ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Travel Fashion: ಉಲ್ಲಾಸ ನೀಡುವಂತಹ ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ ನಿಮ್ಮದಾಗಲಿ

Summer Travel Fashion: ಬೇಸಿಗೆಯಲ್ಲಿ ಮಾನಿನಿಯರು ಪ್ರಯಾಣ ಮಾಡಬೇಕಾದ ಸಂದರ್ಭ ಬಂದಾಗ ಆದಷ್ಟೂ ಬಿಸಿಲ ಝಳಕ್ಕೆ ಹೊಂದುವಂತಹ ಕಂಫರ್ಟಬಲ್‌ ಕೂಲ್‌ ಫ್ಯಾಷನ್‌ ತಮ್ಮದಾಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆರಾಮದಾಯಕವಲ್ಲದ ಪ್ರಯಾಣ ನಿಮ್ಮದಾಗಬಹುದು. ಇದಕ್ಕಾಗಿ ಯಾವ ಬಗೆಯ ಫ್ಯಾಷನ್‌ವೇರ್ಸ್‌ ಚೂಸ್‌ ಮಾಡಬೇಕು? ಯಾವುದನ್ನು ಆವಾಯ್ಡ್‌ ಮಾಡಬೇಕು? ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಪರ್ಟ್ಸ್‌ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

ಉಲ್ಲಾಸ ನೀಡುವಂತಹ ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ ನಿಮ್ಮದಾಗಲಿ

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ ಈಗಾಗಲೇ ಲಗ್ಗೆ ಇಟ್ಟಿದ್ದು, ಆರಾಮದಾಯಕ ಎಂದೆನಿಸುವ ನಾನಾ ಬಗೆಯ ಸಮ್ಮರ್‌ ಫ್ಯಾಷನ್‌ವೇರ್‌ಗಳು ಫ್ಯಾಷನ್‌ಲೋಕದಲ್ಲಿ (Summer Travel Fashion) ಹಂಗಾಮ ಎಬ್ಬಿಸಿವೆ. ಫ್ಯಾಷನ್‌ ಎಕ್ಸ್‌ಪರ್ಟ್ಸ್‌ ಪ್ರಕಾರ, ಪ್ರತಿ ಸಮ್ಮರ್‌ನಲ್ಲೂ ಟ್ರಾವೆಲ್‌ ಮಾಡುವುದು ಸಾಕುಸಾಕಪ್ಪ ಎಂದನಿಸುತ್ತದೆ. ಧರಿಸಿರುವ ಉಡುಪು ಆಕ್ಸೆಸರೀಸ್‌ಗಳು ಕೆಲವೊಮ್ಮೆ ಉಸಿರುಗಟ್ಟಿಸುತ್ತವೆ. ಹೇರ್‌ಸ್ಟೈಲ್‌ ಕಿರಿಕಿರಿಯುಂಟು ಮಾಡುತ್ತವೆ. ಮುಖ ಬೆವೆತು ಮೇಕಪ್‌ ನೀರಾಗುತ್ತದೆ. ಕಂಫರ್ಟಬಲ್‌ ಪದ ಉಲ್ಟಾ ಹೊಡೆಯುತ್ತದೆ. ಸೋ, ಸಮ್ಮರ್‌ನಲ್ಲಿ ಆದಷ್ಟೂ ಸಿಂಪಲ್‌ ಹಾಗೂ ಕಂಫರ್ಟಬಲ್‌ ಸ್ಟೈಲಿಂಗ್‌ ಉತ್ತಮ ಎನ್ನುತ್ತಾರೆ ಅವರು.

1

ಪರ್ಫೆಕ್ಟಾಗಿರಲಿ ಡಿಸೈನರ್‌ವೇರ್‌

ಟ್ರಾವೆಲ್‌ ಮಾಡುವಾಗ ಧರಿಸುವ ಉಡುಪು ಸಮ್ಮರ್‌ಗೆ ಸೂಟ್‌ ಆಗುವಂತಿರಬೇಕು. ಅದರಲ್ಲೂ ಬೇಸಿಗೆಯ ಬಿರು ಬಿಸಿಲಿಗೆ ಅಂಟುವಂತಿರಬಾರದು. ಆದಷ್ಟೂ ಹಗುರವಾದ, ಆರಾಮ ಏನಿಸುವ ಉಡುಪುಗಳನ್ನು ಪ್ರಿಫರ್‌ ಮಾಡಬೇಕು. ಶಾರ್ಟ್‌ ಹಾಗೂ ಸ್ಲಿವ್‌ಲೆಸ್‌ಗೆ ಆದ್ಯತೆ ನೀಡಿದರೆ ಉತ್ತಮ. ಅದರಲ್ಲೂ ಸಿಂಪಲ್‌ ಕ್ಯಾಶುಯಲ್‌ವೇರ್‌ ಆಯ್ಕೆ ಮಾಡುವುದು, ಆದಷ್ಟೂ ಸೀರೆ ಹಾಗೂ ಗಾಗ್ರ, ಲೆಹೆಂಗಾದಂತಹ ಉಡುಪುಗಳಿಗೆ ಬೈ ಹೇಳುವುದು ಬೆಸ್ಟ್‌. ಇನ್ನು, ಪ್ರಯಾಣಿಸುವಾಗ ಆದಷ್ಟೂ ಉಲ್ಲಾಸ ತುಂಬುವ ಶೇಡ್ಸ್‌, ಕಲರ್ಸ್‌ ಚೂಸ್‌ ಮಾಡಿ. ನಿಯಾನ್‌ ಫ್ಲೋರಲ್ಸ್‌ ಹಾಗೂ ಪೀಚ್‌, ಬೇಬಿ ಪಿಂಕ್‌, ಬ್ಲ್ಯೂ ಕಲರ್ಸ್‌ನದ್ದು ಧರಿಸುವುದು ಉತ್ತಮ ಎನ್ನುತ್ತಾರೆ.

