Hubballi girl Murder Case: ಹುಬ್ಬಳ್ಳಿ ಬಾಲಕಿ ಹತ್ಯೆ ಕೇಸ್ ಸಹ ಸಿಐಡಿ ತನಿಖೆಗೆ
ಹುಬ್ಬಳ್ಳಿಯ 5 ವರ್ಷದ ಬಾಲಕಿ ಅತ್ಯಾಚಾರ- ಹತ್ಯೆಯಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ವಲಸಿಗ ಕಾರ್ಮಿಕರಿಂದ ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಎಂಂಬ ಅಂಶದತ್ತ ಗಮನ ಸೆಳೆದಿತ್ತು. ಈ ಪ್ರಕರಣದ ಆರೋಪಿ ಬಿಹಾರ ಮೂಲದ ರಿತೇಶ್ ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ.


ಬೆಂಗಳೂರು : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಹತ್ಯೆ ಮಾಡಿದ (Hubballi girl murder case) ಪ್ರಕರಣವನ್ನು ಸಿಐಡಿ ತನಿಖೆಗೆ (CID enquiry) ನೀಡಿ ರಾಜ್ಯ ಸರ್ಕಾರ (Karnataka government) ಆದೇಶ ಹೊರಡಿಸಿದೆ. ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಬಿಹಾರ ಮೂಲದ ರಿತೇಶ್ ಎಂಬಾತ ಹೊತ್ತೊಯ್ದು ಅತ್ಯಾಚಾರಗೈದು ಹತ್ಯೆಗೈದಿದ್ದ. ನಂತರ ಈತನನ್ನು ಪೊಲೀಸರು ಎನ್‌ಕೌಂಟರ್ (Police encounter) ಮಾಡಿದ್ದರು. ಈ ಎನ್‌ಕೌಂಟರ್ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು. ಇದೀಗ ಬಾಲಕಿ ಹತ್ಯೆ ಪ್ರಕರಣವನ್ನೂ ಸಿಐಡಿ ತನಿಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.
ಹುಬ್ಬಳ್ಳಿಯ 5 ವರ್ಷದ ಬಾಲಕಿ ಅತ್ಯಾಚಾರ- ಹತ್ಯೆಯಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ವಲಸಿಗ ಕಾರ್ಮಿಕರಿಂದ ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಎಂಂಬ ಅಂಶದತ್ತ ಗಮನ ಸೆಳೆದಿತ್ತು. ಈ ಪ್ರಕರಣದ ಆರೋಪಿ ಬಿಹಾರ ಮೂಲದ ರಿತೇಶ್ ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆಯಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ರಿತೇಶ್‌ಗೆ ಗುಂಡೇಟು ನೀಡಿದ್ದರು. ಪಿಎಸ್ಐ ಅನ್ನಪೂರ್ಣ ಅವರು ಫೈರಿಂಗ್ ಮಾಡಿದ ಗುಂಡು, ಆರೋಪಿ ರಿತೇಶ್ ಎದೆಗೆ ಬಿದ್ದಿತ್ತು. ಆರೋಪಿ ರಿತೇಶ್ ಸಾವನ್ನಪ್ಪಿದ್ದ.
ಇದು ಪೊಲೀಸರಿಂದ ನಡೆದ ಕೊಲೆ ಎಂದು ಮಾನವ ಹಕ್ಕು ಸಂಘಟನೆಗಳು ತಗಾದೆ ತೆಗೆದಿದ್ದವಲ್ಲದೆ ನ್ಯಾಯಾಂಗ ಪ್ರಕರಣ ದಾಖಲಿಸಿದ್ದವು. ನಂತರ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು.
ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ಜಾಮೀನು ಭವಿಷ್ಯ ವಿಚಾರಣೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Murder Case) ಕೊಲೆ ಕೇಸ್ಗೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಅವರಿಗೆ ನೀಡಲಾಗಿರುವ ಜಾಮೀನು ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಕರ್ನಾಟಕ ಹೈಕೋರ್ಟ್‌ನಿಂದ (karnataka high court) ರೆಗ್ಯುಲರ್ ಬೇಲ್ ಪಡೆದು ಹೊರಗೆ ಬಂದಿದ್ದರು. ಕರ್ನಾಟಕ ಪೊಲೀಸರು ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಇಂದು ಸುಪ್ರೀಂ ಪೀಠದ ಮುಂದೆ ಬರಲಿದೆ.
