Ramayana: ಪಾಕಿಸ್ತಾನದ ನೆಲದಲ್ಲಿ'ರಾಮಾಯಣ' ನಾಟಕ ಪ್ರದರ್ಶನ; ಇದೇನಪ್ಪಾ ಅಚ್ಚರಿ!
Ramayana in Pakistan: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕರಾಚಿಯಲ್ಲಿ ‘ಮೌಜ್’ ರಂಗಭೂಮಿ ತಂಡವು ಭಾರತೀಯ ಮಹಾಕಾವ್ಯ ರಾಮಾಯಣವನ್ನು ರಂಗಮಂಚದಲ್ಲಿ ಜೀವಂತಗೊಳಿಸಿದ್ದು, ಕೃತಕ ಬುದ್ಧಿಮತ್ತೆ ಮೂಲಕ ಪ್ರಸ್ತುಗೊಂಡ ಕಥನಕ್ಕಾಗಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಕರಾಚಿ ಕಲಾ ಮಂಡಳಿಯಲ್ಲಿ ಕಳೆದ ವಾರಾಂತ್ಯದಲ್ಲಿ ಪ್ರದರ್ಶನಗೊಂಡ ಈ ನಾಟಕ, ಪಾಕಿಸ್ತಾನದ ಮುಖ್ಯವಾಹಿನಿಯ ಕಲಾ ಕ್ಷೇತ್ರದಲ್ಲಿ ಹಿಂದೂ ಪುರಾಣವನ್ನು ಚಿತ್ರಿಸಿದ ಅಪರೂಪದ ಘಟನೆಯಾಗಿದೆ.


ಕರಾಚಿ: ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದ ಕರಾಚಿಯಲ್ಲಿ (Karachi) ‘ಮೌಜ್’ ರಂಗಭೂಮಿ ತಂಡವು ಭಾರತೀಯ ಮಹಾಕಾವ್ಯ ರಾಮಾಯಣವನ್ನು (Ramayana) ರಂಗಮಂಚದಲ್ಲಿ ಜೀವಂತಗೊಳಿಸಿದ್ದು, ಕೃತಕ ಬುದ್ಧಿಮತ್ತೆ (Artificial Intelligence) ಮೂಲಕ ಪ್ರಸ್ತುಗೊಂಡ ಕಥನಕ್ಕಾಗಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಕರಾಚಿ ಕಲಾ ಮಂಡಳಿಯಲ್ಲಿ ಕಳೆದ ವಾರಾಂತ್ಯದಲ್ಲಿ ಪ್ರದರ್ಶನಗೊಂಡ ಈ ನಾಟಕ, ಪಾಕಿಸ್ತಾನದ ಮುಖ್ಯವಾಹಿನಿಯ ಕಲಾ ಕ್ಷೇತ್ರದಲ್ಲಿ ಹಿಂದೂ ಪುರಾಣವನ್ನು ಚಿತ್ರಿಸಿದ ಅಪರೂಪದ ಘಟನೆಯಾಗಿದೆ.
ಯೋಗೇಶ್ವರ್ ಕರೇರಾ ನಿರ್ದೇಶನದ ಈ ನಾಟಕವು AI ತಂತ್ರಜ್ಞಾನವನ್ನು ಬಳಸಿ ದೃಶ್ಯ ಕಥನ, ಬೆಳಕಿನ ವಿನ್ಯಾಸ ರಾಮಾಯಣಕ್ಕೆ ಆಧುನಿಕ ಆಕರ್ಷಣೆ ನೀಡಿದ್ದು, "ರಾಮಾಯಣವನ್ನು ರಂಗದ ಮೇಲೆ ಜೀವಂತಗೊಳಿಸುವ ದೃಶ್ಯ ನೋಡುಗರ ಕಣ್ಣಿಗೆ ರಸದೌತಣ ನೀಡಿದಂತಾಗಿದೆ. ಪಾಕಿಸ್ತಾನ ಸಮಾಜವು ಊಹಿಸಿದ್ದಕ್ಕಿಂತ ಸಹಿಷ್ಣು ಎಂದು ಇದು ತೋರಿಸುತ್ತದೆ" ಎಂದು ಕರೇರಾ ಹೇಳಿದ್ದಾರೆ. ಈ ಪ್ರದರ್ಶನಕ್ಕೆ ಯಾವುದೇ ವಿರೋಧ ಬರಲಿಲ್ಲ ಎಂದು ಅವರು ತಿಳಿಸಿದ್ದಾರೆ.
Performance of Ramayan in Karachi, Pakistan pic.twitter.com/6kciamWJap
— Sabahat Zakariya (@sabizak) July 13, 2025
ನಾಟಕಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೀತೆಯ ಪಾತ್ರಧಾರಿಯಾದ ನಿರ್ಮಾಪಕಿ ರಾನಾ ಕಾಜ್ಮಿ, "ಪುರಾತನ ಕಥೆಯನ್ನು ಸ್ಥಳೀಯರಿಗೆ ಜೀವಂತ ಅನುಭವವಾಗಿಸುವ ಕಲ್ಪನೆ ನನ್ನನ್ನು ಸೆಳೆಯಿತು" ಎಂದಿದ್ದಾರೆ. ಕರೇರಾ ಮತ್ತು ಕಾಜ್ಮಿ, ಬಾಲ್ಯದಿಂದಲೂ ರಂಗಭೂಮಿಯ ಒಲವು ಹೊಂದಿದ್ದವರು, ಈ ತಂಡವನ್ನು ಕಟ್ಟಿ ರಾಮಾಯಣವನ್ನು ಕಳೆದ ನವೆಂಬರ್‌ನಲ್ಲಿ ಎರಡನೇ ಮಹಡಿಯ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಿದ್ದರು.
ಈ ಸುದ್ದಿಯನ್ನು ಓದಿ: Shubhanshu Shukla: ಭೂಮಿಯತ್ತ ಪ್ರಯಾಣ ಆರಂಭಿಸಿದ ಶುಭಾಂಶು ಶುಕ್ಲಾ- 22 ಗಂಟೆಗಳ ಸುದೀರ್ಘ ಯಾತ್ರೆ!
ನಾಟಕವು ಜನಪ್ರಿಯತೆ ಗಳಿಸಿದ ಬಳಿಕ, AIಯ ಸಹಾಯದಿಂದ ದೃಶ್ಯಗಳನ್ನು ಇನ್ನಷ್ಟು ವರ್ಣಮಯಗೊಳಿಸಲಾಗಿದೆ. ಕರಾಚಿ ಕಲಾ ಮಂಡಳಿಯಲ್ಲಿ ಮೂರು ದಿನಗಳ ಕಾಲ ಪ್ರದರ್ಶನಗೊಂಡ ಈ ನಾಟಕವನ್ನು ಸ್ಥಳೀಯರು ಮತ್ತು ಗಣ್ಯರು ಶ್ಲಾಘಿಸಿದ್ದಾರೆ. ಪಾಕಿಸ್ತಾನದಲ್ಲಿ ರಾಮಾಯಣದ ಪ್ರದರ್ಶನವು ಸಾಂಸ್ಕೃತಿಕ ಸಮ್ಮಿಲನವನ್ನು ಉತ್ತೇಜಿಸಿದ್ದು, ಭಾರತ-ಪಾಕ್ ಸಂಬಂಧಗಳಿಗೆ ಹೊಸ ಆಯಾಮ ನೀಡಿದೆ.