ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mumbai Crime: ಆನ್‌ಲೈನ್‌ ಮೂಲಕ ವೇಶ್ಯಾವಾಟಿಕೆ; ಧಾರಾವಾಹಿ ನಟಿ ಸೇರಿ ನಾಲ್ವರನ್ನು ರಕ್ಷಿಸಿದ ಪೊಲೀಸರು

Mumbai Crime: ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ಮಹಾರಾಷ್ಟ್ರದ ಪೊವಾಯಿ ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿದ್ದಾರೆ. ಈ ವೇಳೆ 60 ವರ್ಷದ 60 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.

ಆನ್‌ಲೈನ್‌ ಮೂಲಕ ವೇಶ್ಯಾವಾಟಿಕೆ; ನಾಲ್ವರನ್ನು ರಕ್ಷಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ.

Profile Ramesh B Mar 16, 2025 6:04 PM

ಮುಂಬೈ: 60 ವರ್ಷದ ವ್ಯಕ್ತಿಯನ್ನು ಬಂಧಿಸುವುದರೊಂದಿಗೆ ಮಹಾರಾಷ್ಟ್ರದ ಪೊವಾಯಿ ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿದ್ದಾರೆ. ಮಾ. 13ರಂದು ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಶ್ಯಾಮಸುಂದರ್‌ನನ್ನು ಬಂಧಿಸಿ ನಾಲ್ವರು ನಟಿಯರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ (Mumbai Crime). ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಲಾವಿದೆ ಸೇರಿ ನಾಲ್ವರನ್ನು ಪೊವಾಯಿ ಹೋಟೆಲ್‌ಗೆ ಕರೆತಂದಾಗ ಆತನನ್ನು ಬಂಧಿಸಲಾಗಿದೆ. ರಕ್ಷಿಸಲ್ಪಟ್ಟ ನಾಲ್ವರು ನಟಿಯರು 26ರಿಂದ 35 ವರ್ಷದೊಳಗಿನವರು ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂತ್ರಸ್ತರ ಪೈಕಿ ಓರ್ವ ಕಲಾವಿದೆ ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು ಎನ್ನಲಾಗಿದೆ. ಗ್ರಾಹಕರಿಂದ 3 ಲಕ್ಷ ರೂ. ಪಡೆಯುತ್ತಿದ್ದ ಶ್ಯಾಮಸುಂದರ್‌ ಅದರಲ್ಲಿ ಅರ್ಧದಷ್ಟನ್ನು ತಾನಿಟ್ಟುಕೊಂಡು ಉಳಿದವನ್ನು ನಟಿಯರಿಗೆ ಹಂಚುತ್ತಿದ್ದ. ಸದ್ಯ ಸಂತ್ರಸ್ತೆಯರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದ್ದು, ದಂಧೆಯ ದಲ್ಲಾಳಿ ಗೌರವ್‌ಗಾಗಿ ಹುಡುಕಾಟ ನಡೆಯುತ್ತಿದೆ.



ಎಫ್ಐಆರ್ ಪ್ರಕಾರ, ಅಂಧೇರಿ ನಿವಾಸಿ ಶ್ಯಾಮಸುಂದರ್ ವಾಟ್ಸ್‌ಆ್ಯಪ್‌ ಮೂಲಕ ದಂಧೆ ನಡೆಸುತ್ತಿದ್ದ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೋಟೆಲ್‌, ಅತಿಥಿ ಗೃಹಗಳಿಗೆ ರೂಪದರ್ಶಿಗಳು ಮತ್ತು ನಟಿಯರನ್ನು ಕಳುಹಿಸುತ್ತಿದ್ದ ಎಂದು ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದರು.

ಈ ಸುದ್ದಿಯನ್ನೂ ಓದಿ: Cable sparks row Tamil Nadu: ತಮಿಳುನಾಡಿನ ಸರ್ಕಾರಿ ಕೇಬಲ್‌ ಟಿವಿಯಲ್ಲಿ ಅಶ್ಲೀಲ ಸಿನಿಮಾ ಪ್ರಸಾರ; ಪ್ರಕರಣ ದಾಖಲು

ಪೊಲೀಸರ ಕಾರ್ಯಾಚರಣೆ ಹೇಗಿತ್ತು?

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗ ಇಳಿದ ಪೊಲೀಸರು ಮೊದಲು ಗ್ರಾಹಕನ ಸೋಗಿನಲ್ಲಿ ತಮ್ಮ ವ್ಯಕ್ತಿಯೊಬ್ಬರನ್ನು ದಲ್ಲಾಳಿಗಳ ಬಳಿ ಕಳುಹಿಸಿದ್ದರು. ಅವರು 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಶ್ಯಾಮಸುಂದರ್‌ ಗುರುವಾರ (ಮಾ. 13) ಮಧ್ಯಾಹ್ನ 12.30ಕ್ಕೆ ನಾಲ್ವರು ನಟಿಯರೊಂದಿಗೆ ಹಿರಾನಂದಾನಿ ಪ್ರದೇಶದ ಹೋಟೆಲ್‌ಗೆ ಬಂದಿದ್ದ. ಈ ವೇಳೆ ಪೊಲೀಸರು ದಾಳಿ ನಡೆಸಿದರು. ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಶ್ಯಾಮ್‌ಸುಂದರ್‌ ತಾನು ಗೌರವ್ ಸಹಾಯದಿಂದ ಆನ್‌ಲೈನ್‌ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶ್ಯಾಮಸುಂದರ್ ಮೊಬೈಲ್‌ ಪರಿಶೀಲಿಸಿದ್ದಾಗ ಆತನ ಸಂಪರ್ಕಗಳಲ್ಲಿ ಹಲವು ರೂಪದರ್ಶಿಗಳು ಮತ್ತು ನಟಿಯರು ಇದ್ದಾರೆ ಎನ್ನುವುದು ಎಂದು ತಿಳಿದು ಬಂದಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.