Bhagya Lakshmi Serial: ಭಾಗ್ಯಾಳನ್ನು ನಯವಂಚಕಿ ಎಂದಿದ್ದಕ್ಕೆ ಶ್ರೇಷ್ಠಾಳ ಕೆನ್ನೆಗೆ ಬಾರಿಸಿದ ತಾಂಡವ್
ಶ್ರೇಷ್ಠಾ, ಭಾಗ್ಯಾ ಇರುವ ಮನೆಗೆ ಹೋಗಿ ಹಾಡು ಹಗಲೇ ನೀನು ನನ್ನ ಮನೇನ ನೀನು ದರೋಡೆ ಮಾಡ್ತಾ ಇದ್ರೆ ಈ ಶ್ರೇಷ್ಠಾ ಸುಮ್ನೆ ನೋಡ್ಕೊಂಡು ಕೂರಲ್ಲ.. ಮಕ್ಕಳನ್ನು ಮುಂದೆ ಇಡ್ಕೊಂಡು ನನ್ನವರನ್ನ ದೋಚೊ ಕೆಲಸ ಮಾಡ್ತಾ ಇದ್ದಾಳಲ್ಲ ಭಾಗ್ಯಾ ಅದನ್ನ ನಿಲ್ಸಿ ಸ್ವಲ್ಪ ಮಾನ ಮರಿಯಾದೆಯಿಂದ ಬದುಕೊ ಅಂತ ಹೇಳೋಕೆ ಬಂದಿದ್ದೇನೆ ಎನ್ನುತ್ತಾಳೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Kannada Serial) ಹೊಸ ದಿಕ್ಕಿನತ್ತ ಸಾಗುತ್ತಿದೆ. ಸದ್ಯದಲ್ಲೇ ಈ ಧಾರಾವಾಹಿ ಹೊಸ ತಿರುವನ್ನು ಪಡೆದುಕೊಳ್ಳಲಿದ್ದು, ಭಾಗ್ಯಾಳ ಹೊಸ ಪಯಣ ಶುರುವಾಗಲಿದೆ. ಸದ್ಯ ಭಾಗ್ಯಾ ಕೆಲಸ ಕಳೆದುಕೊಂಡು ಖಾಲಿ ಕೈಯಲ್ಲಿದ್ದಾಳೆ. ಮಗಳ ಸ್ಕೂಲ್ ಫೀಸ್ ಕಟ್ಟೋಕು ಭಾಗ್ಯಾಳ ಬಳಿ ಹಣವಿಲ್ಲ. ಭಾಗ್ಯಾಳ ಕೆಲಸ ಹೋಗಿರುವುದು ಸೂರ್ಯವಂಶಿ ಕುಟುಂಬದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದರ ನಡುವೆ ತಾಂಡವ್ ಮಗಳ ಫೀಸ್ ಕಟ್ಟಿದ ವಿಚಾರ ಶ್ರೇಷ್ಠಾಳಿಗೆ ತಿಳಿದಿದ್ದು, ಕೆರಳಿ ಕೆಂಡವಾಗಿದ್ದಾಳೆ. ಈ ಗಲಾಟೆ ಮಧ್ಯೆ ತಾಂಡವ್ ಶ್ರೇಷ್ಠಾಳ ಕೆನ್ನೆಗೆ ಬಾರಿಸಿದ್ದಾನೆ.
ತನ್ವಿ ಕಾಲೇಜಿನಲ್ಲಿ ಕೋರ್ಸ್‌ಗೆ ಸೇರಲು 80,000 ರೂಪಾಯಿ ಬೇಕಾಗಿದೆ, ನಾಳೆಯೇ ಕೊನೆಯ ದಿನ ಎಂದು ಹೇಳುತ್ತಾಳೆ. ಏನಾದರೂ ಮಾಡಿ ಹಣ ಹೊಂದಿಸೋಣ, ಈಗ ಗಲಾಟೆ ಮಾಡಬೇಡ ಎಂದು ಭಾಗ್ಯಾ ಸಮಾಧಾನ ಮಾಡುತ್ತಾಳೆ. ಮರುದಿನ ಭಾಗ್ಯಾ ಕಾಲೇಜಿಗೆ ಬಂದು ಪ್ರಿನ್ಸಿಪಲ್ ಜೊತೆ ಹಣದ ಸಮಸ್ಯೆಯಿದೆ.. ಸ್ವಲ್ಪ ತಡವಾಗಿ ಫೀಸ್ ಕಟ್ಟಿದರೆ ಸಾಕಾ ಎಂದು ಕೇಳಲು ಮುಂದಾಗುತ್ತಾಳೆ. ಆದರೆ, ಅದಾಗಲೇ ತಾನ್ವಿ ತಂದೆ ತಾಂಡವ್ ಸಹಾಯ ಪಡೆದು ಫೀಸ್ ಕಟ್ಟಿರುತ್ತಾನೆ. ತನ್ವಿ ಮತ್ತು ಅವರ ತಂದೆ ಫೀಸ್ ಕಟ್ಟಿ ಕೋರ್ಸ್ ಬಗ್ಗೆ ಎಲ್ಲ ಡಿಟೇಲ್ಸ್ ಕೇಳಿಕೊಂಡು ಹೋದ್ರಲ್ಲ ಎಂದು ಪ್ರಿನ್ಸಿಪಪ್ ಹೇಳುತ್ತಾರೆ.
