ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 'ಪುಷ್ಪ 2' ಚಿತ್ರದ 'ಪೀಲಿಂಗ್ಸ್' ಹಾಡು ಹಾಡಿದ ಭಾರತದ ಶಕೀರಾ; ವಿಡಿಯೊ ವೈರಲ್

ಆಂಧ್ರ ಪ್ರದೇಶದ ರಾಜಮಂಡ್ರಿ ಬಳಿಯ ರಾವುಲಪಲೆಂನ ಸ್ವಾತಿ ನಾರಾಯಣ ರೆಡ್ಡಿ ಎಂಬ ಮಹಿಳೆ ಹಾಡಿದ ʼಪುಷ್ಪ 2ʼ ಚಿತ್ರದ 'ಪೀಲಿಂಗ್ಸ್' ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರು ಫುಲ್ ಶಾಕ್‌ ಆಗಿದ್ದಾರೆ.

ವೈರಲ್‌ ಆಯ್ತು ಭಾರತದ ಶಕೀರಾ ಹಾಡಿದ ʼಪೀಲಿಂಗ್ಸ್' ಸಾಂಗ್‌

Profile pavithra Apr 19, 2025 8:18 PM

ಸೋಶಿಯಲ್ ಮಿಡಿಯಾದಲ್ಲಿ ದಿನ ಒಂದಿಲ್ಲೊಂದು ವಿಡಿಯೊಗಳು ವೈರಲ್‌ ಆಗುತ್ತಿರುತ್ತವೆ. ಈ ಹಿಂದೆ ʼಕಚ್ಚಾ ಬಾದಾಮ್; ಹಾಡು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು. ಅದೇರೀತಿ ಇದೀಗ ಆಂಧ್ರ ಪ್ರದೇಶದ ರಾಜಮಂಡ್ರಿ ಬಳಿಯ ರಾವುಲಪಲೆಂನ ಮಹಿಳೆ ಸ್ವಾತಿ ನಾರಾಯಣ ರೆಡ್ಡಿ ಹಾಡಿದ ʼಪುಷ್ಪ 2ʼ ಚಿತ್ರದ ಹಾಡು ಸೋಶಿಯಲ್ ಮೀಡಿಯಾದಲ್ಲಿ‌ ಸಿಕ್ಕಾಪಟ್ಟೆ ವೈರಲ್ (Viral Video) ಆಗಿ ನೆಟ್ಟಿಗರನ್ನು ಬೆರಗುಗೊಳಿಸಿದೆ.

ವೈರಲ್‌ ವಿಡಿಯೊದಲ್ಲಿ ಮಹಿಳೆ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' ಚಿತ್ರದ ತೆಲುಗು ಹಾಡು 'ಪೀಲಿಂಗ್ಸ್' ಅನ್ನು ರಿಕ್ರಿಯೇಟ್‌ ಮಾಡಿದ್ದಾರೆ. ಸೋಫಾದ ಮೇಲೆ ಕುಳಿತು ಹಾಡಿಗೆ ಟ್ಯೂನ್ ಹಾಕಿದ್ದಾರೆ. ಇವರ ಈ ಮ್ಯೂಸಿಕ್ ರೀಲ್ಸ್‌ಗೆ 36,000 ವ್ಯೂವ್ಸ್ ಸಿಕ್ಕಿದೆ. ಅನೇಕರು ಕಾಮೆಂಟ್ ವಿಭಾಗದಲ್ಲಿ ಅವರ ಹಾಡನ್ನು ಹೊಗಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಈ ಹಿಂದೆ, ಅವರು ಕೊಲಂಬಿಯಾದ ಗಾಯಕಿ-ಗೀತರಚನೆಕಾರ ಶಕೀರಾ ಅವರ ʼವಾಕಾ ವಾಕಾʼವನ್ನು ಮರುಸೃಷ್ಟಿಸಿದ್ದಕ್ಕಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಈ ವಿಡಿಯೊ 7.8 ಮಿಲಿಯನ್ ವ್ಯೂವ್ಸ್ ಮತ್ತು ಸಾವಿರಾರು ಲೈಕ್‍ಗಳನ್ನು ಗಳಿಸಿತ್ತು.

"ನಿಮ್ಮಲ್ಲಿ ಎಷ್ಟು ಜನರಿಗೆ ಈ ಹಾಡು ನೆನಪಿದೆ?" ಎಂದು ಕೇಳುತ್ತಾ ತನ್ನ 'ವಾಕಾ ವಾಕಾ' ಆವೃತ್ತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನೆಟ್ಟಿಗರು ಅವರ ರೀಲ್ ನೋಡಿ "ಭಾರತದ ಶಕೀರಾ" ಎಂದು ಕರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ವ್ಯಾಘ್ರನ ಹಸಿವಿಗೆ ಹೆಬ್ಬಾವೇ ಫುಲ್‌ ಮೀಲ್ಸ್‌- ಆಮೇಲೇನಾಯ್ತು ಗೊತ್ತಾ? ಇಲ್ಲಿದೆ ಶಾಕಿಂಗ್‌ ವಿಡಿಯೊ

ಈ ಹಿಂದೆ ʼಪುಷ್ಪ 2ʼ ಚಿತ್ರದ 'ಪೀಲಿಂಗ್ಸ್' ಹಾಡಿಗೆ ಅಜ್ಜಿಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಸದ್ದು ಮಾಡಿದ್ದರು. ರಶ್ಮಿಕಾ ಮಂದಣ್ಣ ಡ್ಯಾನ್ಸ್‌ ಮಾಡಿದಂತೆಯೇ ಅಜ್ಜಿ ಮಾಡಲು ಪ್ರಯತ್ನಿಸಿದ್ದರು. ವಿಡಿಯೊದಲ್ಲಿ ಅಜ್ಜಿ ಮೊಮ್ಮಗನ ಜತೆ ಕುಣಿದಿದ್ದರು. ಈ ವಿಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಯಸ್ಸಿನಲ್ಲಿ, ಅಜ್ಜಿಯ ಜೋಶ್ ನೋಡಿ ನೆಟ್ಟಿಗರು ಫಿದಾ ಆಗಿದ್ದರು.