Chikkaballapur Crime: ಮೈಕ್ರೋ ಫೈನಾನ್ಸ್ ಹಾವಳಿಗೆ ತಾಲೂಕಿನಲ್ಲಿ ಮತ್ತೊಂದು ಬಲಿ
ನಮ್ಮ ಗ್ರಾಮದ ಮಂಜುನಾಥ್ ತೆಲುಗು ಖಾಸಗಿ ಫೈನಾನ್ಸ್ ಗಳಲ್ಲಿ 6.25 ಲಕ್ಷ ಸಾಲ ಪಡೆದು ಕಂತಿಲ ರೂಪದಲ್ಲಿ ಕಟ್ಟುತ್ತಿದ್ದು, ಎಲ್‌ಎಲ್‌ಟಿ ಫೈನಾನ್ಸ್ ಅವರಿಗೆ ಹಣ ಕಟ್ಟಲು ಇಲ್ಲದ ಕಾರಣ ಮನೆಯಲ್ಲಿ ಸಾಲದ ರೂಪದಲ್ಲಿ ಹಣ ತರುತ್ತೇನೆ ಎಂದು ಮಂಜುನಾಥ್ ಹೋಗಿದ್ದು ನೇಣು ಹಾಕಿಕೊಂಡು ಸಾವನಪ್ಪಿದ್ದಾನೆ.

ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತು ತಾಲೂಕಿನ ಕಾದಲವೇಣಿ ಗ್ರಾಪಂನ ಎಂ.ಜಾಲಹಳ್ಳಿ ನಿವಾಸಿ ಮಂಜುನಾಥ್ (೩೪) ನೇಣಿಗೆ ಶರಣಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೌರಿಬಿದನೂರು: ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತು ತಾಲೂಕಿನ ಕಾದಲವೇಣಿ ಗ್ರಾಪಂನ ಎಂ.ಜಾಲಹಳ್ಳಿ ನಿವಾಸಿ ಮಂಜುನಾಥ್ (34) ನೇಣಿಗೆ ಶರಣಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂ.ಚಾಲಹಳ್ಳಿ ಗ್ರಾಮದಲ್ಲಿ ತಳ್ಳುವ ಗಾಡಿಯಲ್ಲಿ ಎಗ್‌ರೈಸ್ ಅಂಗಡಿ ಇಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ್ ವಿವಿಧ ಖಾಸಗಿ ಫೈನಾನ್ಸ್ಗಳಲ್ಲಿ ಸುಮಾರು 6.25 ಲಕ್ಷ ರೂ. ಮಾಡಿ ಕೊಂಡಿದ್ದ ಎನ್ನಲಾಗಿದೆ. ಸಾಲವನ್ನು ಕಂತಿನ ರೂಪದಲ್ಲಿ ಪಾವತಿ ಮಾಡುತ್ತಿದ್ದು ಮಾ.೯ರಂದು ಕಂತಿನ ಹಣ ಕಟ್ಟಬೇಕಿತ್ತು. ಫೈನಾನ್ಸ್ ಸಿಬ್ಬಂದಿ ಒತ್ತಾಯ ಮಾಡಿದ್ದರಿಂದ ಬೇರೆ ಕಡೆ ಸಾಲವನ್ನು ತರುತ್ತೇನೆ ಎಂದು ಹೋದ ಗಂಡ ಇಡುಗುರು ಮತ್ತು ಗೌರಿಬಿದನೂರು ರಸ್ತೆ ಮಧ್ಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ಮುಂಭಾಗದ ಬಯಲು ಪ್ರದೇಶದಲ್ಲಿ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತಿ ಸವಿತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Crime News: ಕೃಷಿ ಹೊಂಡದಲ್ಲಿ ಕರೆಂಟ್ ಶಾಕ್ ಹೊಡೆದು ಮೂವರು ಸಾವು
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಜನರು ಸಾವಿನ ಹಾದಿ ಹಿಡಿಯುತ್ತಿದ್ದು ತಾಲೂಕಿನಲ್ಲಿ ಇದು ಎರಡನೇ ಪ್ರಕರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ಗ್ರಾಮಾಂತರ ಠಾಣೆ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಾಲಹಳ್ಳಿ ಗಂಗಾಧರ್ ಮಾತನಾಡಿ ನಮ್ಮ ಗ್ರಾಮದ ಮಂಜುನಾಥ್ ತೆಲುಗು ಖಾಸಗಿ ಫೈನಾನ್ಸ್ ಗಳಲ್ಲಿ ೬.೨೫ ಲಕ್ಷ ಸಾಲ ಪಡೆದು ಕಂತಿಲ ರೂಪದಲ್ಲಿ ಕಟ್ಟುತ್ತಿದ್ದು, ಎಲ್‌ಎಲ್‌ಟಿ ಫೈನಾನ್ಸ್ ಅವರಿಗೆ ಹಣ ಕಟ್ಟಲು ಇಲ್ಲದ ಕಾರಣ ಭಾನುವಾರದಂದು ಮನೆಯಲ್ಲಿ ಸಾಲದ ರೂಪದಲ್ಲಿ ಹಣ ತರುತ್ತೇನೆ ಎಂದು ಮಂಜುನಾಥ್ ಹೋಗಿದ್ದು ನೇಣು ಹಾಕಿಕೊಂಡು ಸಾವನಪ್ಪಿದ್ದಾನೆ.
ಇಷ್ಟೆಲ್ಲಾ ಆದರೂ ಸಹ ಸೋಮವಾರದ ದಿನ ಎಲ್‌ಎನ್‌ಟಿ ಫೈನಾನ್ಸ್ ನವರು ಹಣ ವಸೂಲಿಗೆ ಸಾವಿನ ಮನೆಬಾಗಿಲಿಗೆ ಹೋಗಿದ್ದು. ಮುಚ್ಚಿ ಗೆದ್ದ ಸಂಬAಧಿಕರು ಮತ್ತು ಗ್ರಾಮಸ್ಥರು ಗೌರಿಬಿದ ನೂರು ರದಲ್ಲಿರುವ ಎಲ್‌ಎನ್‌ಟಿ ಫೈನಾನ್ಸ್ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದು. ವೃತ ನಿರೀಕ್ಷಕ ಕೆಪಿ ಸತ್ಯನಾರಾಯಣ್ ಮಧ್ಯಪ್ರವೇಶಿಸಿ ಮೊದಲು ಶವ ಸಂಸ್ಕಾರ ಮಾಡಿ, ಅಲ್ಲಿ ಆಗ ಬೇಕಾದ ಕೆಲಸ ನೋಡಿ ಅವರನ್ನು ಠಾಣೆಗೆ ಕರೆಸುತ್ತೇವೆ ಎಂದು ತಿಳಿ ಹೇಳಿದಾಗ ಪ್ರತಿಭಟನೆ ಹಿಂಪಡೆದರು.
ಇದೆ ವೇಳೆ ಊರಿನ ಗ್ರಾಮಸ್ಥರು ಸೇರಿದಂತೆ ಗ್ರಾಮಾಂತರ ಠಾಣೆಯ ಪೊಲೀಸರು, ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.