ಇದನ್ನ ಕೇಳಿ ಭಾಗ್ಯಾಗೆ ಆಘಾತ ಆಗುತ್ತದೆ. ಹೊರಗಡೆ ಬಂದಾಗ ತನ್ವಿ ತಾಂಡವ್ ಜೊತೆ ಖುಷಿಯಿಂದ ಮಾತನಾಡುತ್ತಾ ನಗುತ್ತಾ ಕ್ಲಾಸ್ ರೂಮ್ಗೆ ತೆರಳುತ್ತಾಳೆ. ಅತ್ತ ತಾಂಡವ್, ಭಾಗ್ಯಾ ಬಳಿ ಬಂದು ತನ್ವಿ ಖುಷಿಯಾಗಿರೋದು ಅವಳ ಅಪ್ಪನಿಂದ ಮಾತ್ರ ಎಂದು ಹೇಳುತ್ತಾನೆ. ಈ ಘಟನೆ ಬಳಿಕ ತಾಂಡವ್ ಮನೆಗೆ ಬಂದು ರಾತ್ರಿ ತನ್ವಿಗೆ ಮೆಸೇಜ್ ಮಾಡುತ್ತಾನೆ. ಇವತ್ತು ಮಾತ್ರ ಅಲ್ಲ.. ನಿನ್ಗೆ ಯಾವತ್ತೂ ಏನು ಹೆಲ್ಪ್ ಬೇಕಿದ್ರೂ ನಿನ್ ಪಪ್ಪಾನ ಕೇಳ್ಬೇಕು.. ನಾನು ಯಾವತ್ತೂ ನಿನ್ ಜೊತೆ ಇರುತ್ತೇನೆ ಎಂದು ಮೆಸೇಜ್ ಕೇಳುಹಿಸುತ್ತಾನೆ. ಇದಕ್ಕೆ ತನ್ವಿ, ಇವತ್ತು ಗೊತ್ತಾಯಿತು ಪಪ್ಪಾ ನೀವು ನನ್ ಜೊತೆ ಇದ್ದೀರಿ ಅಂತ.. ಏನೇ ಇದ್ರು ನಿಮ್ ಹತ್ರ ಕೇಳ್ತೀನಿ.. ಥ್ಯಾಂಕ್ಸ್ ಫಾರ್ ದಿ ಮನಿ ಪಪ್ಪಾ ಎಂದು ರಿಪ್ಲೇ ಮಾಡುತ್ತಾಳೆ.
ಆಗ ಶ್ರೇಷ್ಠಾ ಬಂದು ತಾಂಡವ್ ಬಳಿ ಇದ್ದ ಮೊಬೈಲ್ ಎಳೆದುಕೊಂಡು ಯಾರಿಗೆ ಮೆಸೇಜ್ ಮಾಡುತ್ತಿದ್ದೀಯಾ ಎಂದು ಕೇಳಿ.. ಎಲ್ಲ ಮೆಸೇಜ್ಗಳನ್ನು ಓದುತ್ತಾಳೆ. ಏನ್ ತಾಂಡವ್ ಇದು ಥ್ಯಾಂಕ್ಸ್ ಫಾರ್ ದಿ ಮನಿ ಅಂತೆಲ್ಲ ಇದೆ.. ನಿನೇನು ದಾನ-ಶೂರ ಕರ್ಣ ಆಗ್ತಾ ಇದ್ದೀಯಾ.. ಹೋಗಿ ಹೋಗಿ ಆ ಭಾಗ್ಯಾಗೆ ಸಪೋರ್ಟ್ ಮಾಡ್ತಾ ಇದ್ದೀಯಾ ಅಲ್ವಾ ಎಂದು ಶ್ರೇಷ್ಠಾ ಕೋಪದಲ್ಲಿ ಕೇಳುತ್ತಾಳೆ. ಆಗ ತಾಂಡವ್, ನಾನುನೇನು ಹೆಲ್ಪ್ ಮಾಡಿದ್ದು ಭಾಗ್ಯಾನಿಗೆ ಅಲ್ಲ.. ನನ್ನ ಮಗಳಿಗೆ. ಯಾವುದೊ ಕೋರ್ಸ್‌ಗೆ ದುಡ್ಡು ಬೇಕು ಅಂದಿದ್ಲು.. ಅದನ್ನ ಕಟ್ಟಿ ಬಂದೆ. ಎಂದಿದ್ದಾನೆ. ಆಗ ಶ್ರೇಷ್ಠಾ ಅದನ್ನು ಭಾಗ್ಯಾ ಕಟ್ಟಬೇಕು.. ನೀನಲ್ಲ ಎಂದಿದ್ದಾಳೆ.
