MB Patil: ಜಂಗಮಕೋಟೆ ರೈತರಿಂದ ಸಚಿವ ಎಂ.ಬಿ.ಪಾಟೀಲ್‌ಗೆ ಮನವಿ ಸಲ್ಲಿಕೆ: ಸೂಕ್ತ ಕ್ರಮದ ಭರವಸೆ
MB Patil: ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರವು ಸ್ವಾಧೀನ ಪಡಿಸಿಕೊಳ್ಳಲಿರುವ ಜಮೀನಿನ ಮಾಲೀಕರಿಗೆ ಒಂದೇ ಕಂತಿನಲ್ಲಿ ಸಂಪೂರ್ಣ ಪರಿಹಾರ ವಿತರಿಸಬೇಕು ಮತ್ತು ಈ ರೈತ ಕುಟುಂಬಗಳ ಒಬ್ಬ ಸದಸ್ಯರಿಗೆ ಉದ್ಯೋಗ ಕೊಡಬೇಕು ಎಂದು `ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತಪರ ಹೋರಾಟ ಸಮಿತಿʼ ಯ ಮುಖಂಡರು ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗಾಗಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರವು ಸ್ವಾಧೀನ ಪಡಿಸಿಕೊಳ್ಳಲಿರುವ ಜಮೀನಿನ ಮಾಲೀಕರಿಗೆ ಒಂದೇ ಕಂತಿನಲ್ಲಿ ಸಂಪೂರ್ಣ ಪರಿಹಾರ ವಿತರಿಸಬೇಕು ಮತ್ತು ಈ ರೈತ ಕುಟುಂಬಗಳ ಒಬ್ಬ ಸದಸ್ಯರಿಗೆ ಉದ್ಯೋಗ ಕೊಡಬೇಕು ಎಂದು `ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತಪರ ಹೋರಾಟ ಸಮಿತಿʼ ಯ ಮುಖಂಡರು ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಅವರಿಗೆ ಮನವಿ ಸಲ್ಲಿಸಿದ್ದಾರೆ. ರೈತರ ಮನವಿಯನ್ನು ಸ್ವೀಕರಿಸಿದ ಸಚಿವರು ಸೂಕ್ತ ಕ್ರಮದ ಭರವಸೆ ನೀಡಿದರು. ಈ ಬಗ್ಗೆ ಕೆಐಎಡಿಬಿ ಸಿಇಒ ಅವರ ಜತೆ ಮಾತನಾಡಿ, ರೈತರ ಜತೆ ಸಭೆ ನಡೆಸುವಂತೆ ಸೂಚಿಸಿದರು.
ಪಿಎಸ್ಎಲ್ ಕಂಪನಿಯ ಹೆಸರಿನಲ್ಲಿ ಕೆಲವು ಮಧ್ಯವರ್ತಿಗಳು ಮುಗ್ಧ ರೈತರಿಗೆ ಹೆಚ್ಚಿನ ಹಣ ಕೊಡುವ ನಂಬಿಕೆ ಹುಟ್ಟಿಸಿ, ಕೇವಲ 1-2 ಲಕ್ಷ ರೂ. ಮಾತ್ರ ನೀಡಿ ಮೋಸ ಮಾಡಿದ್ದಾರೆ. ವಾಸ್ತವದಲ್ಲಿ ಈ ಜಮೀನು ಕೆಐಎಡಿಬಿಗೆ ಸೇರಿದ್ದು, ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಸರ್ಕಾರವು ಈ ಜಮೀನಿನ ರೈತರಿಗೂ ನೇರವಾಗಿ ಪರಿಹಾರ ಸಂದಾಯ ಮಾಡಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿದೆ. ನಡುಪಿನಾಯಕನಹಳ್ಳಿ ಮತ್ತು ಯಣ್ಣಂಗೂರು ಗ್ರಾಮಗಳ ರೈತರಿಗೆ ಇನ್ನೂ ನೋಟಿಸ್ ನೀಡಿಲ್ಲ ಎಂದು ನಿಯೋಗವು ತಮ್ಮ ಗಮನಕ್ಕೆ ತಂದಿದೆ. ಈ ಬಗ್ಗೆಯೂ ಕೆಐಎಡಿಬಿ ತ್ವರಿತ ಗಮನ ಹರಿಸಲಿದೆ. ಸಂತ್ರಸ್ತ ರೈತರು ಪರಿಹಾರದ ವಿಷಯದಲ್ಲಿ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | ADA Recruitment 2025: ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯಲ್ಲಿದೆ 137 ಹುದ್ದೆ; ಹೀಗೆ ಅಪ್ಲೈ ಮಾಡಿ
ರೈತರ ನಿಯೋಗದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಎನ್. ಮುನೇಗೌಡ, ಬಿ.ಎಂ. ವೆಂಕಟೇಶ, ಸಂತೋಷ್, ಚನ್ನಪ್ಪ, ಈರಪ್ಪ, ಚಂದ್ರಪ್ಪ ಮುಂತಾದ ಮುಖಂಡರಿದ್ದರು.