Viral Video: ವಿಮಾನದ ಸೀಟಿನಲ್ಲಿ ಕುಳಿತ ಶ್ವಾನ ನೋಡಿ ನೆಟ್ಟಿಗರು ಹೇಳಿದ್ದೇನು? ವಿಡಿಯೊ ವೈರಲ್
ಬೀಜಿಂಗ್‌ನಿಂದ ಟೋಕಿಯೊಗೆ ವಿಮಾನದಲ್ಲಿ ಪ್ರಯಾಣಿಸುವಾಗ ಮಾಲೀಕಳ ಪಕ್ಕದಲ್ಲಿ ನಾಯಿಯೊಂದು ಸದ್ದಿಲ್ಲದೇ ಕುಳಿತಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿತ್ತು. ನೆಟ್ಟಿಗರು ಕೂಡ ಇದನ್ನು ನೋಡಿ ಫಿದಾ ಆಗಿ ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.


ನವದೆಹಲಿ: ವಿಮಾನದೊಳಗೆ ನಾಯಿಯೊಂದು ಪ್ರಯಾಣಿಕರಂತೆ ಸೀಟಿನಲ್ಲಿ ಆರಾಮವಾಗಿ ಕುಳಿತು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಅಲಾಸ್ಕನ್ ಮಲಾಮುಟ್ ಎಂಬ ತಳಿಯ ನಾಯಿಯೊಂದು ಬೀಜಿಂಗ್‌ನಿಂದ ಟೋಕಿಯೊಗೆ ವಿಮಾನದಲ್ಲಿ ಪ್ರಯಾಣಿಸುವಾಗ ಅದರ ಮಾಲೀಕಳ ಪಕ್ಕದಲ್ಲಿ ಸದ್ದಿಲ್ಲದೆ ಕುಳಿತಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೊವನ್ನು ಪ್ರಯಾಣಿಕನೊಬ್ಬ ಸೆರೆಹಿಡಿದಿದ್ದು, ನಾಯಿ ಸಾಮಾನ್ಯ ಪ್ರಯಾಣಿಕನಂತೆ ಕುಳಿತಿರುವುದನ್ನು ನೋಡಿ ಆಶ್ಚರ್ಯಚಕಿತನಾಗಿದ್ದಾನಂತೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮತ್ತು ಟೋಕಿಯೊಗೆ ಹೋಗುವ ವಿಮಾನದಲ್ಲಿ ನಾಯಿ ಪ್ರಯಾಣಿಕರ ಸೀಟಿನಲ್ಲಿ ಸುಮ್ಮನೆ ಕುಳಿತಿರುವುದನ್ನು ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕಿರುಚಾಡುವ ಮಗುವಿನ ಪಕ್ಕದಲ್ಲಿ ಕುಳಿತುಕೊಳ್ಳುವ ಬದಲು ಈ ನಾಯಿಯ ಪಕ್ಕದಲ್ಲಿ ಕುಳಿತುಕೊಳ್ಳಲು ನಾನು ಹೆಚ್ಚುವರಿ ಹಣವನ್ನು ಪಾವತಿಸುತ್ತೇನೆ" ಎಂದು ಒಬ್ಬ ನೆಟ್ಟಿಗರು ಹೇಳಿದ್ದಾರೆ. ಮತ್ತೊಬ್ಬರು, "ಅಯ್ಯೋ ಕ್ಯೂಟಿ. ನಾನು ಅವನ ಪಕ್ಕದಲ್ಲಿ ಕುಳಿತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು" ಎಂದು ಕಾಮೆಂಟ್ ಮಾಡಿದ್ದಾರೆ. ಜನರು ನಾಯಿಯ ಶಾಂತ ನಡವಳಿಕೆಯನ್ನು ಹೊಗಳಿ ಅದನ್ನು "ಒಳ್ಳೆಯ ನಡವಳಿಕೆಯ ನಾಯಿ" ಎಂದು ಕರೆದಿದ್ದಾರೆ. ಯಾಕೆಂದರೆ ವಿಡಿಯೊದಲ್ಲಿ ಹಾರಾಟದ ಉದ್ದಕ್ಕೂ ಅದು ಸದ್ದಿಲ್ಲದೆ ಕುಳಿತಿದೆ ಹೊರತು ಸ್ವಲ್ಪವೂ ಬೊಗಳಲಿಲ್ಲ, ಚಲಿಸಲಿಲ್ಲ ಅಥವಾ ಯಾವುದೇ ತೊಂದರೆ ಉಂಟುಮಾಡಲಿಲ್ಲ.
