Caste Census: ಜಾತಿಗಣತಿ; ಸಿಎಂ ಚೆಕ್ ಮೇಟ್ !
ಸಿದ್ದರಾಮಯ್ಯ ಅವರು ಈ ನಡೆಯನ್ನು ಅನುಸರಿಸುವಾಗ ಇದರಿಂದ ಪಕ್ಷಕ್ಕಾಗುವ ಅಥವಾ ಲಿಂಗಾ ಯತ, ಒಕ್ಕಲಿಗರು ಸೇರಿದಂತೆ ಮೇಲ್ಜಾತಿಗಳಿಂದ ಎದುರಾಗಬಹುದಾದ ವಿರೋಧವನ್ನು ಊಹಿಸಿಯೇ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ಚುನಾವಣೆ ವೇಳೆಗೆ ಪಕ್ಷಕ್ಕೆ ಯಾವ ಹಂತದಲ್ಲಿ ಡ್ಯಾಮೇಜ್ ಆಗುತ್ತದೆ ಎನ್ನುವ ಸ್ಪಷ್ಟತೆ ಇಲ್ಲದಿದ್ದರೂ, ಸದ್ಯಕ್ಕಂತೂ ಸಿದ್ದರಾಮಯ್ಯ ಅವರು ಭಾರಿ ಲಾಭವನ್ನೇ ತರಿಸಿದೆ ಎನ್ನುವುದು ಸ್ಪಷ್ಟ.


ಬೆಂಗಳೂರು: ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ, ಪರ-ವಿರೋಧ ಚರ್ಚೆಗೆ ನಾಂದಿ ಹಾಡಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವ ಭಾರಿ ಚರ್ಚೆಗಳು ನಡೆಯುತ್ತಿವೆ. ವರದಿ ಮಂಡನೆಯಿಂದ ಕಾಂಗ್ರೆಸ್ ಗೆ ಎಷ್ಟರ ಮಟ್ಟಿಗೆ ಲಾಭವಾಗು ವುದೋ ಬಿಡುವುದೋ ಗೊತ್ತಿಲ್ಲ. ಆದರೆ ಸಮೀಕ್ಷೆಯನ್ನು ಸಂಪುಟದಲ್ಲಿ ಮಂಡಿಸುವ ಮೂಲಕ ಪಕ್ಷದಲ್ಲಿಯೇ ತನ್ನ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಚೆಕ್ಮೇಟ್ ನೀಡಿದ್ದಾರೆ ಎನ್ನುವುದು ಸ್ಪಷ್ಟ. ಹೌದು, ಜಾತಿಗಣತಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿದ ಬಳಿಕ ಸಚಿವ ಸಂಪುಟ ದಲ್ಲಿಯೇ ತೀವ್ರ ವಿರೋಧಗಳು ಶುರುವಾಗಿವೆ. ಅದರಲ್ಲಿಯೂ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎನ್ನುವ ಆರೋಪವಿರುವುದರಿಂದ ಸಹಜವಾಗಿಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೇ ರೀತಿ ಲಿಂಗಾಯತ ಸಮುದಾಯದ ಸಚಿವರು ಹೋರಾಡುತ್ತಿದ್ದಾರೆ. ಆದರೆ ಈ ಎಲ್ಲದರ ನಡುವೆ ಹಿಂದುಳಿದ ವರ್ಗದ ಕೆಲ ಸಮುದಾಯಗಳನ್ನು ಹೊರತುಪಡಿಸಿ ಇಡೀ ಅಹಿಂದ ಸಮುದಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಡೆಯನ್ನು ಸ್ವಾಗತಿಸಿದೆ.
ಸಿದ್ದರಾಮಯ್ಯ ಅವರು ಈ ನಡೆಯನ್ನು ಅನುಸರಿಸುವಾಗ ಇದರಿಂದ ಪಕ್ಷಕ್ಕಾಗುವ ಅಥವಾ ಲಿಂಗಾಯತ, ಒಕ್ಕಲಿಗರು ಸೇರಿದಂತೆ ಮೇಲ್ಜಾತಿಗಳಿಂದ ಎದುರಾಗಬಹುದಾದ ವಿರೋಧವನ್ನು ಊಹಿಸಿಯೇ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ಚುನಾವಣೆ ವೇಳೆಗೆ ಪಕ್ಷಕ್ಕೆ ಯಾವ ಹಂತ ದಲ್ಲಿ ಡ್ಯಾಮೇಜ್ ಆಗುತ್ತದೆ ಎನ್ನುವ ಸ್ಪಷ್ಟತೆ ಇಲ್ಲದಿದ್ದರೂ, ಸದ್ಯಕ್ಕಂತೂ ಸಿದ್ದರಾಮಯ್ಯ ಅವರು ಭಾರಿ ಲಾಭವನ್ನೇ ತರಿಸಿದೆ ಎನ್ನುವುದು ಸ್ಪಷ್ಟ.
