ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sachin Tendulkar: 51ರ ಹರಯದಲ್ಲೂ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸಚಿನ್‌

ಸಚಿನ್‌ ಅವರ ಸ್ಫೋಟಕ ಅರ್ಧಶತಕದ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 4 ಅಮೋಘ ಸಿಕ್ಸರ್ ಒಳಗೊಂಡಿತ್ತು. ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಸಚಿನ್ ತೆಂಡೂಲ್ಕರ್ ನಾಯಕತ್ವ ವಹಿಸಿಕೊಂಡಿದ್ದು ಈಗಾಗಲೇ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

51ರ ಹರಯದಲ್ಲೂ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸಚಿನ್‌

Profile Abhilash BC Mar 6, 2025 12:28 PM

ವಡೋದರ: ಇಲ್ಲಿ ನಡೆಯುತ್ತಿರುವ ಇಂಟನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20(IML 2025) ಪಂದ್ಯಾವಳಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ತಮ್ಮ ಬ್ಯಾಟಿಂಗ್‌ ಗತವೈಭವನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. 51ರ ವಯಸ್ಸಿನಲ್ಲೂ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಕೇವಲ 33 ಎಸೆತಗಳಲ್ಲಿ 64 ರನ್ ಪೇರಿಸುವ ಮೂಲಕ ವಯಸ್ಸು ಅನ್ನುವುದು ಸಂಖ್ಯೆ ಮಾತ್ರ. ವಯಸ್ಸಾಗಿರುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಈ ಅದ್ಭುತ ಬ್ಯಾಟಿಂಗ್‌ ಕಂಡು ಕ್ರಿಕೆಟ್ ಅಭಿಮಾನಿಗಳ ಸಂತಸಗೊಂಡಿದ್ದಾರೆ.

ಬುಧವಾರ ನಡೆದಿದ್ದ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಸಚಿನ್‌ ತಮ್ಮ ಬ್ಯಾಟಿಂಗ್‌ ಪರಾಕ್ರಮ ತೋರಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಾಸ್ಟರ್ಸ್ 20 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 269 ರನ್ ಕಲೆ ಹಾಕಿತು. ಶೇನ್ ವ್ಯಾಟ್ಸನ್ 52 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರೆ, ಬೆನ್ ಡಂಕ್ 53 ಎಸೆತಗಳಲ್ಲಿ 132 ರನ್ ಗಳಿಸಿದರು. 270 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಮಾಸ್ಟರ್ಸ್ ಪರವಾಗಿ ಸಚಿನ್ ತೆಂಡೂಲ್ಕರ್ ಏಕಾಂಗಿ ಹೋರಾಟದ ಹೊರತಾಗಿಯೂ 174ರನ್‌ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ 95 ರನ್‌ ಅಂತರದ ಗೆಲುವು ಸಾಧಿಸಿತು.

ಸಚಿನ್‌ ಅವರ ಸ್ಫೋಟಕ ಅರ್ಧಶತಕದ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 4 ಅಮೋಘ ಸಿಕ್ಸರ್ ಒಳಗೊಂಡಿತ್ತು. ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಸಚಿನ್ ತೆಂಡೂಲ್ಕರ್ ನಾಯಕತ್ವ ವಹಿಸಿಕೊಂಡಿದ್ದು ಈಗಾಗಲೇ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಮುಂದಿನ ಪಂದ್ಯವನ್ನು ಮಾ.8 ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಿದೆ.



ಆಡುವ ಬಳಗ

ಭಾರತ: ಸಚಿನ್ ತೆಂಡೂಲ್ಕರ್ (ನಾಯಕ), ನಮನ್ ಓಜಾ, ಇರ್ಫಾನ್ ಪಠಾಣ್, ಪವನ್ ನೇಗಿ, ಸೌರಭ್ ತಿವಾರಿ, ಗುರುಕೀರತ್ ಸಿಂಗ್ ಮಾನ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ರಾಹುಲ್ ಶರ್ಮಾ, ವಿನಯ್ ಕುಮಾರ್.

ಆಸ್ಟ್ರೇಲಿಯಾ: ಶೇನ್ ವ್ಯಾಟ್ಸನ್ (ನಾಯಕ), ಶಾನ್ ಮಾರ್ಷ್, ಬೆನ್ ಡಂಕ್, ಡೇನಿಯಲ್ ಕ್ರಿಶ್ಚಿಯನ್, ನಾಥನ್ ರಿಯರ್ಡನ್, ಬೆನ್ ಕಟಿಂಗ್, ಬೆನ್ ಲಾಫ್ಲಿನ್, ನಾಥನ್ ಕೌಲ್ಟರ್-ನೈಲ್, ಕ್ಸೇವಿಯರ್ ಡೊಹೆರ್ಟಿ, ಬ್ರೈಸ್ ಮೆಕ್‌ಗೇನ್, ಬೆನ್ ಹಿಲ್ಫೆನ್‌ಹಾಸ್.