Star Fashion 2025: ಚಾರ್ಲಿ ಚಾಪ್ಲಿನ್ ಫಿಮೇಲ್ ವರ್ಶನ್ನ ಫ್ಯಾಷನ್ ಲುಕ್ಸ್ನಲ್ಲಿ ನಟಿ ಸುಕೃತಾ ವಾಗ್ಲೆ
Star Fashion 2025: ಸ್ಯಾಂಡಲ್ವುಡ್ ನಟಿ ಸುಕೃತಾ ವಾಗ್ಲೆ ಚಾರ್ಲಿ ಚಾಪ್ಲಿನ್ ಫಿಮೇಲ್ ವರ್ಶನ್ನ ನಾನಾ ಫ್ಯಾಷನ್ ಲುಕ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಲುಕ್? ಸ್ಟೈಲಿಂಗ್ನ ಸ್ಪೆಷಾಲಿಟಿ ಏನು? ಈ ಕುರಿತಂತೆ ಖುದ್ದು ಅವರೇ ವಿಶ್ವವಾಣಿ ನ್ಯೂಸ್ನೊಂದಿಗೆ ಮಾತನಾಡಿದ್ದಾರೆ.

ಚಿತ್ರಗಳು: ಸುಕೃತಾ ವಾಗ್ಲೆ, ಸ್ಯಾಂಡಲ್ವುಡ್ ನಟಿ., ಫೋಟೋಗ್ರಾಫಿ: ವಿಕಾಸ್ ಫೋಟೋ ಫ್ಯಾಕ್ಟರಿ


ಚಾರ್ಲಿ ಚಾಪ್ಲಿನ್ನ ಫಿಮೇಲ್ ವರ್ಶನ್ನ ನಾನಾ ಫ್ಯಾಷನ್ ಲುಕ್ಗಳಲ್ಲಿ ಸ್ಯಾಂಡಲ್ವುಡ್ ನಟಿ ಸುಕೃತಾ ವಾಗ್ಲೆ ಕಾಣಿಸಿಕೊಂಡಿದ್ದು, ಇದು ಮಾಡೆಲಿಂಗ್ ಕ್ಷೇತ್ರದವರ ಪ್ರೀತಿಗೆ ಪಾತ್ರವಾಗಿದೆ.

ಗಮನಸೆಳೆದ ವಿಭಿನ್ನ ಕಾನ್ಸೆಪ್ಟ್
ಹೌದು, ಕಂಪ್ಲೀಟ್ ಡಿಫರೆಂಟ್ ಕಾನ್ಸೆಪ್ಟ್ ಹಾಗೂ ಥೀಮ್ನಲ್ಲಿ ಕಾಣಿಸಿಕೊಂಡಿರುವ ಸುಕೃತಾ ಅವರ ಭಿನ್ನ-ವಿಭಿನ್ನ ಲುಕ್ಸ್ ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿದ್ದು, ಈ ಕುರಿತಂತೆ ನಟಿ ಸುಕೃತಾ ವಾಗ್ಲೆಯವರನ್ನು ವಿಶ್ವವಾಣಿ ನ್ಯೂಸ್ ಮಾತನಾಡಿಸಿದಾಗ ಈ ಕುರಿತ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.

ವಿಶ್ವವಾಣಿ ನ್ಯೂಸ್: ಸೂಪರ್ ಮಾಡೆಲ್ನಂತೆ ಕಾಣಿಸುತ್ತಿರುವ ಈ ಫ್ಯಾಷನ್ ಶೂಟ್ ಕಾನ್ಸೆಪ್ಟ್ ಏನು?
ಸುಕೃತಾ ವಾಗ್ಲೆ: ಇದು ಚಾರ್ಲಿ ಚಾಪ್ಲಿನ್ ಲುಕ್ನ ಫೀಮೇಲ್ ವರ್ಶನ್ ಎನ್ನಬಹುದು. ಡಿಫರೆಂಟ್ ಫ್ಯಾಷೆನಬಲ್ ಟ್ವಿಸ್ಟ್ ನೀಡಿ ವಿಭಿನ್ನವಾಗಿ ಶೂಟ್ ಮಾಡಲಾಗಿದೆ.
ವಿಶ್ವವಾಣಿ ನ್ಯೂಸ್: ಕಾನ್ಸೆಪ್ಟ್ ವಿಭಿನ್ನವಾಗಿಸಿರುವುದು ಹೇಗೆ?
ಸುಕೃತಾ ವಾಗ್ಲೆ: ಕಾನ್ಸೆಪ್ಟ್ ಚಾರ್ಲಿ ಚಾಪ್ಲಿನ್ ಲುಕ್ನದ್ದಾದರೂ ನಾವು ಅದನ್ನು ವಿಭಿನ್ನವಾಗಿ ಬಿಂಬಿಸಲು ಪಿಂಕ್ ಬ್ಯಾಕ್ಗ್ರೌಂಡ್ ಆಯ್ಕೆ ಮಾಡಿದ್ದೇವೆ. ಇನ್ನು ನಾನು ಇದಕ್ಕೆ ಪೂರಕವಾಗಿ ಬ್ಲ್ಯಾಕ್ & ವೈಟ್ ಕಾಸ್ಟ್ಯೂಮ್ ಧರಿಸಿದ್ದೇನೆ.

ವಿಶ್ವವಾಣಿ ನ್ಯೂಸ್: ಮೇಕಪ್ ಹಾಗೂ ಸ್ಟೈಲಿಂಗ್ ಬಗ್ಗೆ ಹೇಳಿ
ಸುಕೃತಾ ವಾಗ್ಲೆ: ಖಂಡಿತಾ, ಈ ಸ್ಪೆಷಲ್ ಲುಕ್ಗೆ ಹೊಂದುವಂತೆ ಟ್ರೆಂಡಿಯಾಗಿರುವ ಫಿಶ್ ಐ ಮೇಕಪ್ ಹೈಲೈಟ್ ಮಾಡಲಾಗಿದ್ದು, ಇದಕ್ಕೆ ಪೂರಕವಾಗುವಂತೆ ಕ್ವಿರ್ಕಿ ಸೈಡ್ ಬನ್ ಹೇರ್ಸ್ಟೈಲ್ ಮ್ಯಾಚ್ ಮಾಡಲಾಗಿದೆ.

ವಿಶ್ವವಾಣಿ ನ್ಯೂಸ್: ಫ್ಯಾಷನ್ ಫೋಟೋಶೂಟ್ ಪ್ರಿಯರಿಗೆ ನೀವು ನೀಡುವ 3 ಟಿಪ್ಸ್
ಸುಕೃತಾ ವಾಗ್ಲೆ: ಮಾಡೆಲ್ನಂತೆ ಕಾಣಲು ಮೊದಲು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.
* ಬಾಡಿ ಟೈಪ್ಗೆ ತಕ್ಕಂತೆ ಕಾಸ್ಟ್ಯೂಮ್ ಆಯ್ಕೆ ಮಾಡಬೇಕು.
* ಪೋಸಿಂಗ್ ಪ್ರಮುಖವಾಗಿ ಪರಿಗಣಿಸಬೇಕು. ಮೇಕಪ್ ಮೇಕೋವರ್ ಬೆಸ್ಟ್ ಆಗಿರಬೇಕು.