Rohit Sharma: ʼಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೆ ಸ್ಫೂರ್ತಿʼ; ರೋಹಿತ್ ಸಾಧನೆಗೆ ನೀತಾ ಅಂಬಾನಿ ಮೆಚ್ಚುಗೆ
ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಅನುಮೋದನೆಯ ನಂತರ ದಿವೇಚಾ ಪೆವಿಲಿಯನ್ ಲೆವೆಲ್ 3 ಗೆ ರೋಹಿತ್ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಈ ಮೂಲಕ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕಾರ್ ಮತ್ತು ವಿಜಯ್ ಮರ್ಚೆಂಟ್ ಅವರೊಂದಿಗೆ ಐಕಾನಿಕ್ ಸ್ಟೇಡಿಯಂನಲ್ಲಿ ರೋಹಿತ್ ಹೆಸರು ಕೂಡ ಕಾಣಿಸಿಕೊಂಡಿದೆ.


ಮುಂಬಯಿ: ಮುಂಬೈನ ವಾಂಖೆಡೆ ಸ್ಟೇಡಿಯಂನ(Wankede stadium) ಸ್ಟ್ಯಾಂಡ್‌ಗೆ ಶುಕ್ರವಾರ ರೋಹಿತ್ ಶರ್ಮಾ(Rohith Sharma) ಹೆಸರಿಡಲಾಗಿತ್ತು. ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರಾದ ನೀತಾ ಎಂ. ಅಂಬಾನಿ(Nita Ambani) ಅವರು ರೋಹಿತ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಇದು ಯುವ ಕ್ರಿಕೆಟಿಗರಿಗೆ 'ಶಾಶ್ವತ ಸ್ಫೂರ್ತಿಯ ಗುರುತು' ಎಂದು ಹೇಳಿದ್ದಾರೆ.
"ಅಭಿನಂದನೆಗಳು, ರೋಹಿತ್! ವಾಂಖೆಡೆ ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬರನ್ನು ಗೌರವಿಸುತ್ತಿರುವಾಗ, ಅದು ಈಗ ನಿಮ್ಮ ನೆನಪುಗಳನ್ನು ಮಾತ್ರವಲ್ಲ, ನಿಮ್ಮ ಹೆಸರನ್ನು ಸಹ ಹೊಂದಿದೆ. ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೆ ಸ್ಫೂರ್ತಿಯ ಶಾಶ್ವತ ಸಂಕೇತವಾಗಿದೆ. ನಮ್ಮ ನಗರ ಮತ್ತು ದೇಶದ ನಿಜವಾದ ದಂತಕಥೆ" ಎಂದು ಅಂಬಾನಿ ಅವರು ರೋಹಿತ್ ಗುಣಗಾನ ಮಾಡಿದ್ದಾರೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಅನುಮೋದನೆಯ ನಂತರ ದಿವೇಚಾ ಪೆವಿಲಿಯನ್ ಲೆವೆಲ್ 3 ಗೆ ರೋಹಿತ್ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಈ ಮೂಲಕ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕಾರ್ ಮತ್ತು ವಿಜಯ್ ಮರ್ಚೆಂಟ್ ಅವರೊಂದಿಗೆ ಐಕಾನಿಕ್ ಸ್ಟೇಡಿಯಂನಲ್ಲಿ ರೋಹಿತ್ ಹೆಸರು ಕೂಡ ಕಾಣಿಸಿಕೊಂಡಿದೆ.
A memorable evening at Wankhede that will be remembered for a long time 🤩💙
— Mumbai Indians (@mipaltan) May 17, 2025
Watch it all on today's #MIDaily ➡ https://t.co/qvrecUQRIM#MumbaiIndians #PlayLikeMumbai #RohitSharmaStand pic.twitter.com/ckCxCGk9fJ
ರೋಹಿತ್ ಶರ್ಮಾ ಅವರ ಹೆಸರನ್ನು ಕ್ರೀಡಾಂಗಣದ ದಿವೇಚಾ ಪೆವಿಲಿಯನ್ (ಲೆವೆಲ್ 3) ಸ್ಟ್ಯಾಂಡ್‌ಗೆ, ಗ್ರ್ಯಾಂಡ್ ಸ್ಟ್ಯಾಂಡ್‌ಗೆ (ಲೆವೆಲ್ 3) ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಹಾಗೂ ಗ್ರ್ಯಾಂಡ್ ಸ್ಟ್ಯಾಂಡ್‌ಗೆ (ಲೆವೆಲ್ 4) ಮಾಜಿ ನಾಯಕ ಅಜಿತ್ ವಾಡೇಕರ್ಅವರ ಹೆಸರುಗಳನ್ನು ಇಡಲಾಯಿತು.
ವಾಡೇಕರ್ ಅವರು . 2018ರ ಆಗಸ್ಟ್‌ನಲ್ಲಿ ಅವರು ನಿಧನರಾದರು. ಅವರು 1966–1974ರ ಅವಧಿಯಲ್ಲಿ ಭಾರತ ತಂಡದಲ್ಲಿ 37 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದರು.