ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Rain: ಬೆಂಗಳೂರಿನಲ್ಲಿ ಭಾರೀ ಮಳೆ; ವಿಮಾನ ಸಂಚಾರಕ್ಕೆ ಅಡ್ಡಿ

Bengaluru Rain: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿನಲ್ಲಿ ಶನಿವಾರ (ಮಾ. 22) ಧಾರಾಕಾರ ಮಳೆ ಸುರಿದಿದ್ದು, ಇದು ಹಲವು ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದೆ. ʼಹುಣಸಮಾರನಹಳ್ಳಿಯಲ್ಲಿ ಭಾರೀ ಪ್ರಮಾಣದ ನೀರು ನಿಂತಿರುವುದರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಾಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆʼʼ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಇಂಡಿಗೋ ಮತ್ತು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಭಾರಿ ಮಳೆಯಿಂದ ಬೆಂಗಳೂರಿನಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತ

ಸಾಂದರ್ಭಿಕ ಚಿತ್ರ.

Profile Ramesh B Mar 22, 2025 9:12 PM

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿನಲ್ಲಿ ಶನಿವಾರ (ಮಾ. 22) ಬೇಸಗೆ ಮಳೆ ಭರ್ಜರಿಯಾಗಿ ಸುರಿದಿದೆ (Bengaluru Rain). ನಗರದ ಹಲವೆಡೆ ಸಂಜೆ ಧಾರಕಾರ ಮಳೆಯಾಗಿದ್ದು, ಕೆಲ ಸ್ಥಳಗಳಲ್ಲಿ ರಸ್ತೆ ತುಂಬಾ ಮಳೆ ನೀರು ತುಂಬಿಕೊಂಡು ಸಾರ್ವಜನಿಕರು ಪರದಾಡುವಂತಾಗಿದೆ. ಇತ್ತ ಭಾರೀ ಮಳೆಯಿಂದಾಗಿ ಬೆಂಗಳೂರಿಗೆ ತೆರಳುವ ಕನಿಷ್ಠ 10 ವಿಮಾನಗಳನ್ನು ಚೆನ್ನೈಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವ ಹೆಚ್ಚಿನ ರಸ್ತೆಗಳು ಜಲಾವೃತವಾಗಿವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಸಂಜೆ 6 ಗಂಟೆಯ ನಂತರದ ವಿಮಾನಗಳು ವಿಳಂಬವಾಗಿವೆ.

ʼʼಹುಣಸಮಾರನಹಳ್ಳಿಯಲ್ಲಿ ಭಾರೀ ಪ್ರಮಾಣದ ನೀರು ನಿಂತಿರುವುದರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಾಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆʼʼ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.



ಮಾರ್ಗಸೂಚಿ ಬಿಡುಗಡೆಗೊಳಿಸಿದ ಇಂಡಿಗೋ

ಈ ಮಧ್ಯೆ ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಧಾರಾಕಾರ ಮಳೆಯೂ ಸುರಿಯುತ್ತಿದೆ. ಇದು ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಿದೆ. ʼʼಸದ್ಯ ನಾವು ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ತಿಳಿಸುತ್ತೇವೆʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ. ವಾತಾವರಣ ತಿಳಿಯಾದ ಕೂಡಲೇ ವಿಮಾನ ಸಂಚಾರ ಮಾಮೂಲಿನಂತಾಗಲಿದೆ ಎಂದಿದೆ.

ಈ ಸುದ್ದಿಯನ್ನೂ ಓದಿ: Karnataka Weather: ರಾಜ್ಯದಲ್ಲಿ ಮುಂದಿನ 3 ದಿನ ಭರ್ಜರಿ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

"ನಮ್ಮ ವೆಬ್‌ಸೈಟ್‌ ಮೂಲಕ ನಿಮ್ಮ ಪ್ರಯಾಣದ ಸ್ಥಿತಿ-ಗತಿಯನ್ನು ನಿರಂತರವಾಗಿ ಗಮನಿಸಬಹುದು. ಜತೆಗೆ ನಿಮಗೆ ರೀಬುಕಿಂಗ್ ಆಯ್ಕೆಯೂ ಲಭ್ಯ. ಜತೆಗೆ ಟಿಕೆಟ್‌ ರದ್ದುಪಡಿಸಿದರೆ ಮೊತ್ತವನ್ನು ಮರುಪಾವತಿಸಲಾಗುತ್ತದೆʼʼ ಎಂದು ವಿವರಿಸಿದೆ.

ಇಂಡಿಗೋ ಸಿಬ್ಬಂದಿಯೊಬ್ಬರು ನ್ಯೂಸ್ 18 ಜತೆ ಮಾತನಾಡಿ, "ಕೆಟ್ಟ ಹವಾಮಾನದಿಂದಾಗಿ ಕೆಲವು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. ಮಧ್ಯಾಹ್ನದವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಸಂಜೆ ಸುರಿದ ಭಾರೀ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದೆ. ವಿಮಾನಗಳ ಹಾರಾಟ ಸಮಯವನ್ನು ಒಂದರ ಹಿಂದೆ ಒಂದರಂತೆ ಹೊಂದಿಸಲಾಗುತ್ತದೆ. ಒಂದು ಲಾಟ್ ಅಸ್ತವ್ಯಸ್ತವಾದರೆ ಅದು ಉಳಿದ ಲಾಟ್‌ಗಳ ಮೇಲೂ ಪರಿಣಾಮ ಬೀರುತ್ತದೆʼʼ ಎಂದು ಮಾಹಿತಿ ನೀಡಿದ್ದಾರೆ.



ಏರ್‌ ಇಂಡಿಯಾ ವಿಮಾನ ಸಂಚಾರದ ವೇಳೆ ಪರಿಣಾಮ

ಸದ್ಯದ ಹವಾಮಾನ ತನ್ನ ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ ಎಂದು ಏರ್‌ ಇಂಡಿಯಾ ಕೂಡ ತಿಳಿಸಿದೆ. "ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಎಲ್ಲ ಪ್ರಯಾಣಿಕರು ಅವರ ವಿಮಾನದ ಸ್ಥಿತಿಯನ್ನು ಪರಿಶೀಲಿಸಬೇಕುʼʼ ಎಂದು ಮನವಿ ಮಾಡಿದೆ.

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ

ಬಿಸಿಲ ಬೇಗೆಯಿಂದ ಬೆಂದಿದ್ದ ಬೆಂಗಳೂರಿಗೆ ಶನಿವಾರ ಮಳೆ ತಂಪೆರೆಯುವ ಜತೆಗೆ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಸಿಲಿಕಾನ್‌ ಸಿಟಿಯ ಹೆಣ್ಣೂರು, ಟಿನ್‌ ಪ್ಯಾಕ್ಟರಿ, ಕಲ್ಯಾಣ ನಗರ, ಮೇಖ್ರಿ ಸರ್ಕಲ್‌, ಹೆಬ್ಬಾಳ, ಯಲಹಂಕ, ರಾಜರಾಜೇಶ್ವರಿ ನಗರ ಭಾಗದ ಸುತ್ತಮುತ್ತ ಭಾರಿ ಮಳೆಯಾಗಿದ್ದರೆ, ಇನ್ನೂ ಉಳಿದ ಕಡೆಗಳಲ್ಲಿ ಗುಡುಗು ಸಹಿತ ಮೋಡ ಕವಿದ ವಾತಾವರಣದಿಂದ ಕಂಡುಬಂದಿದೆ.