ಈ ಉಡುಗೆಗಳಿಗೆ ನೋ ಹೇಳಿ

ಇನ್ನು, ಕಾಲರ್‌ ನೆಕ್‌, ಟೈಟ್‌ ಫಿಟ್ಟಿಂಗ್‌, ಮೈಗೆ ಅಂಟಿಕೊಳ್ಳುವಂತಹ ಹಗ್ಗಿಂಗ್‌ ಡ್ರೆಸ್‌, ಫುಲ್‌ ಸ್ಲೀವ್‌ ಸಲ್ವಾರ್‌, ಲಾಂಗ್‌ ಸಲ್ವಾರ್‌ ಸೇರಿದಂತೆ ಅಡಿಯಿಂದ ಮುಡಿಯವರೆಗೆ ಗಾಳಿಯಾಡದಂತೆ ಕ್ಲೋಸ್‌ ಆಗಿರುವಂತಹ ಉಡುಪುಗಳು ಬೇಸಿಗೆ ಟ್ರಾವೆಲ್‌ ಟೈಮ್‌ಗೆ ಯಾವುದೇ ಕಾರಣಕ್ಕೂ ಆಯ್ಕೆ ಮಾಡಿಕೊಳ್ಳಬೇಡಿ. ಇವು ಉಸಿರುಗಟ್ಟಿಸುವುದರೊಂದಿಗೆ ನಿಮ್ಮನ್ನು ನಿತ್ರಾಣರಾಗಿಸುತ್ತವೆ ಎನ್ನುತ್ತಾರೆ ಮಾಡೆಲ್‌ ದೀಪ್ತಿ.

2

ಹೆವ್ವಿ ಆಕ್ಸೆಸರೀಸ್‌ಗೆ ಗುಡ್‌ಬೈ ಹೇಳಿ

ಈ ಸೀಸನ್‌ನಲ್ಲಿ, ಅದರಲ್ಲೂ ಟ್ರಾವೆಲ್‌ ಮಾಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಭಾರಿ ಆಭರಣಗಳನ್ನು ಧರಿಸಬೇಡಿ. ಅದರಲ್ಲೂ ಬಂಗಾರವನ್ನು ದೂರವಿಡಿ. ಇವು ಮೈ ಮೇಲೆ ಭಾರವೆನಿಸುತ್ತವೆ. ಜತೆಗೆ ಕಂಫರ್ಟಬಲ್‌ ಆಗಿರುವುದಿಲ್ಲ. ತೀರಾ ಬಂಗಾರದ್ದೇ ಧರಿಸುವಾಗ ಸಿಂಪಲ್‌ ಸ್ಟಡ್ಸ್‌ ಹಾಗೂ ಚೈನ್‌ ಚೂಸ್‌ ಮಾಡಿ. ಜಂಜಾಟವಿರುವುದಿಲ್ಲ. ಜತೆಗೆ ತಲೆಬಿಸಿ ಇರುವುದಿಲ್ಲ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ಅರ್ಚನಾ ಕೇಸರಿ.

