲಿರುವ ಮರ್ಕ್ಯೂರಿ ಹಾಗೂ ಅಲ್ಟ್ರಾಮರೈನ್ ಕಂಪನಿಯಲ್ಲಿ ವೇತನ್ ಮತ್ತು ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕುಡಿಯಬೇಡ ಎಂದು ಬುದ್ಧಿ ಹೇಳಿದ ಅತ್ತೆಗೆ ಸುತ್ತಿಗೆಯಿಂದ ಹೊಡೆದು ಕೊಂದು ಅಳಿಯ ಆತ್ಮಹತ್ಯೆ
ಚಿಕ್ಕಮಗಳೂರು: ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ ಅಳಿಯ ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತಿಬೈಲು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಕುಡಿಯಬೇಡ ಎಂದು ಉಪದೇಶ ನೀಡಿದ ಅತ್ತೆಯನ್ನು ಕೊಂದು ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತ್ತೆ ಯಮುನಾ (65) ಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಬಳಿಕ ಅಳಿಯ ಶಶಿಧರ್ (48) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಫಿ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಶಶಿಧರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾಫಿ ತೋಟದ ಕೆಲಸಕ್ಕೆ ಎಂದು ಯಮುನಾ ಮಗಳ ಮನೆಗೆ ಹೋಗಿದ್ದಾರೆ. ಈ ವೇಳೆ ಕುಡಿಯಬೇಡ ಎಂದು ಶಶಿಧರ್‌ಗೆ ಬುದ್ಧಿ ಹೇಳಿದ್ದಾರೆ. ಕುಡಿದ ಮತ್ತಿನಲ್ಲಿ ಶಶಿಧರ್ ಸುತ್ತಿಗೆಯಿಂದ ಅತ್ತಿಗೆ ಯಮುನಾ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ತಾನು ಮರಕ್ಕೆ ನೀಡು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Chandigarh Murder: ಆಪ್ ನಾಯಕನ ಪತ್ನಿ ಕೊಲೆಗೆ ಬಿಗ್ ಟ್ವಿಸ್ಟ್; ಗರ್ಲ್‌ಫ್ರೆಂಡ್ ಜೊತೆ ಸೇರಿ ಪತಿಯೇ ಸುಪಾರಿ ಕೊಟ್ಟ!