ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಲವ್ವರ್‌ ಜತೆಗೂಡಿ ಪತಿಗೇ ಮುಹೂರ್ತ ಫಿಕ್ಸ್‌ ಮಾಡಿದ ಪತ್ನಿ; ಬೈಕ್‌ನಲ್ಲಿ ಡೆಡ್‌ಬಾಡಿ ಸಾಗಿಸಿದ ಪಾಪಿಗಳು- ವಿಡಿಯೊ ಇದೆ

ಅನೈತಿಕ ಸಂಬಂಧದ ಬಗ್ಗೆ ಪತಿ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು (Murder Case) ಗೋಣಿಚೀಲದಲ್ಲಿ ಶವವನ್ನು ಕಟ್ಟಿಕೊಂಡು ಬೈಕಿನಲ್ಲಿ ಸಾಗಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಪರಾರಿಯಾದ ಪ್ರಿಯಕರನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.

ಪತಿಯನ್ನು ಕೊಂದು ಬೈಕ್‌ನಲ್ಲಿ ಹೆಣ ಸಾಗಿಸಿದ ಪಾತಕಿ

Profile pavithra Mar 20, 2025 5:39 PM

ಜೈಪುರ: ಮೀರತ್‌ನಲ್ಲಿ ಮರ್ಚೆಂಟ್‌ ನೇವಿ ಅಧಿಕಾರಿ ಹತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ವಿವಾಹೇತರ
ಸಂಬಂಧದ ಬಗ್ಗೆ ಪತಿ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ಕೊಲೆ(Murder Case) ಮಾಡಿರುವ ಘಟನೆ ಜೈಪುರದಲ್ಲಿ ನಡೆದಿದೆ. ಅವರು ಮೃತನ ದೇಹವನ್ನು ಬೈಕಿನಲ್ಲಿ ಸಾಗಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ನಂತರ ಇಬ್ಬರು ಶಂಕಿತರು ಪುರಾವೆಗಳನ್ನು ನಾಶಮಾಡಲು ದೇಹವನ್ನು ಸುಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಪರಾರಿಯಾದ ಪ್ರಿಯಕರನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.

ಮೃತ ವ್ಯಕ್ತಿಯನ್ನು ಧನ್ನಾಲಾಲ್ ಸೈನಿ ಎಂಬುದಾಗಿ ಗುರುತಿಸಲಾಗಿದೆ. ಆತನ ಪತ್ನಿ ಗೋಪಾಲಿ ದೇವಿ ಐದು ವರ್ಷಗಳಿಂದ ದೀನ್ ದಯಾಳ್ ಕುಶ್ವಾಹ ಅವನೊಂದಿಗೆ ಸಂಬಂಧ ಹೊಂದಿದ್ದಳಂತೆ. ಕುಶ್ವಾಹ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆದರೆ ಆಕೆ ಪತಿಯ ಬಳಿ ಆತ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಳು. ತರಕಾರಿ ಮಾರಾಟಗಾರ ಸೈನಿ ಇತ್ತೀಚೆಗೆ ಪತ್ನಿ ಎಲ್ಲಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದಾಗ ಅಲ್ಲಿ ಅವರಿಬ್ಬರು ಒಟ್ಟಿಗೆ ಇರುವುದನ್ನು ನೋಡಿ ಕೋಪಗೊಂಡ ಅವರ ಜೊತೆ ಜಗಳಕ್ಕೀಳಿದಿದ್ದಾನೆ.

ಬೈಕಿನಲ್ಲಿ ಶವ ಸಾಗಿಸುತ್ತಿರುವ ದೃಶ್ಯ ಇಲ್ಲಿದೆ ನೋಡಿ...