ಫುಟ್‌ವೇರ್‌ ಚಾಯ್ಸ್‌ ಹೀಗಿರಲಿ

ಯಾವುದೇ ಕಾರಣಕ್ಕೂ ಫುಲ್‌ ಬೂಟ್ಸ್‌ ಅಥವಾ ಆಫ್‌ ಶೂಗಳಂತವನ್ನು ಟ್ರಾವೆಲ್‌ ಸಮಯದಲ್ಲಿ ಆವಾಯ್ಡ್‌ ಮಾಡಿ. ಇವು ಪಾದವನ್ನು ಕವರ್‌ ಮಾಡುವುದರಿಂದ ಗಾಳಿಯಾಡಲು ಅವಕಾಶ ಸಿಗದೇ ಪಾದಗಳು ಜಡ್ಡು ಹಿಡಿದಂತೆ ಆಗಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಫ್ಲಿಪ್‌ ಫ್ಲಾಪ್‌ ಚಪ್ಪಲಿಗಳು, ಒಪನ್‌ ಸ್ಟ್ರಾಪ್‌ ಸ್ಯಾಂಡಲ್‌ಗಳು, ಹೊಸ ಬಗೆಯ ಹೆಚ್ಚು ಸ್ಟ್ರಾಪ್‌ ಇಲ್ಲದ ವೆಡ್ಜಸ್‌ ಧರಿಸಬಹುದು. ಶೂ ಧರಿಸುವುದನ್ನು ತೊರೆಯಲಾರದವರು ಇದೀಗ ಬಿಡುಗಡೆಯಾಗಿರುವ ಓಪನ್‌ ಶೂ ವೆಡ್ಜೆಸ್‌ನಂತವನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಸಾಕ್ಸ್‌ ಧರಿಸುವುದನ್ನು ಆವೈಡ್‌ ಮಾಡುವುದು ಉತ್ತಮ.

3

ನೋ ಟು ಹೆವ್ವಿ ಮೇಕಪ್‌

ಬೇಸಿಗೆಯಲ್ಲಿ ಟ್ರಾವೆಲ್‌ ಮಾಡುವಾಗ ಆದಷ್ಟು ಸಿಂಪಲ್‌ ಮೇಕಪ್‌ ನಿಮ್ಮದಾಗಿರಲಿ. ತೀರಾ ಮೇಕಪ್‌ ಇಲ್ಲದೇ ಹೊರಗೆ ಹೋಗುವ ಅಭ್ಯಾಸವಿಲ್ಲದಿದ್ದ್ದಲ್ಲಿ ಸೀಸನ್‌ ಮೇಕಪ್‌ ಮಿನರೆಲ್‌ ಮೇಕಪ್‌ಗೆ ಮೊರೆ ಹೋಗಿ. ಮುಖ ಬೆವರಿದರೆ ಸ್ವೆಟ್‌ ಟಿಶ್ಯೂ ಜತೆಯಲ್ಲಿಟ್ಟುಕೊಳ್ಳಿ. ಹಾಗೆಂದು ಕಂಡ ಕಂಡ ಕಡೆಯೆಲ್ಲಾ ಮುಖ ತೊಳೆಯುವುದನ್ನು ರೂಢಿಸಿಕೊಳ್ಳಬೇಡಿ. ಕೆಲವೊಮ್ಮೆ ನೀರಿನಿಂದ ಮುಖ ತೀರಾ ಡ್ರೈ ಆಗುವ ಸಂದರ್ಭವಿರುತ್ತದೆ. ಒಂದು ದಿನಕ್ಕಿಂತ ಹೆಚ್ಚು ಸಮಯ ಟ್ರಾವೆಲ್‌ನಲ್ಲಿ ಕಳೆಯಬೇಕಾದಲ್ಲಿ, ಹೊರದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿಕಣ್ಣಿಗೆ ಕಾಡಿಗೆ ಬಳಸುವುದನ್ನು ಅವಾಯ್ಡ್‌ ಮಾಡಿ. ಸನ್‌ ಟ್ಯಾನ್‌ ಆಗದಂತೆ ನೋಡಿಕೊಳ್ಳಿ. ಫುಲ್‌ ಸ್ಲೀವ್‌ ಧರಿಸಬೇಕಾದಲ್ಲಿ ಶೀರ್‌ ಫ್ಯಾಷನ್‌ಗೆ ಮೊರೆ ಹೋಗಿ ಎನ್ನುತ್ತಾರೆ ಮೇಕಪ್‌ ಎಕ್ಸ್‌ಪರ್ಟ್ಸ್.

ಸಮ್ಮರ್‌ ಟ್ರಾವೆಲ್‌ ಪ್ರಿಯರಿಗೆ ಒಂದಿಷ್ಟು ಟಿಪ್ಸ್‌

* ಭಾರಿ ತೂಕದ ಜಾಕೆಟ್‌ ಸ್ಕಾರ್ಫ್‌, ಕೋಟ್‌ ಧರಿಸಬೇಡಿ.

* ಲೇಯರ್‌ ಲುಕ್‌ ನೀಡಲೇಬೇಕಾದ ಸಂದರ್ಭದಲ್ಲಿ ಶೀರ್‌ ಮೆಟೀರಿಯಲ್‌ನದ್ದು ಬಳಸಿ.

* ಸನ್‌ಸ್ಕ್ರೀನ್‌ ಹಾಗೂ ಮಾಯಿಶ್ಚರೈಸರ್‌ ಜತೆಗಿರಲಿ.

* ನಿಯಾನ್‌ ಹಾಗೂ ಬ್ರೈಟ್‌ ಪ್ಲೋರಲ್‌ ಟ್ರೆಂಡಿ ಉಡುಪುಗಳ ಆಯ್ಕೆ ಮಾಡಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)