ಶ್ರೇಷ್ಠಾ ಮಾತಿನಿಂದ ಕೆರಳಿದ ತಾಂಡವ್, ತನ್ವಿ ನನ್ನ ಮಗಳು.. ಅವಳ ಫೀಚರ್ನಲ್ಲಿ ನಂದೂ ಪಾಲಿದೆ. ಅವಳ ವಿಷಯದಲ್ಲಿ ನಾನು ಏನು ಮಾಡ್ಬೇಕು.. ಏನು ಮಾಡಬಾರದು ಅಂತ ನೀನು ನನ್ಗೆ ಹೇಳೋಕೆ ಬರ್ಬೇಡ.. ನಿನ್ನ ಕೆಲಸ ಎಷ್ಟಿದೆ ಅಷ್ಟು ನೋಡ್ಕೊ ಎಂದು ಹೇಳಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಶ್ರೇಷ್ಠಾ, ಭಾಗ್ಯಾ ಇರುವ ಮನೆಗೆ ಹೋಗಿ ಹಾಡು ಹಗಲೇ ನೀನು ನನ್ನ ಮನೇನ ನೀನು ದರೋಡೆ ಮಾಡ್ತಾ ಇದ್ರೆ ಈ ಶ್ರೇಷ್ಠಾ ಸುಮ್ನೆ ನೋಡ್ಕೊಂಡು ಕೂರಲ್ಲ.. ಮಕ್ಕಳನ್ನು ಮುಂದೆ ಇಡ್ಕೊಂಡು ನನ್ನವರನ್ನ ದೋಚೊ ಕೆಲಸ ಮಾಡ್ತಾ ಇದ್ದಾಳಲ್ಲ ಭಾಗ್ಯಾ ಅದನ್ನ ನಿಲ್ಸಿ ಸ್ವಲ್ಪ ಮಾನ ಮರಿಯಾದೆಯಿಂದ ಬದುಕೊ ಅಂತ ಹೇಳೋಕೆ ಬಂದಿದ್ದೇನೆ ಎನ್ನುತ್ತಾಳೆ.
ಆಗ ಅಲ್ಲಿಗೆ ತಾಂಡವ್ ಬರುತ್ತಾನೆ. ಒಂದಿಷ್ಟು ಮಾತುಕತೆ ನಡೆಯುತ್ತದೆ.. ಕೊನೆಯಲ್ಲಿ ಭಾಗ್ಯಾಳನ್ನು ತೋರಿಸಿ ನಯ ವಂಚಕಿ ಕಣೋ ಇವನು ಎಂದು ತಾಂಡವ್ ಬಳಿ ಶ್ರೇಷ್ಠಾ ಹೇಳುತ್ತಾಳೆ. ಇದನ್ನು ಕೇಳಿಸಿದ ಕೂಡಲೇ ತಾಂಡವ್ ಶ್ರೇಷ್ಠಾಳ ಕೆನ್ನೆಗೆ ಬಾರಿಸಿದ್ದಾನೆ. ಎಲ್ಲರ ಮುಂದೆಯೇ ತಾಂಡವ್ ತನ್ನ ಕೆನ್ನೆಗೆ ಕಪಾಳಮೋಕ್ಷ ಮಾಡಿರುವುದು ಶ್ರೇಷ್ಠಾಳಿಗೆ ಸಿಟ್ಟು ತರಿಸಿದೆ. ಅತ್ತ ತಾಂಡವ್ ಇದು ಮನೆಯವರನ್ನು ತನ್ನತ್ತ ಸೆಳೆಯಲು ಈ ರೀತಿ ಮಾಡಿದ್ದಾನ ಎಂಬ ಅನುಮಾನ ಕೂಡ ಇದೆ. ಇದಕ್ಕೆಲ್ಲ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
Gold Suresh: ಚೈತ್ರಾ ಬಳಿಕ ಗೋಲ್ಡ್ ಸುರೇಶ್ ನೋಡಲು ಆಸ್ಪತ್ರೆಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳು