ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನ ವಿರೋಧಿ ಬರಹ ಡಿಎಸ್ಎಸ್ ಮುಖಂಡರು ಆಕ್ರೋಶ
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಸಂವಿಧಾನ ವಿರೋಧಿ ವೀರೇಶ್ ಪ್ರಸಾದ್ ಎಂಬ ಮೂರ್ಖನನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದ ಸಂ ಸ ತಾಲೂಕು ಸಂಚಾಲಕ ಮಾರಶೆಟ್ಟಿಯಲ್ಲಿ ಬಸವರಾಜ್ ಒತ್ತಾಯಿಸಿ ದರು
![IMG_20250206_140435 ok](https://cdn-vishwavani-prod.hindverse.com/media/images/IMG_20250206_140435_ok.max-1280x720.jpg)
![Profile](https://vishwavani.news/static/img/user.png)
ಗುಬ್ಬಿ : ವೀರೇಶ್ ಪ್ರಸಾದ್ ಎಂಬ ವ್ಯಕ್ತಿ ತುಕಾಲಿ ಸಂವಿಧಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದನ್ನು ವಿರೋಧಿಸಿ ಅವನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದಲಿತಪರ ಸಂಘಟ ನೆಯ ಮುಖಂಡರು ಆಗ್ರಹಿಸಿದರು. ದಲಿತ ಕವಿ ಡಾ. ಸಿದ್ದಲಿಂಗಯ್ಯನವರು ಬರೆದ ಹೊಲಯ ಮಾದಿಗರ ಹಾಡು ಎಂಬ ಕವನ ಸಂಕಲನ ಹಾಡನ್ನು ಭೀಮ ಪುತ್ರಿ ಮಂಜು ಎಂಬ ಫೇಸ್ ಬುಕ್ ಖಾತೆಯಿಂದ ದಲಿತರ ಕುರಿತಾಗಿ ಬಂದ ಹಾಡಿಗೆ ವೀರೇಶ್ ಪ್ರಸಾದ್ ಎಂಬ ವ್ಯಕ್ತಿ ತುಕಾಲಿ ಸಂವಿ ಧಾನ ಎಂದು ಕಮೆಂಟ್ ಮಾಡುವ ಮೂಲಕ ದಲಿತರ ಭಾವನೆಗೆ ಧಕ್ಕೆ ಉಂಟು ಮಾಡಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಸಂವಿಧಾನ ವಿರೋಧಿ ವೀರೇಶ್ ಪ್ರಸಾದ್ ಎಂಬ ಮೂರ್ಖನನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದ ಸಂ ಸ ತಾಲೂಕು ಸಂಚಾಲಕ ಮಾರಶೆಟ್ಟಿಯಲ್ಲಿ ಬಸವರಾಜ್ ಬತ್ತಾಯಿಸಿದರು.
ಮುಖಂಡ ಅದಲಗೆರೆ ಈಶ್ವರಯ್ಯ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ತುಕಾಲಿ ಸಂವಿಧಾನ ಎಂಬುವನನ್ನು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಂಡು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ ಎಚ್ ಜಗನ್ನಾಥ್, ಜಿಲ್ಲಾ ಸಂಚಾಲಕ ನಿಟ್ಟೂರ್ ರಂಗಸ್ವಾಮಿ, ರೇಣುಕಾ ಪ್ರಸಾದ್, ಸಚಿನ್ ಕೀರ್ತಿ, ಮಧು, ಚೇತನ್, ಕುಂದರನಹಳ್ಳಿ ನಟರಾಜು, ಮನೋಹರ್, ಕೆಂಪರಾಜು, ಇಮ್ರಾನ್ ಪಾಷಾ, ಮಡಿವಾಳ ಗಂಗಾಧರ್, ಮುಂತಾ ದವರಿದ್ದರು.