Cable sparks row Tamil Nadu: ತಮಿಳುನಾಡಿನ ಸರ್ಕಾರಿ ಕೇಬಲ್ ಟಿವಿಯಲ್ಲಿ ಅಶ್ಲೀಲ ಸಿನಿಮಾ ಪ್ರಸಾರ; ಪ್ರಕರಣ ದಾಖಲು
ತಮಿಳುನಾಡಿನಲ್ಲಿ ಸರ್ಕಾರಿ ಸ್ವಾಮ್ಯದ ಅರಸು ಕೇಬಲ್ ಟಿವಿ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ಖಾಸಗಿ ವಾಹಿನಿಯೊಂದು ಅಶ್ಲೀಲ ಚಿತ್ರವನ್ನು ಪ್ರಸಾರ ಮಾಡಿದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ. ಸೇಲಂ ಮೂಲದ ಖಾಸಗಿ ವಾಹಿನಿ ಅಶ್ಲೀಲ ಚಿತ್ರವನ್ನು ಪ್ರಸಾರ ಮಾಡಿದೆ. ಈ ಘಟನೆ ನಡೆಯುತ್ತಿದ್ದಂತೆ ಹಲವರು ದೂರು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡಿನಲ್ಲಿ (Cable sparks row Tamil Nadu) ಸರ್ಕಾರಿ ಸ್ವಾಮ್ಯದ ಅರಸು ಕೇಬಲ್ ಟಿವಿ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ಖಾಸಗಿ ವಾಹಿನಿಯೊಂದು ಅಶ್ಲೀಲ ಚಿತ್ರವನ್ನು ಪ್ರಸಾರ ಮಾಡಿದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ. ಗುರುವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಅಶ್ಲೀಲ ಚಿತ್ರವನ್ನು ಪ್ರದರ್ಶಿಸಲಾಗಿದೆ. ಸೇಲಂ ಮೂಲದ ಖಾಸಗಿ ವಾಹಿನಿ ಅಶ್ಲೀಲ ಚಿತ್ರವನ್ನು ಪ್ರಸಾರ ಮಾಡಿದೆ. ಈ ಘಟನೆ ನಡೆಯುತ್ತಿದ್ದಂತೆ ಹಲವರು ದೂರು ನೀಡಿದ್ದಾರೆ. ನಂತರ ವೀಕ್ಷಕರ ದೂರುಗಳ ನಂತರ ಪ್ರಸಾರವನ್ನು ನಿಲ್ಲಿಸಲಾಯಿತು.
ಇದು ಸೇಲಂ ಮೂಲದ ಸ್ಥಳೀಯ ಚಾನೆಲ್ ಆಗಿದ್ದು, ಅಶ್ಲೀಲ ಚಿತ್ರವನ್ನು ಇತರ ಜಿಲ್ಲೆಗಳಲ್ಲಿ ಪ್ರಸಾರ ಮಾಡಲಾಗಿದೆಯೇ ಎಂದು ಪರಿಶೀಲನೆ ನಡೆಸಿದಾಗ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಧರ್ಮಪುರಿಯ ಅರಸು ಕೇಬಲ್‌ನ ವಿಶೇಷ ತಹಶೀಲ್ದಾರ್ ರಾಜರಾಜನ್,, ಅಶ್ಲೀಲ ಚಿತ್ರ ಪ್ರಸಾರವಾಗುತ್ತಿರುವ ವಿಷಯದ ಬಗ್ಗೆ ನಮಗೆ ತಿಳಿದಿರಲಿಲ್ಲ. ಸುಳಿವು ನೀಡಿದ ನಂತರ, ನಾವು ತಕ್ಷಣ ಕೇಬಲ್ ಆಪರೇಟರ್‌ಗಳನ್ನು ಸಂಪರ್ಕಿಸಿ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದ್ದಾರೆ. ಅಧಿಕಾರಿಗಳ ತಂಡ ಸೇಲಂಗೆ ಹೋಗಿ ಚಾನೆಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ.
ಕೇಬಲ್ ಆಪರೇಟರ್‌ಗಳ ಮೇಲೆ ಹೆಚ್ಚು ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಮತ್ತು ದೂರದರ್ಶನದಲ್ಲಿ ಕಾರ್ಯಕ್ರಮ ಹೇಗೆ ಪ್ರಸಾರವಾಯಿತು ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಾಜ್ಯಾದ್ಯಂತ ಕೇಬಲ್ ಸೇವೆಗಳನ್ನು ಒದಗಿಸುವ ತಮಿಳುನಾಡು ಅರಸು ಕೇಬಲ್ ಟಿವಿ ಕಾರ್ಪೊರೇಷನ್ ಲಿಮಿಟೆಡ್, ಘಟನೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಹಾಗೂ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಆಂತರಿಕ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Viral News: ತರಗತಿಯಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡಿದ ಈ ಶಿಕ್ಷಕ; ಮುಂದೇನಾಯ್ತು ಗೊತ್ತಾ..?
ಈ ಘಟನೆಯು ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ ಸೆನ್ಸಾರ್‌ಶಿಪ್ ಮತ್ತು ವಿಷಯ ನಿಯಂತ್ರಣ ನೀತಿಗಳ ಬಗ್ಗೆ ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದ್ದು, ಖಾಸಗಿ ನಿರ್ವಾಹಕರು ಕೆಲವು ಸ್ವಾಯತ್ತತೆಯನ್ನು ಹೊಂದಿದ್ದರೂ, ರಾಜ್ಯ ಬೆಂಬಲಿತ ವೇದಿಕೆಗಳು ಹೆಚ್ಚು ಕಠಿಣ ಸ್ಕ್ರೀನಿಂಗ್ ಕಾರ್ಯವಿಧಾನಗಳನ್ನು ಜಾರಿಗೆ ತರಬೇಕು ಎಂಬುದು ಹಲವರ ವಾದವಾಗಿದೆ.