ನಂತರ ಆರೋಪಿಗಳು ಸಂತ್ರಸ್ತನನ್ನು ಪುಸಲಾಯಿಸಿ ಮೇಲಿನ ಮಹಡಿಯಲ್ಲಿರುವ ಮತ್ತೊಂದು ಅಂಗಡಿಗೆ ಕರೆದೊಯ್ದು ಅಲ್ಲಿ ಅವರು ಕಬ್ಬಿಣದ ಪೈಪ್‍ನಿಂದ ಅವನ ತಲೆಗೆ ಹೊಡೆದು ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಅವರು ಶವವನ್ನು ಪ್ಲಾಸ್ಟಿಕ್ ಗೋಣಿಚೀಲದಲ್ಲಿ ಪ್ಯಾಕ್ ಮಾಡಿ, ಬೈಕಿನಲ್ಲಿ ಸಾಗಿಸುವಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು.

ರಿಂಗ್ ರಸ್ತೆಯ ಬಳಿ, ಅವರು ಶವವನ್ನು ಇಳಿಸಿ ಬೆಂಕಿ ಹಚ್ಚಿದ್ದಾರೆ. ಆದರೆ ಕಾರೊಂದು ಅವರಿದ್ದ ಕಡೆ ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಓಡಿಹೋಗಿದ್ದಾರೆ. ಇದರಿಂದ ದೇಹವು ಅರ್ಧ ಸುಟ್ಟುಹೋಗಿತ್ತು. ಅರ್ಧ ಸುಟ್ಟ ದೇಹವು ಮುಖ್ಯ ರಸ್ತೆಯ ಬಳಿ ಪೊಲೀಸರಿಗೆ ಪತ್ತೆಯಾದರೂ ಶವದ ಗುರುತನ್ನು ಪತ್ತೆಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಎರಡು ದಿನಗಳ ನಂತರ ಅದನ್ನು ಗುರುತಿಸಲು ಸಾಧ್ಯವಾಯಿತು. ನಂತರ ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ. ಆದರೆ ಕುಶ್ವಾಹ ಪರಾರಿಯಾಗಿದ್ದು, ಅವನನ್ನು ಪತ್ತೆಹಚ್ಚಲು ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರ ಮುಂದೆಯೇ ಹಸ್ತಮೈಥುನ ಮಾಡಿಕೊಂಡ ಕಿಡಿಗೇಡಿ; ವಿಡಿಯೊ ವೈರಲ್

ಸೌರಭ್ ರಜಪೂತ್ ಬರ್ಬರ ಹತ್ಯೆ!

ಪ್ರಿಯಕರನ ಜೊತೆ ಸೇರಿ ಪತ್ನಿಯೊಬ್ಬಳು ಪತಿಯನ್ನು ಕೊಲೆ ಮಾಡಿದ ಮತ್ತೊಂದು ಘಟನೆ ಎರಡು ದಿನಗಳ ಹಿಂದೆಯಷ್ಟೇ ವರದಿಯಾಗಿತ್ತು. ಲಂಡನ್‍ನಲ್ಲಿ ಖಾಸಗಿ ಹಡಗಿನ ಕಂಪೆನಿಯಲ್ಲಿ ನೇವಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸೌರಭ್ ರಜಪೂತ್ ಅನ್ನು ಆತನ ಪತ್ನಿ ಮುಸ್ಕಾನ್‌ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿಕೊಂಡು ಷಡ್ಯಂತ್ರ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆಯೊಂದು ನಡೆದಿತ್ತು. ನಂತರ ಅವರು ಸೌರಭ್ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಿಮೆಂಟ್ ತುಂಬಿ ಶವವನ್ನು ಮುಚ್ಚಿಟ್ಟಿದ್ದಾರೆ. ಸೌರಭ್ ಕಾಣೆಯಾದ ಬಗ್ಗೆ ಅವನ ಮನೆಯವರು ದೂರು ನೀಡಿದ ಕಾರಣ ಪೊಲೀಸರು ಕಾಣೆಯಾಗಿದ್ದ ಸೌರಭ್ ಹುಡುಕಾಟದಲ್ಲಿದ್ದಾಗ ತನಿಖೆಯ ವೇಳೆ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಆತನ ಕೊಳೆತ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.