ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assault Case: ಸಿಗರೇಟ್‌ ಸೇದಬೇಡಿ ಎಂದ ಆರ್‌ಎಸ್‌ಎಸ್‌ ಮುಖಂಡನ ಮನೆಗೇ ನುಗ್ಗಿ ಥಳಿಸಿದ ಪುಂಡರು!

ಸಿಗರೇಟು ಸೇದಬೇಡಿ ಎಂದು ಬುದ್ದಿ ಹೇಳಿದ್ದಕ್ಕೆ ರೊಚ್ಚಿಗೆದ್ದ ಮುಸ್ಲಿಂ ಪುಂಡರು,ಆರ್‌ಎಸ್‌ಎಸ್‌ ಮುಖಂಡ ಶಿರೀಶ್ ಬಳ್ಳಾರಿ ಮನೆಗೇ ಹುಡುಕಿಕೊಂಡು ಬಂದು ಒಳನುಗ್ಗಿ ಹಲ್ಲೆ ಎಸಗಿದ್ದಾರೆ. ತಡೆಯಲು ಬಂದ ಕುಟುಂಬಸ್ಥರ ಮೇಲೂ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡಿದ ಬಳಿಕ ನಾಲ್ವರು ನಾಪತ್ತೆಯಾಗಿದ್ದಾರೆ.

ಸಿಗರೇಟ್‌ ಸೇದಬೇಡಿ ಎಂದ ಆರ್‌ಎಸ್‌ಎಸ್‌ ಮುಖಂಡನ ಮನೆಗೇ ನುಗ್ಗಿ ಪುಂಡರ ಹಲ್ಲೆ

ಹರೀಶ್‌ ಕೇರ ಹರೀಶ್‌ ಕೇರ Apr 24, 2025 7:04 AM

ಧಾರವಾಡ: ಆರ್‌ಎಸ್‌ಎಸ್‌ ಮುಖಂಡನ (RSS Leader) ಮನೆಗೇ ನುಗ್ಗಿ ನಾಲ್ವರು ಮುಸ್ಲಿಂ ಪುಂಡರು (Muslim Youths) ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಕುಟುಂಬಸ್ಥರ ಮೇಲೂ ಹಲ್ಲೆ (Assault Case) ಮಾಡಿದ್ದಾರೆ. ಧಾರವಾಡ (Dharwad news) ನಗರದ ಗಾಂಧಿ ಚೌಕ್ ಬಳಿ ಈ ಘಟನೆ ನಡೆದಿದೆ. ಸಿಗರೇಟು ಸೇದಬೇಡಿ (Cigarette smoking) ಎಂದು ಬುದ್ಧಿವಾದ ಹೇಳಿದ್ದಕ್ಕೆ ನಾಲ್ವರು ಯುವಕರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆರ್‌ಎಸ್‌ಎಸ್‌ ಮುಖಂಡ ಶಿರೀಶ್ ಬಳ್ಳಾರಿ ಮತ್ತು ಕುಟುಂಬಸ್ಥರ ಮೆಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

ಸಿಗರೇಟು ಸೇದಬೇಡಿ ಎಂದು ಬುದ್ದಿ ಹೇಳಿದ್ದಕ್ಕೆ ರೊಚ್ಚಿಗೆದ್ದ ಮುಸ್ಲಿಂ ಪುಂಡರು,ಆರ್‌ಎಸ್‌ಎಸ್‌ ಮುಖಂಡ ಶಿರೀಶ್ ಬಳ್ಳಾರಿ ಮನೆಗೇ ಹುಡುಕಿಕೊಂಡು ಬಂದು ಒಳನುಗ್ಗಿ ಹಲ್ಲೆ ಎಸಗಿದ್ದಾರೆ. ತಡೆಯಲು ಬಂದ ಕುಟುಂಬಸ್ಥರ ಮೇಲೂ ಹಲ್ಲೆ ನಡೆಸಲಾಗಿದೆ. ನಾಲ್ವರು ಮುಸ್ಲಿಂ ಯುವಕರು ಶಿರೀಶ್ ಬಳ್ಳಾರಿ ಅವರ ಮನೆಯವರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಹಲ್ಲೆ ಮಾಡಿದ ಬಳಿಕ ನಾಲ್ವರು ನಾಪತ್ತೆಯಾಗಿದ್ದಾರೆ.

ಘಟನೆ ಸಂಬಂಧ ಶಿರೀಶ್ ಬಳ್ಳಾರಿ ಅವರು ಧಾರವಾಡ ಶಹರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದ ಪೊಲೀಸರು ಹಲ್ಲೆ ನಡೆಸಿದ ನಾಲ್ವರು ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆರ್‌ಎಸ್‌ಎಸ್ ಮುಖಂಡನ ಮೇಲಿನ ಹಲ್ಲೆಗೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಶಹರ ಪೋಲಿಸ್ ಠಾಣೆಯ ಎದುರು ಸೇರಿದ ನೂರಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ಇದನ್ನೂ ಓದಿ: IAF officer Attacked: ವಾಯುಸೇನೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಅರೆಸ್ಟ್‌; ಅಧಿಕಾರಿಯಿಂದಲೂ ನಡೆದಿತ್ತು ಹಲ್ಲೆ! ಇಲ್ಲಿದೆ ವಿಡಿಯೋ