ಸ್ಯಾಂಕಿ ಕೆರೆಯಲ್ಲಿ ಈಶ ಸದ್ಗುರು ಸನ್ನಿಧಿ ಸ್ವಯಂಸೇವಕರಿಂದ ʼಕಾವೇರಿ ಮಹಾ ಆರತಿʼ
ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ರಾಜ್ಯ ಸರ್ಕಾರದಿಂದ ಶುಕ್ರವಾರ ಆಯೋಜಿಸಿದ್ದ ಭವ್ಯ ಕಾವೇರಿ ಮಹಾ ಆರತಿಯ ಭಾಗವಾಗಿ, ಈಶ ಸದ್ಗುರು ಸನ್ನಿಧಿ ಬೆಂಗಳೂರಿನ 100 ಸ್ವಯಂಸೇವಕರು ಕಾವೇರಿ ನದಿಗೆ ʼಕಾವೇರಿ ಮಹಾ ಆರತಿʼ (Cauvery Maha Aarti) ಸಲ್ಲಿಸಿದರು. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ರಾಜ್ಯ ಸರ್ಕಾರದಿಂದ ಶುಕ್ರವಾರ ಆಯೋಜಿಸಿದ್ದ ಭವ್ಯ ಕಾವೇರಿ ಮಹಾ ಆರತಿಯ ಭಾಗವಾಗಿ, ಈಶ ಸದ್ಗುರು ಸನ್ನಿಧಿಯ 100 ಸ್ವಯಂಸೇವಕರು ʼಕಾವೇರಿ ಮಹಾ ಆರತಿʼ (Cauvery Maha Aarti) ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ (DK Shivakumar) ಮತ್ತು ರಾಜ್ಯದ ಇತರ ಹಿರಿಯ ಸಚಿವರು ಮತ್ತು ಗಣ್ಯರು ಉಪಸ್ಥಿತರಿದ್ದರು.
ಸದ್ಗುರುಗಳು ವಿನ್ಯಾಸಗೊಳಿಸಿದ ʼಕಾವೇರಿ ಮಹಾ ಆರತಿʼ ಯು, ಸಾವಿರಾರು ವರ್ಷಗಳಿಂದ ಭೂಮಿ ಮತ್ತು ಜನರನ್ನು ಪೋಷಿಸಿದ ಪವಿತ್ರ ನದಿಯ ಬಗ್ಗೆ ಕರ್ನಾಟಕದ ಜನರು ಹೊಂದಿರುವ ಆಳವಾದ ಗೌರವ ಮತ್ತು ಕೃತಜ್ಞತೆಯನ್ನು ಪ್ರತಿಬಿಂಬಿಸುತ್ತದೆ. ಕೇವಲ ದೃಶ್ಯಮಾನವಾಗಿ ಆಕರ್ಷಕ ನೋಟವಾಗಿರದೆ, ಮಹಾ ಆರತಿಯು ಪ್ರಾಚೀನ ಭೂತ ಶುದ್ಧಿ ಅಭ್ಯಾಸದಲ್ಲಿ ಬೇರೂರಿದ ಶಕ್ತಿಶಾಲಿ ಯೋಗ ಪ್ರಕ್ರಿಯೆಯಾಗಿದೆ. ನಿರ್ದಿಷ್ಟವಾಗಿ, ಈ ಆರತಿಯು ವ್ಯಕ್ತಿಯೊಳಗಿನ ಅಗ್ನಿ ಮತ್ತು ಜಲ ತತ್ವಗಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ಈ ಸುದ್ದಿಯನ್ನೂ ಓದಿ | Karnataka Weather: ಮುಂದಿನ 6 ದಿನ ಬೆಂಗಳೂರು ಸೇರಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ
ಈ ಅರ್ಪಣೆಯು ಈಶ ಫೌಂಡೇಶನ್‌ನ ಕಾವೇರಿ ಕೂಗು ಅಭಿಯಾನವನ್ನು ಸಹ ಪ್ರತಿಧ್ವನಿಸುತ್ತದೆ, ಇದು ಕಾವೇರಿ ನದಿಯನ್ನು ಪುನಶ್ಚೇತನಗೊಳಿಸಲು 2019 ರಲ್ಲಿ ಸದ್ಗುರುಗಳು ಉದ್ಘಾಟಿಸಿದ ಪರಿಸರದ ಯೋಜನೆಯಾಗಿದೆ. ಬೃಹತ್ ಪ್ರಮಾಣದ ಮರ-ಆಧಾರಿತ ಕೃಷಿಯ ಮೂಲಕ, ರೈತರ ಆದಾಯವನ್ನು ಹೆಚ್ಚಿಸಲು, ಮಣ್ಣಿನ ಫಲವತ್ತತೆಯನ್ನು ಪುನಶ್ಚೇತನಗೊಳಿಸಲು, ನೀರಿನ ಸಂಗ್ರಹಣೆಯನ್ನು ಹೆಚ್ಚಿಸಲು ಮತ್ತು ನದಿಯ ಹರಿವನ್ನು ಪುನಸ್ಥಾಪಿಸಲು, ರೈತರಿಗೆ ಬೆಂಬಲ ನೀಡುವ ಗುರಿಯನ್ನು ಕಾವೇರಿ ಕೂಗು ಅಭಿಯಾನ ಹೊಂದಿದೆ. ಈಶ ಸದ್ಗುರು ಸನ್ನಿಧಿ 100 ಸ್ವಯಂಸೇವಕರು ಕಾವೇರಿ ನದಿಗೆ ತಮ್ಮ ಕೃತಜ್ಞತೆ ಅರ್ಪಿಸಲು ಚಿಕ್ಕಬಳ್ಳಾಪುರದಿಂದ ಆಗಮಿಸಿದ್ದರು.