ವಿಡಿಯೊ ಇಲ್ಲಿದೆ ನೋಡಿ...
Gigantic dog appears happy as he sits on a seat on a flight from Beijing to Tokyo. pic.twitter.com/1BW2oe0BOY
— Oli London (@OliLondonTV) May 15, 2025
ಈ ವಿಡಿಯೊ 15,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಆದರೆ ಈ ವಿಡಿಯೋ ಈಗ ಟ್ರೆಂಡಿಂಗ್ ಆಗುತ್ತಿದ್ದರೂ, ಇದು ಮೂಲತಃ 2019 ರದ್ದಾಗಿದ್ದು, ಚೀನಾ ಸದರ್ನ್ ಏರ್‌ಲೈನ್ಸ್ ಹಾರಾಟದ ಸಮಯದಲ್ಲಿ ತೆಗೆದಿದ್ದು ಎನ್ನಲಾಗಿದೆ. ಈ ಹಿಂದೆ ಡಾಲ್ಮೇಷಿಯನ್ ತಳಿಯ ಸ್ಪಾಟಿ ಎಂಬ ಹೆಸರಿನ ನಾಯಿಯೊಂದು ಸಿಂಗಾಪುರದಿಂದ ಟೋಕಿಯೊಗೆ ಸಿಂಗಾಪುರ್ ಏರ್‌ಲೈನ್ಸ್ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಸೀಟಿನಲ್ಲಿ ತನ್ನ ಮಾಲೀಕಳ ಜೊತೆ ಪ್ರಯಾಣಿಸಿತ್ತು. ಈ ವಿಡಿಯೊವನ್ನು ಮಾಲೀಕಳು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಕೈ ಹಿಡಿಯಲು ಬಂದ ವರನಿಗೆ ವಧು ಹೀಗಾ ಮಾಡೋದು? ವರ ಫುಲ್ ಶಾಕ್! ವಿಡಿಯೊ ನೋಡಿ
ಐದೂವರೆ ಗಂಟೆಗಳ ವಿಮಾನ ಪ್ರಯಾಣದ ವೇಳೆ ಸ್ಪಾಟಿ ಶೌಚಾಲಯಕ್ಕೆ ಹೋಗದೆ ಆರಾಮವಾಗಿ ತನ್ನ ಐಷಾರಾಮಿ ಬಿಸಿನೆಸ್ ಕ್ಲಾಸ್ ಸೀಟಿನಲ್ಲಿ ಕುಳಿತಿದೆ. ವಿಡಿಯೊದಲ್ಲಿ ಅದು ಸುಮ್ಮನೆ ಕುಳಿತು ತನ್ನ ಬಾಲವನ್ನು ಮಾತ್ರ ಅಲ್ಲಾಡಿಸುತ್ತಾ ಸಿನಿಮಾ ನೋಡುವುದನ್ನು ಮತ್ತು ಸ್ವಲ್ಪ ಹೊತ್ತು ನಿದ್ರೆ ಮಾಡುವುದು ಸೆರೆಯಾಗಿದೆ. ಸ್ಪಾಟಿಯ ಶಾಂತ ವರ್ತನೆ ಮತ್ತು ನಡವಳಿಕೆಯು ಸೋಶಿಯಲ್ ಮೀಡಿಯಾ ನೆಟ್ಟಿಗರನ್ನು ವಿಸ್ಮಯಗೊಳಿಸಿತ್ತು.