ಎನ್‌ಐಎ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸೇರಿ ಭಾರತೀಯ ಮೂಲದ 8 ಜನರ ಬಂಧನ
ಅಮೆರಿಕದಲ್ಲಿ ಗ್ಯಾಂಗ್‌ಗೆ ಸಂಬಂಧಿತ ಅಪಹರಣ ಮತ್ತು ಚಿತ್ರಹಿಂಸೆ ಪ್ರಕರಣಗಳ ತನಿಖೆಯ ಸಂಬಂಧ ಭಾರತೀಯ ಮೂಲದ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಂಧಿತರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಬೇಕಾಗಿರುವ ಪಂಜಾಬ್‌ನ ಗ್ಯಾಂಗ್‌ಸ್ಟರ್ ಪವಿತ್ತರ್ ಸಿಂಗ್ ಬಟಾಲಾ ಕೂಡ ಸೇರಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಎನ್‌ಐಎ ಆರೋಪಿಸಿದೆ.

ಸಾಂದರ್ಭಿಕ ಚಿತ್ರ

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ (United States) ಗ್ಯಾಂಗ್‌ಗೆ ಸಂಬಂಧಿತ ಅಪಹರಣ (Kidnapping) ಮತ್ತು ಚಿತ್ರಹಿಂಸೆ (Torture) ಪ್ರಕರಣಗಳ ತನಿಖೆಯ ಸಂಬಂಧ ಭಾರತೀಯ ಮೂಲದ (Indian-Origin ) ಎಂಟು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಂಧಿತರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಬೇಕಾಗಿರುವ ಪಂಜಾಬ್‌ನ ಗ್ಯಾಂಗ್‌ಸ್ಟರ್ ಪವಿತ್ತರ್ ಸಿಂಗ್ ಬಟಾಲಾ ಕೂಡ ಸೇರಿದ್ದಾನೆ. ಬಟಾಲಾ ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಜೊತೆ ಸಂಬಂಧ ಹೊಂದಿದ್ದು, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಎನ್‌ಐಎ ಆರೋಪಿಸಿದೆ.
ಜುಲೈ 11 ರಂದು ಎಫ್‌ಬಿಐ ಸ್ವಾಟ್, ಸ್ಟಾಕ್‌ಟನ್ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಷೆರಿಫ್ ಕಚೇರಿಗಳನ್ನು ಒಳಗೊಂಡಂತೆ ಹಲವು ತಂಡಗಳು ಸ್ಯಾನ್ ಜೊವಾಕಿನ್ ಕೌಂಟಿಯಲ್ಲಿ ಐದು ಸಂಘಟಿತ ಶೋಧ ಕಾರ್ಯಾಚರಣೆಗಳನ್ನು ನಡೆಸಿವೆ ಎಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೊವಾಕಿನ್ ಕೌಂಟಿ ಷೆರಿಫ್ ಕಚೇರಿಯ ಹೇಳಿದೆ.
ಬಂಧಿತ ಆರೋಪಿಗಳನ್ನು ದಿಲ್‌ಪ್ರೀತ್ ಸಿಂಗ್, ಅರ್ಶ್‌ಪ್ರೀತ್ ಸಿಂಗ್, ಅಮೃತ್‌ಪಾಲ್ ಸಿಂಗ್, ವಿಶಾಲ್, ಪವಿತ್ತರ್ ಸಿಂಗ್, ಗುರ್ತಾಜ್ ಸಿಂಗ್, ಮನ್‌ಪ್ರೀತ್ ರಂಧಾವಾ ಮತ್ತು ಸರಬ್‌ಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಭಾರತೀಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಈ ಎಂಟೂ ಜನರು ಗ್ಯಾಂಗ್‌ಸ್ಟರ್-ಭಯೋತ್ಪಾದಕ ಜಾಲದ ಭಾಗವಾಗಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಐದು ಬಂದೂಕುಗಳು, ಒಂದು ಅಟ್ಯಾಕ್ ರೈಫಲ್, ದೊಡ್ಡ ಪ್ರಮಾಣದ ಮದ್ದುಗುಂಡುಗಳು, ಹೆಚ್ಚಿನ ಸಾಮರ್ಥ್ಯದ ಮ್ಯಾಗಜೀನ್‌ಗಳು ಮತ್ತು 15,000 ಡಾಲರ್‌ಗಿಂತ ಹೆಚ್ಚಿನ ನಗದು ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿಯನ್ನು ಓದಿ: Viral Video: ಸಚಿವರ ಕಾರ್ಯಕ್ರಮದಲ್ಲಿ ಕುಡಿದು ಬಂದು ವೇದಿಕೆ ಏರಿದ ಅಧಿಕಾರಿಯ ಬಂಧನ
ಆರೋಪಿಗಳ ಮೇಲೆ ಅಪಹರಣ, ಚಿತ್ರಹಿಂಸೆ, ಸಾಕ್ಷಿಗಳ ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ. ಇದರ ಜೊತೆಗೆ, ಮಷಿನ್ ಹೊಂದಿರುವುದು, ಕಾನೂನುಬಾಹಿರ ಶಸ್ತ್ರಾಸ್ತ್ರ ಹೊಂದಿರುವ ಆರೋಪಗಳಿವೆ. ಷೆರಿಫ್ ಕಚೇರಿಯ ಪ್ರಕಾರ, "ಈ ಕಾರ್ಯಾಚರಣೆ ಎಫ್‌ಬಿಐನ 'ಸಮ್ಮರ್ ಹೀಟ್' ಕಾರ್ಯಕ್ರಮದ ಭಾಗವಾಗಿದ್ದು, ರಾಷ್ಟ್ರವ್ಯಾಪಿ ಹಿಂಸಾತ್ಮಕ ಅಪರಾಧಿಗಳು ಮತ್ತು ಗ್ಯಾಂಗ್ ಸದಸ್ಯರನ್ನು ಟಾರ್ಗೆಟ್ ಮಾಡಲಾಗಿದೆ
ಮೂಲಗಳ ಪ್ರಕಾರ, ಆರೋಪಿಗಳು ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದು, ಭಾರತ ಮತ್ತು ಅಮೆರಿಕದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಗೋಲ್ಡಿ ಬ್ರಾರ್, ಅನ್ಮೋಲ್ ಬಿಷ್ಣೋಯ್ ಮತ್ತು ರೋಹಿತ್ ಗೊದಾರಾ ಮುಂತಾದ ಯುಎಸ್‌ನಲ್ಲಿರುವ ಭಾರತೀಯ ಗ್ಯಾಂಗ್‌ಸ್ಟರ್‌ಗಳು ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ.