Physical Abuse: ಮಗಳನ್ನೇ ಹುರಿದು ಮುಕ್ಕಿದ ಕಾಮಪಿಶಾಚಿ ತಂದೆ ಬಂಧನ
19 ವರ್ಷ ವಯಸ್ಸಿನ ಮಗಳ ಮೇಲೆ ತಂದೆ ಮಂಜುನಾಥ ಅತ್ಯಾಚಾರ ಮಾಡಿದ್ದರ ಜತೆಗೆ ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಆಕೆಗೆ ಬೆದರಿಕೆಯನ್ನೂ ಹಾಕಿದ್ದಾನೆ. ತಂದೆಯ ಕಾಟ, ಬೆದರಿಕೆ ತಾಳಲಾರದೆ ಯುವತಿ ಪಿಜಿಯಲ್ಲಿ ವಾಸ ಮಾಡುತ್ತಿದ್ದಳು.

ಸಾಂದರ್ಭಿಕ ಚಿತ್ರ

ದೇವನಹಳ್ಳಿ: ತಂದೆಯೇ ಮಗಳ ಮೇಲೆ ಕಾಮಪಿಶಾಚಿಯಂತೆ ಅತ್ಯಾಚಾರ (physicial Abuse) ಎಸಗಿದ ಘಟನೆ ಹೊಸಕೋಟೆ (Hosakote) ನಗರದಲ್ಲಿ ವರದಿಯಾಗಿದೆ. ತಂದೆಯಿಂದ ಅತ್ಯಾಚಾರಕ್ಕೊಳಗಾದ ಮತ್ತು ಬೆದರಿಕೆ ಹಾಕಲ್ಪಟ್ಟ (threat) ಯುವತಿಯೊಬ್ಬಳು ಮನೆ ಬಿಟ್ಟು ಪಿಜಿಯಲ್ಲಿ ಆಶ್ರಯ ಪಡೆದ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಂದೆಯೇ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹೊಸಕೋಟೆ ಮಹಿಳಾ ಠಾಣೆ ಪೊಲೀಸರು (Hosakote Women Police) ಆರೋಪಿ ಮಂಜುನಾಥ್ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.
19 ವರ್ಷ ವಯಸ್ಸಿನ ಮಗಳ ಮೇಲೆ ತಂದೆ ಮಂಜುನಾಥ ಅತ್ಯಾಚಾರ ಮಾಡಿದ್ದರ ಜತೆಗೆ ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಆಕೆಗೆ ಬೆದರಿಕೆಯನ್ನೂ ಹಾಕಿದ್ದಾನೆ. ಕಾರು ಚಾಲಕನಾಗಿರುವ ಮಂಜುನಾಥ್ಗೆ ಮೂರು ಜನ ಮಕ್ಕಳು. ಇಬ್ಬರು ಹೆಣ್ಣು, ಒಂದು ಗಂಡು ಮಗು. ಹಿರಿಯ ಮಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಹಾಗೂ ದೂರು ದಾಖಲಾಗಿದೆ. ತಂದೆಯ ಕಾಟ ತಾಳಲಾರದೆ ಯುವತಿ ಪಿಜಿಯಲ್ಲಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಈತ ಹಾಕಿದ್ದ. ಹೀಗಾಗಿ ಜೀವ ಭಯದಿಂದ ಯುವತಿ ಮನೆಯಿಂದ ದೂರ ಉಳಿದಿದ್ದಳು.
ತಂದೆಯಿಂದಾದ ಅತ್ಯಾಚಾರಕ್ಕೆ ನ್ಯಾಯ ಒದಗಿಸುವಂತೆ ಯುವತಿ ಆಗ್ರಹಿಸಿದ್ದು, ಸದ್ಯ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಮಂಜುನಾಥನನ್ನು ಬಂಧಿಸಲಾಗಿದ್ದು, ಬಾಯಿ ಬಿಡಿಸಲಾಗುತ್ತಿದೆ. ಈತ ಇನ್ನಿತರರ ಮೇಲೂ ಇಂಥ ಕೃತ್ಯ ಎಸಗಿದ್ದಾನೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ವಿದ್ಯುತ್ ಕಂಬ ತಲೆ ಮೇಲೆ ಬಿದ್ದು ಮಹಿಳೆಯರ ಸಾವು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ (Bengaluru News) ಮತ್ತೊಂದು ಘೋರ ದುರಂತ ಸಂಭವಿಸಿದೆ. ಜೆಸಿಬಿ ಡಿಕ್ಕಿಯಾಗಿ (Accident News) ವಿದ್ಯುತ್ ಕಂಬ ಮುರಿದುಬಿದ್ದ ಪರಿಣಾಮ ಇಬ್ಬರು ಮಹಿಳೆಯರು (Women death) ಮೃತಪಟ್ಟಿದ್ದಾರೆ. ಬೆಂಗಳೂರಿನ ಸದ್ದುಗುಂಟೆ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಮತಿ (35) ಮತ್ತು ಸೋನಿ (36) ಎಂಬುವವರು ಮೃತಪಟ್ಟಿದ್ದಾರೆ.
ಮೃತ ಸೋನಿ ಕುಮಾರಿ ಬಿಹಾರ ಮೂಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದರು. ಮೃತ ಸುಮತಿ ತಮಿಳುನಾಡು ಮೂಲದವರಾಗಿದ್ದು, ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ಸುದ್ದಗುಂಟೆಪಾಳ್ಯದಲ್ಲಿ ನೆಲೆಸಿದ್ದರು. ಇಬ್ಬರು ತಮ್ಮ ಮಕ್ಕಳನ್ನು ಟ್ಯೂಷನ್‌ನಿಂದ ಮನೆಗೆ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.