ಇವತ್ತು ವಿಚಾರಣೆ ಪ್ರಾರಂಭಕ್ಕೂ ಮುನ್ನವೇ ಆರೋಪಿ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆಯಾಗಲಿದೆ. ಪೀಠ ಇವತ್ತು ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ಇತ್ತೀಚೆಗೆ ಏ.8ರಂದು ನಗರದ 57ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾಗಿದ್ದರು. ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಜಾಮೀನು ಪಡೆದರೂ ಪ್ರತಿ ತಿಂಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತು ಹಿನ್ನೆಲೆಯಲ್ಲಿ ಎಲ್ಲರೂ ಕೋರ್ಟ್‌ಗೆ ಹಾಜರಾಗಿದ್ದಾರೆ. ಕೊಲೆ ಪ್ರಕರಣದ ವಿಚಾರಣೆಯನ್ನು ಕೋರ್ಟ್ ನಡೆಸಿದೆ. ಆದರೆ ದರ್ಶನ್ ಮಾತ್ರ ಗೈರಾಗಿದ್ದಾರೆ.
ವಿನಾಯಿತಿ ಅರ್ಜಿಯನ್ನು ದರ್ಶನ್ ಪರ ವಕೀಲರು ಸಲ್ಲಿಸಿದ್ದರು. ಕೇಸ್ ಇದ್ದಾಗ ಕೋರ್ಟ್‌ಗೆ ತಪ್ಪದೇ ಹಾಜರಾಗಬೇಕು. ಗೈರು ಆಗಬಾರದು ಎಂದು ದರ್ಶನ್ ಪರ ವಕೀಲರಿಗೆ ಜಡ್ಜ್ ಸೂಚನೆ ನೀಡಿ ದರ್ಶನ್ ವಿನಾಯಿತಿ ಅರ್ಜಿ ಪುರಸ್ಕರಿಸಿದ್ದಾರೆ. ಪವಿತ್ರಾ ಗೌಡ, ದರ್ಶನ್ ಮಾಜಿ ಮ್ಯಾನೇಜರ್ ನಾಗರಾಜು ಹಾಜರ್ ಆಗಿದ್ದರು. ಕೇಶವಮೂರ್ತಿ, ನಿಖಿಲ್, ಕಾರ್ತಿಕ್ ಮೂವರು ಆರೋಪಿಗಳಿಂದ ಶ್ಯೂರಿಟಿ ಸಲ್ಲಿಕೆಗೆ ಕೋರ್ಟ್ ಸೂಚನೆ ನೀಡಿದೆ. ನ್ಯಾಯಾಧೀಶರಿಂದ ಶ್ಯೂರಿಟಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ. ಸದ್ಯ ವಿಚಾರಣೆ ಮೇ 20ಕ್ಕೆ ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ಗೆ ಜಾಮೀನು ಸಿಕ್ಕರೂ ಸಂಕಷ್ಟ ತಪ್ಪಿಲ್ಲ. ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳಿಗೆ ಸಿಕ್ಕಿರುವ ಜಾಮೀನು ರದ್ದುಗೊಳಿಸುವಂತೆ ಬೆಂಗಳೂರು ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ 5 ತಿಂಗಳಿಗೂ ಹೆಚ್ಚು ಕಾಲ ಸೆರೆಮನೆ ವಾಸ ಅನುಭವಿಸಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದರು. ಬಳಿಕ ಈ ಪ್ರಕರಣದ ಎಲ್ಲಾ ಆರೋಪಿಗಳಿಗೂ ರೆಗ್ಯುಲರ್ ಬೇಲ್ ಸಿಕ್ಕಿತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಪೊಲೀಸ್ ಇಲಾಖೆಯು ಗೃಹ ಇಲಾಖೆಯ ಅನುಮತಿ ಪಡೆದು ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಇದನ್ನೂ ಓದಿ: Murder Case: ಕೌಟುಂಬಿಕ ಕಲಹ; ಪತ್ನಿಯ ತಲೆಯನ್ನೇ ಕಡಿದು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