Traffic Alert: ಬೆಂಗಳೂರಿನ ಈ ಮೇಲ್ಸೇತುವೆ ನಾಲ್ಕು ದಿನ ಬಂದ್, ಪರ್ಯಾಯ ಮಾರ್ಗ ಇಲ್ಲಿದೆ
Traffic Alert: ಹೆಬ್ಬಾಳ ಫ್ಲೈಓವರ್ ಗ್ರೀಡ್ ಅಳವಡಿಕೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ. ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಈ ಬಂದ್ ಜಾರಿಯಲ್ಲಿರುತ್ತದೆ.

ಹೆಬ್ಬಾಳ ಮೇಲ್ಸೇತುವೆ

ಬೆಂಗಳೂರು: ರಾಜ್ಯದ ರಾಜಧಾನಿಯ ಪ್ರಮುಖ ಫ್ಲೈಓವರ್ಗಳಲ್ಲಿ ಒಂದಾದ ಹೆಬ್ಬಾಳ ಮೇಲ್ಸೇತುವೆ (Hebbala Flyover) ಬಂದ್ ಆಗಲಿದೆ. ಬಿಡಿಎ ಕಾಮಗಾರಿ (BDA Works) ಹಿನ್ನೆಲೆ 4 ದಿನಗಳ ಕಾಲ ಫ್ಲೈಓವರ್ ಬಂದ್ ಆಗಲಿದೆ. ಎಸ್ಟೀಮ್ ಮಾಲ್ನಿಂದ ಬಾಪ್ಟಿಸ್ಟ್ ಆಸ್ಪತ್ರೆವರೆಗಿನ ಮಾರ್ಗ ಬಂದ್ ಆಗಲಿದ್ದು, ಈ ವೇಳೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು (Traffic alert) ಪ್ರಕಟಣೆ ಹೊರಡಿಸಿದ್ದಾರೆ. ಪರ್ಯಾಯ ಮಾರ್ಗಗಳು ಹೇಗಿದೆ?
ಹೆಬ್ಬಾಳ ಫ್ಲೈಓವರ್ ಗ್ರೀಡ್ ಅಳವಡಿಕೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ. ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಈ ಬಂದ್ ಜಾರಿಯಲ್ಲಿರುತ್ತದೆ. ಎಸ್ಟೀಮ್ ಮಾಲ್ ಕಡೆಯಿಂದ ನಗರಕ್ಕೆ ಬರುವ ಮಾರ್ಗ ಬಂದ್ ಆಗಲಿದೆ. ಬಿಡಿಎ ವತಿಯಿಂದ ಈ ಗ್ರೀಡ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಈ ಅಳವಡಿಕೆ ಕಾರ್ಯ ಇಂದಿನಿಂದ ನಾಲ್ಕು ದಿನಗಳವರೆಗೆ ನಡೆಯಲಿದ್ದು, ರಾತ್ರಿ 12 ರಿಂದ 3 ಗಂಟೆಯವರೆಗೆ ಮುಂದುವರಿಯಲಿದೆ.
ಈ ವೇಳೆಯಲ್ಲಿ ಹೆಬ್ಬಾಳ ಫ್ಲೈಓವರ್ ಅನ್ನು ರಾತ್ರಿ 3 ಗಂಟೆಗಳ ಕಾಲ ಬಂದ್ ಮಾಡುವ ಸೂಚನೆ ನೀಡಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದೆ. ಎಸ್ಟೀಮ್ ಮಾಲ್ ಕಡೆಯಿಂದ ಬರುವ ವಾಹನಗಳು ಬಿಇಎಲ್ ಸರ್ಕಲ್ ಮೂಲಕ ಸರ್ವೀಸ್ ರಸ್ತೆ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ನಗರ ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ: DK Shivakumar: ಬೆಂಗಳೂರು ನಾಗರಿಕರಿಗೆ ಗುಡ್‌ನ್ಯೂಸ್! ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕೋಕೆ ಸರ್ಕಾರ ಮಾಸ್ಟರ್ ಪ್ಲ್ಯಾನ್