ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Model San Rechal: ಮಾಜಿ ಮಿಸ್ ಪುದುಚೇರಿ, ಖ್ಯಾತ ಮಾಡೆಲ್ ಸ್ಯಾನ್ ರಾಚೆಲ್ ಆತ್ಮಹತ್ಯೆ

ಪುದುಚೇರಿಯಲ್ಲಿ ಮಾಡೆಲ್ ಸನ್ ರೆಚಲ್ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಪ್ರಶಸ್ತಿಯನ್ನು ಇವರು ಗೆದ್ದಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ರಾಚೆಲ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಮಿಸ್ ಡಾರ್ಕ್ ಕ್ವೀನ್ ಪ್ರಶಸ್ತಿ ಗೆದ್ದಿದ್ದ ಮಾಡೆಲ್‌ ಆತ್ಮಹತ್ಯೆಗೆ ಶರಣು

ಸ್ಯಾನ್ ರಾಚೆಲ್

Profile Sushmitha Jain Jul 14, 2025 10:15 PM

ಪುದುಚೇರಿ: ಮಾಜಿ ಮಿಸ್ ಪುದುಚೇರಿ (Former Miss Puducherry) ಮತ್ತು ಜನಪ್ರಿಯ ಮಾಡೆಲ್ ಸ್ಯಾನ್ ರಾಚೆಲ್ (26) (San Rechal) ಭಾನುವಾರ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯಿಂದ ಒಂದು ಸೂಸೈಡ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದ ರಾಚೆಲ್, ಕರಮನಿಕುಪ್ಪಂನ (Karamanikuppam) ತಮ್ಮ ಮನೆಯಲ್ಲಿ ತಂದೆಯನ್ನು ಭೇಟಿಯಾದ ಬಳಿಕ ಅತಿಯಾದ ರಕ್ತದೊತ್ತಡದ ಮಾತ್ರೆಗಳನ್ನು ಸೇವಿಸಿದ್ದಾರೆ.

ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕೊನೆಗೆ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್‌ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್‌ನಲ್ಲಿ (JIPMER) ಆಕೆ ಕೊನೆಯುಸಿರೆಳೆದರು.

2022ರಲ್ಲಿ ಮಿಸ್ ಪುದುಚೇರಿ ಪಟ್ಟ ಗಳಿಸಿದ್ದ ರಾಚೆಲ್, ಇತ್ತೀಚೆಗೆ ವಿವಾಹವಾಗಿದ್ದರು. ಚಿತ್ರರಂಗ ಮತ್ತು ಫ್ಯಾಷನ್ ಉದ್ಯಮದಲ್ಲಿ ಕಪ್ಪು ಬಣ್ಣದವರಿಗೆ ಎದುರಾಗುವ ತಾರತಮ್ಯದ ವಿರುದ್ಧ ಧ್ವನಿಯಾಗಿದ್ದ ಆಕೆ, ಈ ಕುರಿತು ಸಾರ್ವಜನಿಕವಾಗಿ ಮಾತನಾಡಿದ್ದರು. ಶಂಕರಪ್ರಿಯ ಎಂದೂ ಕರೆಯಲ್ಪಡುತ್ತಿದ್ದ ರಾಚೆಲ್, ಮಿಸ್ ಪಾಂಡಿಚೇರಿ, ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಮತ್ತು ಬ್ಲಾಕ್ ಬ್ಯೂಟಿ ವಿಭಾಗದಲ್ಲಿ ಮಿಸ್ ವರ್ಲ್ಡ್ ಸೇರಿದಂತೆ ಹಲವು ಸೌಂದರ್ಯ ಪ್ರಶಸ್ತಿಗಳನ್ನು ಗೆದ್ದಿದ್ದರು.

ಈ ಸುದ್ದಿಯನ್ನು ಓದಿ: Viral Video: ಸ್ಮಶಾನದಲ್ಲಿ ವಿವಾಹಿತ ಮಹಿಳೆಯೊಂದಿಗೆ ಬಿಜೆಪಿ ನಾಯಕನ ರಾಸಲೀಲೆ; ಕ್ಯಾಮರಾ ಕಣ್ಣಲ್ಲಿ ಸೆರೆ

ಪೊಲೀಸರ ಪ್ರಕಾರ, ಭಾರೀ ಆರ್ಥಿಕ ಮತ್ತು ವೈಯಕ್ತಿಕ ಒತ್ತಡಗಳು ಆಕೆಯ ಆತ್ಮಹತ್ಯೆಗೆ ಕಾರಣವಾಗಿರಬಹುದು. ಇತ್ತೀಚಿನ ತಿಂಗಳುಗಳಲ್ಲಿ ರಾಚೆಲ್ ತಮ್ಮ ವೃತ್ತಿಗಾಗಿ ಆಭರಣಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿದ್ದರು. ತಂದೆಯಿಂದ ಸಹಾಯ ಕೋರಿದ್ದ ಆಕೆಗೆ, ತಮ್ಮ ಸಹೋದರನ ಜವಾಬ್ದಾರಿಯಿಂದಾಗಿ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ತಂದೆ ತಿಳಿಸಿದ್ದರು.

ಪೊಲೀಸರು ಆಕೆಯ ಸೂಸೈಡ್ ನೋಟ್ ಪತ್ತೆಹಚ್ಚಿದ್ದು, "ನನ್ನ ಸಾವಿಗೆ ಯಾರೂ ಕಾರಣರಲ್ಲ" ಎಂದು ಆಕೆ ಬರೆದಿದ್ದಾರೆ. ಆದರೂ, ವೈವಾಹಿಕ ಸಮಸ್ಯೆಗಳು ಈ ಘಟನೆಗೆ ಕಾರಣವಾಗಿರಬಹುದೇ ಎಂದು ಖಚಿತಪಡಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.