ಬದಲಾವಣೆ ಬಗ್ಗೆ ಮಾತಾಡಿದರೆ ಸಂಕಷ್ಟ: ಜಾತಿಗಣತಿಯನ್ನು ಒಪ್ಪಿಕೊಳ್ಳುವುದು, ಶಿಫಾರಸು ಗಳನ್ನು ಜಾರಿಗೊಳಿಸುವುದು ಬಿಡುವುದು ಸಚಿವ ಸಂಪುಟ ಹಾಗೂ ರಾಜಕೀಯ ತೀರ್ಮಾನಗಳ ಮೇಲೆ ನಿಂತಿದೆ. ಆದರೆ ಸಂಪುಟದಲ್ಲಿ ಈ ವಿಷಯವನ್ನು ಮಂಡಿಸುವ ಮೂಲಕ ‘ತಾನು ಅಹಿಂದ’ ಪರ ಎನ್ನುವುದನ್ನು ಮತ್ತೊಮ್ಮೆ ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ.
ವರದಿ ಮಂಡಿಸಿ ಕೈಬಿಟ್ಟ ಸಿಎಂ
ಹಾಗೇ ನೋಡಿದರೆ, ಜಾತಿ ಗಣತಿಯನ್ನು ರಾಜಕೀಯ ಲೆಕ್ಕಾಚಾರಗಳನ್ನು ಮೀರಿ ನೋಡಿದರೂ ಪ್ಪಿಕೊಳ್ಳಲು ಹಲವು ಕಾನೂನು ತೊಡಕುಗಳು ಎದುರಾಗುವ ಸಾಧ್ಯತೆಯಿದೆ. ಲಿಂಗಾಯತ, ಒಕ್ಕಲಿಗ ಮಾತ್ರವಲ್ಲದೇ ಒಬಿಸಿ ಸಮುದಾಯದ ಹಲವು ಸಮುದಾಯಗಳು ತಮ್ಮ ಜನಸಂಖ್ಯೆ ಸರಿಯಿಲ್ಲ ಎನ್ನುವ ವಾದ ಮಂಡಿಸುತ್ತಿವೆ. ಈ ಎಲ್ಲದರ ಅರಿವು ಮುಖ್ಯಮಂತ್ರಿಗಳಿದ್ದರೂ, ಜಾತಿ ಗಣತಿಯನ್ನು ಮಂಡಿಸುವ ಮೂಲಕ ತಮ್ಮ ಸ್ಥಾನ ಗಟ್ಟಿಪಡಿಸಿಕೊಂಡಿದ್ದಾರೆ. ಸಚಿವ ಸಂಪುಟ ಸದಸ್ಯರ ವಿರೋ ಧದ ನಡುವೆ ಅನುಮೋದನೆ ಪಡೆಯುವುದು ಕಷ್ಟ, ಇನ್ನು ಈ ವಿಷಯದಲ್ಲಿ ಹೈಕಮಾಂಡ್ ಸಹ ದ್ವಂದ್ವದಲ್ಲಿರುವುರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಕಷ್ಟ ಎನ್ನುವುದು ಗೊತ್ತಿದ್ದರೂ ಮಂಡಿಸಿದ್ದಾರೆ. ಈ ಮೂಲಕ ‘ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಆದರೆ ಕೆಲವರ ವಿರೋಧದಿಂದ ಪೂರ್ಣ ಜಾರಿ ಸಾಧ್ಯವಾಗಲಿಲ್ಲ’ ಎನ್ನುವ ಸಂದೇಶ ರವಾನಿಸುವುದು ಅವರ ಲೆಕ್ಕಾಚಾರವಾಗಿತ್ತು ಎನ್ನುವುದು ಸ್ಪಷ್ಟ.
*
ಲಿಂಗಾಯತ, ಒಕ್ಕಲಿಗ ಸಮುದಾಯ ವಿರೋಧ ನಿರೀಕ್ಷಿಸಿದ್ದರೂ ವರದಿ ಮಂಡನೆ
ತಾನು ಅಹಿಂದ ಪರ ಎಂಬುವುದನ್ನು ಮತ್ತೊಮ್ಮೆ ಸಿದ್ದರಾಮಯ್ಯ ಸಾಬೀತು
ಡಿಕೆಶಿಗೆ ಮಾತ್ರವಲ್ಲದೆ ಹೈಕಮಾಂಡ್ಗೂ ಚೆಕ್ಮೇಟ್ ನೀಡಿದ ಮುಖ್ಯಮಂತ್ರಿ