ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pejawar seer: ಪೇಜಾವರ ಶ್ರೀಗಳಿಗೆ 'ಸನಾತನ ರತ್ನ' ಬಿರುದು ನೀಡಿ ಸನ್ಮಾನ

Pejawar seer: ಉಡುಪಿಯ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವದ ಧರ್ಮ ಸಭೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಸನಾತನ ರತ್ನ ಬಿರುದು ನೀಡಿ ಸನ್ಮಾನಿಸಲಾಗಿದೆ.

ಪೇಜಾವರ ಶ್ರೀಗಳಿಗೆ ಸನಾತನ ರತ್ನ ಬಿರುದು ಸಹಿತ ಸನ್ಮಾನ

Profile Prabhakara R Apr 22, 2025 4:44 PM

ಉಡುಪಿ: ಆಂಧ್ರಪ್ರದೇಶದ ನೆಲ್ಲೂರಿನ ಪ್ರತಿಷ್ಠಿತ ಆದಿಶಂಕರ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಹಾಲಂಡಿನ ಮಹರ್ಷಿ ವೇದಿಕ್ ಯುನಿವರ್ಸಿಟಿ ವತಿಯಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಸನಾತನ ರತ್ನ ಬಿರುದು ನೀಡಿ ಸನ್ಮಾನಿಸಲಾಗಿದೆ. ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವದ ಧರ್ಮ ಸಭೆಯಲ್ಲಿ ಆದಿಶಂಕರ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ವಂಕಿ ಪಂಚಾಲಯ್ಯ ದಂಪತಿ ಈ ಗೌರವವನ್ನು ಶ್ರೀಪಾದರಿಗೆ ಸಮರ್ಪಿಸಿದರು.

ಶ್ರೀಗಳ ಸರಳತೆ, ವಿದ್ವತ್ತು, ಸನಾತನ ಧರ್ಮ ರಕ್ಷಣೆಗಾಗಿ ನಿರಂತರವಾಗಿ ದೇಶಾದ್ಯಂತ ಸಂಚರಿಸುತ್ತಾ ಜಾಗೃತಿಕಾರ್ಯ ನಡೆಸುತ್ತಿರುವುದು , ಹಿಂದು ವಿರೋಧಿ ಕೃತ್ಯಗಳ ವಿರುದ್ಧ ಧ್ವನಿ, ಗೋರಕ್ಷಣೆ , ಪೇಜಾವರ ನೂರಾರು ಸಂಸ್ಥೆಗಳ ಯಶಸ್ವಿ ನಿರ್ವಹಣೆ ಅಯೋಧ್ಯೆ ರಾಮ ಮಂದಿರದ ಟ್ರಸ್ಟಿಯಾಗಿ ಸಕ್ರಿಯ ಕರ್ತವ್ಯ ಮತ್ತು ರಾಮನ ಪ್ರತಿಷ್ಠಾಪನಾ ಕಾರ್ಯದಲ್ಲೂ ಮುಂಚೂಣಿಯ ಪಾತ್ರ... ಹೀಗೆ ಸನಾತನ ಧರ್ಮ ಸಂರಕ್ಷಣೆಗಾಗಿ ಶ್ರೀಗಳು ನಡೆಸುತ್ತಿರುವ ಬಹುವಿಧದ ಕೈಂಕರ್ಯಗಳಿಗಾಗಿ ಈ ಗೌರರವನ್ನು ನೀಡಲಾಗಿದೆ ಎಂದು ಅಭಿವಂದನ ಬಿನ್ನ ವತ್ತಳೆಯಲ್ಲಿ ಉಲ್ಲೇಖಿಸಲಾಗಿದೆ.

Pejawar Seer (2)

ಹಿರಿಯ ವಿದ್ವಾಂಸರಾದ ಎ.ಹರಿದಾಸ ಭಟ್, ಪ್ರದ್ಯುಮ್ನಾಚಾರ್ಯ ಜೋಷಿ ವೇಂಕಟೇಶಾಚಾರ್ಯ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಇನ್ನು ಸಂಸ್ಥೆಯ ಅಧೀನದಲ್ಲಿರುವ ನೆಲ್ಲೂರು ಸಮೀಪದ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಗುಡಿಯಲ್ಲಿ ಇತ್ತೀಚೆಗೆ ಶ್ರೀಗಳು ಶ್ರೀ ವೇಂಕಟೇಶ್ವರ ಸ್ವಾಮಿಯ ಪ್ರಾಣಪ್ರತಿಷ್ಠೆಯನ್ನು ನೆರವೇರಿಸಿದ್ದರು.

ಈ ಸುದ್ದಿಯನ್ನೂ ಓದಿ | Roopa Gururaj Column: ಶಿಸ್ತಿನ ಜೀವನ ಒಳ್ಳೆಯ ಆರೋಗ್ಯಕ್ಕೆ ಬುನಾದಿ