ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Rain: ಬೆಂಗಳೂರಲ್ಲಿ ಮಳೆ ಆರ್ಭಟ; ಬೈಕ್‌ ಮೇಲೆ ಮರ ಬಿದ್ದು 3 ವರ್ಷದ ಬಾಲಕಿ ಸಾವು

Bengaluru Rain: ಬೆಂಗಳೂರಿನ ಜೀವನಹಳ್ಳಿಯ ಪೂರ್ವ ಪಾರ್ಕ್ ಬಳಿ, ಬೈಕ್‌ ಮಳೆ ಮರ ಬಿದ್ದು ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಮರ ಬಿದ್ದು ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಬೆಂಗಳೂರಲ್ಲಿ ಮಳೆ ಆರ್ಭಟ; ಬೈಕ್‌ ಮೇಲೆ ಮರ ಬಿದ್ದು ಬಾಲಕಿ ಸಾವು

ಬೆಂಗಳೂರಿನ ನಾಗವಾರ-ಹೆಬ್ಬಾಳ ರಸ್ತೆಯಲ್ಲಿ ಭಾರಿ ಪ್ರಮಾಣದ ಮಳೆ ನೀರು ನಿಂತ ಹಿನ್ನೆಲೆ ತೀವ್ರ ಸಂಚಾರ ದಟ್ಟಣೆ ಉಂಟಾಯಿತು.

Profile Prabhakara R Mar 22, 2025 10:47 PM

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಶನಿವಾರ ಸಂಜೆ ಭಾರಿ ಮಳೆ ಸುರಿದಿದ್ದು, ಅದರಲ್ಲೂ ಸಿಲಿಕಾನ್‌ ಸಿಟಿಯಲ್ಲಿ ವರುಣನ (Bengaluru Rain) ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ನಗರದ ಜೀವನಹಳ್ಳಿಯ ಪೂರ್ವ ಪಾರ್ಕ್ ಬಳಿ, ಬೈಕ್‌ ಮಳೆ ಮರ ಬಿದ್ದು ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ತಂದೆ ಜತೆ ಬಾಲಕಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮರ ಬಿದ್ದ ಹಿನ್ನೆಲೆ ಬಾಲಕಿಯ ತಲೆಗೆ ಗಂಭೀರ ಗಾಯವಾಗಿತ್ತು, ಹೀಗಾಗಿ ಬಾಲಕಿಯನ್ನು ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಬಾಲಕಿ ಕೊನೆಯುಸಿರೆಳೆದಿರುವುದಾಗಿ ಮಾಹಿತಿ ಲಭ್ಯಲಾಗಿದೆ.

Girl Dies

ಮೃತ ಬಾಲಕಿಯನ್ನು 3 ವರ್ಷದ ರಕ್ಷಾ ಎಂದು ಗುರುತಿಸಲಾಗಿದೆ. ಪುಲಕೇಶಿ ನಗರ ಠಾಣೆ ವ್ಯಾಪ್ತಿಯ ಜೀವನಹಳ್ಳಿ ಪೂರ್ವ ಪಾರ್ಕ್‌ ಬಳಿ ದುರ್ಘಟನೆ ನಡೆದಿದೆ. ತಂದೆ ಸತ್ಯ ಜತೆ ಮಗಳು ರಕ್ಷಾ ಬೈಕ್‌ನಲ್ಲಿ ತೆರಳುತ್ತಿದ್ದ ಮರ ಮುರಿದು ಬಿದ್ದಿತ್ತು. ಚಿಕಿತ್ಸೆ ಫಲಿಸದೇ ಬಾಲಕಿ ರಕ್ಷಾ ಸಾವನ್ನಪ್ಪಿದ್ದು, ಬಾಲಕಿಯ ತಂದೆ ಸತ್ಯಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಶಕ್ತಿ ಹಾಗೂ ಸತ್ಯ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮೊದಲನೆಯವ ಮಗನಾಗಿದ್ದರೆ, ಎರಡನೆಯ ಮಗುವಾದ ಬಾಲಕಿ ರಕ್ಷಾ ಇದೀಗ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ತಂದೆ, ತಾಯಿ ಹಾಗೂ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.

ಈ ಸುದ್ದಿಯನ್ನೂ ಓದಿ | Karnataka Weather: ರಾಜ್ಯದಲ್ಲಿ ಮುಂದಿನ 3 ದಿನ ಭರ್ಜರಿ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

ಸಿಲಿಕಾನ್ ಸಿಟಿಯ ಸರ್ಜಾಪುರ ಸುತ್ತಮುತ್ತ ಶನಿವಾರ ಸಂಜೆ ಭರ್ಜರಿ ಮಳೆ ಆಗಿದ್ದು, ರಸ್ತೆಗಳು ಜಲಾವೃತವಾಗಿದ್ದರಿಂದ ಸವಾರರು ಹೈರಾಣಾದರು. ಇನ್ನು ಬೆಂಗಳೂರಿನ ಹಲವೆಡೆ ವರುಣರಾಯ ತಂಪೆರೆದಿದ್ದು, ಹೆಬ್ಬಾಳ, ನಾಗವಾರ ಮುಖ್ಯರಸ್ತೆ, ಯಲಹಂಕ ಆರ್.ಟಿ ನಗರ, ಸುಲ್ತಾನ್ ಪಾಳ್ಯ, ಮಾನ್ಯತಾ ಟೆಕ್ ಪಾರ್ಕ್, ಮೇಖ್ರಿ ಸರ್ಕಲ್, ಸದಾಶಿವನಗರ ಸೇರಿ ಹಲವಡೆ ಮಳೆ ಧಾರಾಕಾರ ಸುರಿದಿದೆ.



ಯಲಹಂಕದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಬಳಿ ಮರ ಧರೆಗುರುಳಿತ್ತು. ಮಳೆ ನಿಂತ ಬಳಿಕ ಸಿಬ್ಬಂದಿ ತೆರವು ಕಾರ್ಯಾಚರಣೆ ಮಾಡಿದ್ದಾರೆ. ನಗರದಲ್ಲಿ ಏಕಾಏಕಿ ಮಳೆ ಬಂದಿದ್ದರಿಂದ ವಾಹನ ಸವಾರರು ಟ್ರಾಫಿಕ್​ನಲ್ಲಿ ಸಿಲುಕಿ ತೊಂದರೆ ಅನುಭವಿಸಿದರು. ದೇವನಹಳ್ಳಿ ನಗರ ಮತ್ತು ಗ್ರಾಮೀಣ ಭಾಗ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಗುಡುಗು ಸಹಿತ ಮಳೆಯಾಗಿದೆ. ಭಾರಿ ಮಳೆ ಹಿನ್ನೆಲೆ ಏರ್‌ಪೋರ್ಟ್‌ನಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.