Protein: ದೇಹಕ್ಕೆ ಪ್ರೋಟೀನ್ ಅಗತ್ಯ, ಆದ್ರೆ ಅತಿಯಾಗಿ ಸೇವಿಸಿದ್ರೆ ಅಪಾಯ!
ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಪ್ರೋಟೀನ್ ಅಂಶ ಪ್ರತಿಯೊಬ್ಬರ ದೇಹದಲ್ಲಿಯೂ ಬಹಳ ಅಗತ್ಯ. ಮೊಟ್ಟೆ, ಮೊಳಕೆ ಕಾಳು,ಹಾಲು,ಮೊಸರು, ಧಾನ್ಯಗಳು, ಹಸಿರೆಲೆ ತರಕಾರಿ ಇನ್ನು ಅನೇಕ ಪ್ರೋಟೀನ್‌ಯುಕ್ತ ಆಹಾರವನ್ನು ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸುತ್ತೇವೆ. ಹಾಗಿದ್ದರೂ ಕೆಲವೊಂದು ಬಾರಿ ಅಧಿಕ ಪ್ರೋಟೀನ್ಇರುವ ಆಹಾರಗಳೇ ದೇಹದಲ್ಲಿ ಆರೋಗ್ಯ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.


ನವದೆಹಲಿ: ನಮ್ಮ ದೇಹ ಸದಾ ಕಾಲ ಹೆಚ್ಚು ಕ್ರಿಯಾಶೀಲವಾಗಿ, ಆರೋಗ್ಯಯುತವಾಗಿರಬೇಕಾದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಕಾಲಕಾಲಕ್ಕೆ ಸರಿಯಾಗಿ ಸೇವಿಸಬೇಕು. ದೇಹದ ಮಾಂಸಖಂಡಗಳ ಬೆಳವಣಿಗೆಗೆ, ಮೂಳೆಗಳ ಬಲವರ್ಧನೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇನ್ನು ಅನೇಕ ಕಾರಣಗಳಿಗಾಗಿ ನಾವು ಪ್ರೋಟೀನ್‌ಯುಕ್ತ(Protein) ಆಹಾರ ಸೇವನೆಗೆ ಅಧಿಕ ಆದ್ಯತೆ ನೀಡುತ್ತೇವೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರೋಟೀನ್ ಅಂಶ ಪ್ರತಿಯೊಬ್ಬರ ದೇಹದಲ್ಲಿಯೂ ಬಹಳ ಅಗತ್ಯ. ಮೊಟ್ಟೆ, ಮೊಳಕೆ ಕಾಳು,ಹಾಲು, ಮೊಸರು, ಧಾನ್ಯಗಳು, ಹಸಿರೆಲೆ ತರಕಾರಿ ಇನ್ನು ಅನೇಕ ಪ್ರೋಟೀನ್‌ಯುಕ್ತ ಆಹಾರವನ್ನು ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸುತ್ತೇವೆ. ಹಾಗಿದ್ದರೂ ಕೆಲವೊಂದು ಬಾರಿ ಅಧಿಕ ಪ್ರೋಟೀನ್ ಇರುವ ಆಹಾರಗಳೆ ದೇಹದಲ್ಲಿ ಆರೋಗ್ಯ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚು ಪ್ರೋಟೀನ್ ಅಂಶ ಇರುವ ಆಹಾರ ಸೇವಿಸಿದರೆ ದೇಹದ ಆರೋಗ್ಯದ ಮೇಲೆ ಯಾವೆಲ್ಲ ಅಡ್ಡ ಪರಿಣಾಮ ಉಂಟಾಗಬಹುದು ಎನ್ನುವ ಮಾಹಿತಿ ಇಲ್ಲಿದೆ..
ಹೃದ್ರೋಗ ಸಮಸ್ಯೆ:
ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿವೆ. ಅಧಿಕ ಪ್ರೋಟೀನ್ ಅಂಶ ಇರುವ ಆಹಾರವನ್ನು ಅತಿಯಾಗಿ ಸೇವನೆ ಮಾಡುವುದರಿಂದ ಹೃದಯ ಸಂಬಂಧಿತ ಸಮಸ್ಯೆ ಕಂಡು ಬರುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ವರದಿಯೊಂದನ್ನು ಮಾಡಿದೆ. ಹೃದಯಾಘಾತದಿಂದ ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಾಯು ವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಹಾಗಾಗಿ ಅಧಿಕ ಪ್ರೋಟೀನ್ ಹೊಂದಿದ್ದ ಆಹಾರವನ್ನು ಮಿತವಾಗಿ ಸೇವಿಸಿದರೆ ಈ ಸಮಸ್ಯೆ ಬಾರದಂತೆ ತಡೆಯಬಹುದು.
ತೂಕ ಹೆಚ್ಚಳ:
ಕೆಲವರು ದೇಹದ ತೂಕ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಪ್ರೋಟೀನ್‌ಯುಕ್ತ ಆಹಾರ ಸೇವಿಸಿದರೆ ಇನ್ನು ಕೆಲವರು ತೂಕ ಇಳಿಸಲು ಅಧಿಕ ಪ್ರೋಟೀನ್‌ನ ಆಹಾರದ ಮೊರೆ ಹೋಗುತ್ತಾರೆ. ಆದರೆ ಕೆಲವೊಂದು ಪ್ರೋಟೀನ್ ಇರುವ ಆಹಾರವು ದೇಹದಲ್ಲಿ ಕೊಲೆಸ್ಟ್ರಾಲ್ ಉಂಟು ಮಾಡಿ ತೂಕ ಒಮ್ಮಿಂದೊಮ್ಮೆಲೆ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
ಮಲಬದ್ಧತೆ ಸಮಸ್ಯೆ:
ಬರೀ ಪ್ರೋಟೀನ್ ಹೊಂದಿದ್ದ ಆಹಾರವನ್ನು ಮಾತ್ರವೇ ಸೇವನೆ ಮಾಡಿದರೆ ದೇಹಕ್ಕೆ ಬೇಕಾದ ಖನಿಜಾಂಶ, ಫೈಬರ್ ನ ಸತ್ವಗಳಿಲ್ಲದೆ ಮಲಬದ್ಧತೆ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಅದರಲ್ಲೂ ಮಕ್ಕಳಲ್ಲಿ ಫೈಬರ್ ಕೊರತೆಯಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ. ಹಾಗಾಗಿ ಖಾಲಿ ಪ್ರೋಟಿನ್ ಮಾತ್ರವಲ್ಲದೆ ಫೈಬರ್ ಇತರ ಪೋಷಕಾಂಶಗಳ ಕಡೆ ಕೂಡ ಗಮನಹರಿಸಬೇಕು.
ಇದನ್ನು ಓದಿ: Health Tips: ಮೊಳಕೆ ಬಂದ ಆಲೂಗಡ್ಡೆಯನ್ನು ಬಳಸಬಹುದೇ?
ಮೂತ್ರಪಿಂಡದ ಹಾನಿ:
ಅತೀಯಾಗಿ ಪ್ರೋಟೀನ್‌ಅಂಶ ಇರುವ ಆಹಾರ ಸೇವನೆ ಮಾಡುವುದರಿಂದ ಮೂತ್ರ ಪಿಂಡಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಅಧಿಕ ಪ್ರೋಟೀನ್ ಹೊಂದಿದ್ದ ಆಹಾರ ಅತಿಯಾಗಿ ಸೇವಿಸಿದಾಗ ರಕ್ತದೊತ್ತಡ ಸಮಸ್ಯೆ ಉಂಟಾಗುವ ಜೊತೆಗೆ ಮೂತ್ರಪಿಂಡದ ಹೈಪರ್ ಫಿಲ್ಟ್ರೇಶನ್ ಗೆ ಕಾರಣ ವಾಗುವ ಸಾಧ್ಯತೆ ಇದೆ. ಹಾಗಾಗಿ ಮೂತ್ರಪಿಂಡದ ಸಮಸ್ಯೆ ಹೊಂದಿರು ವವರು ಆದಷ್ಟು ನಿಯಮಿತವಾಗಿ ಪ್ರೊಟೀನ್ ಇರುವ ಆಹಾರ ಸೇವನೆ ಮಾಡಬೇಕು. ಅಧಿಕ ಪ್ರೋಟೀನ್ ಹೊಂದಿದ್ದ ಆಹಾರ ಸೇವನೆ ಮಾಡುವುದರಿಂದ ಕೆಲವೊಂದು ಬಾರಿ ಗ್ಯಾಸ್ಟ್ರಿಕ್ ಸಮಸ್ಯೆ, ಉರಿಯೂತ, ಅಜೀರ್ಣ ಇತ್ಯಾದಿ ಸಮಸ್ಯೆ ಸಹ ಕಾಡುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ದೇಹಕ್ಕೆ ಪ್ರೋಟೀನ್‌ಯುಕ್ತ ಆಹಾರ ಬೇಕಿದ್ದರೂ ನಿಮ್ಮ ದೇಹದ ತೂಕ, ಗಾತ್ರಕ್ಕೆ ಅನುಗುಣವಾಗಿ ಬೇಕಾದಷ್ಟನ್ನು ಮಾತ್ರವೇ ಸೇವಿಸಬೇಕು. ಅದರಂತೆ ವೈದ್ಯಕೀಯ ಸಲಹೆ ಮೇರೆಗೆ ಪ್ರೋಟೀನ್ ಹೊಂದಿದ್ದ ಆಹಾರ ಸೇವನೆ ಮಾಡಿದರೆ ಯಾವುದೇ ರೀತಿಯಲ್ಲಿ ಅಡ್ಡಪರಿಣಾಮ ಬೀರುವುದಿಲ್ಲ ಎನ್ನಬಹುದು.