ಒನ್ ವರ್ಲ್ಡ್ ಒನ್ ಫ್ಯಾಮಿಲಿ ಎರಡನೇ ಆವೃತ್ತಿಯ ಟಿ-20 ಕ್ರಿಕೆಟ್ ಪಂದ್ಯ
ಭಾರತ ತಂಡದಲ್ಲಿ ಓಪನರ್ ಬ್ಯಾಟ್ಸ್ಮನ್‌ಗಳಾಗಿ ಫೀಲ್ಡಿಗೆ ಇಳಿದ ನಮನ್ ಓಝಾ ಮತ್ತು ಸುಜಿತ್ ಸೋಮಸುಂದರ್ ಜೋಡಿ ಉತ್ತಮ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. 13 ಆಗಿದ್ದಾಗ ಸುಜಿತ್ ವಿಕೆಟ್ ಒಪ್ಪಿಸಿದರು. ಸುಜಿತ್ ಕೇವಲ ೩ ರನ್ ಗಳಿಸಿದ್ದಾಗ ಚಮಿಂಡ ವಾಸ್ ಎಸೆದ ಬಾಲ್ ನೇರವಾಗಿ ಬೇಲ್ಸ್ ಎಗರಿಸಿ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಆಘಾತ ನೀಡಿದರು.
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಶ್ರೀಸಾಯಿ ಕೃಷ್ಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಎರಡನೇ ಆವೃತ್ತಿಯ ಟಿ-20 ಕ್ರಿಕೆಟ್ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ ನೇತೃತ್ವದ ಹಿರಿಯರ ಭಾರತ ತಂಡವು 6 ರನ್‌ಗಳಿಂದ ಅರವಿಂದ ಡಿಸಿಲ್ವ ನೇತೃತ್ವದ ಶ್ರೀಲಂಕಾ ತಂಡವನ್ನು ಮಣಿಸಿ ವಿಜಯದ ಕೇಕೆ ಹಾಕಿತು. 20 ಓವರುಗಳ ಚುಟುಕು ಕ್ರಿಕೆಟ್‌ನಲ್ಲಿ ಮೊದಲಿಗೆ ಟಾಸ್‌ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ ಶಿಸ್ತುಬದ್ಧ ಕ್ಷೇತ್ರರಕ್ಷಣೆ, ಮೊನಚಾದ ಬೌಲಿಂಗ್ ನೆರವಿನಿಂದ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ವನ್ನು ಕಟ್ಟಿ ಹಾಕಲು ಪ್ರಯತ್ನಿಸಿದರೂ 20 ಓವರ್ ಆಟದಲ್ಲಿ 6 ವಿಕೆಟ್ ಕಿತ್ತು 195 ಗಳಷ್ಟು ಬೃಹತ್ ರನ್ ಪೇರಿಸಲು ಅವಕಾಶ ನೀಡಿತು.
ಇದನ್ನೂ ಓದಿ: Sports Budget: ಬಜೆಟ್‌ನಲ್ಲಿ ಕ್ರೀಡೆಗೆ 3794 ಕೋಟಿ ರೂ ನೀಡಿದ ಕೇಂದ್ರ ಸರ್ಕಾರ!
ಭಾರತ ತಂಡದಲ್ಲಿ ಓಪನರ್ ಬ್ಯಾಟ್ಸ್ಮನ್‌ಗಳಾಗಿ ಫೀಲ್ಡಿಗೆ ಇಳಿದ ನಮನ್ ಓಝಾ ಮತ್ತು ಸುಜಿತ್ ಸೋಮಸುಂದರ್ ಜೋಡಿ ಉತ್ತಮ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. 13 ಆಗಿದ್ದಾಗ ಸುಜಿತ್ ವಿಕೆಟ್ ಒಪ್ಪಿಸಿದರು. ಸುಜಿತ್ ಕೇವಲ ೩ ರನ್ ಗಳಿಸಿದ್ದಾಗ ಚಮಿಂಡ ವಾಸ್ ಎಸೆದ ಬಾಲ್ ನೇರವಾಗಿ ಬೇಲ್ಸ್ ಎಗರಿಸಿ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಆಘಾತ ನೀಡಿದರು.
10 ಎಸೆತಗಳಲ್ಲಿ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಬದರೀನಾಥ್ ಅವರ ಜತೆಯಾದ ಮನೋಜ್ ತಿವಾರಿ ಬೌಂಡರಿ ಮೂಲಕ ಅಬ್ಬರಿಸುವ ಸೂಚನೆ ನೀಡಿದರು. ಆದರೆ ೮ನೇ ಓವರ್‌ನಲ್ಲಿ ತಂಡದ ಮೊತ್ತ ೭೯ ಆಗಿದ್ದಾಗ ಬದ್ರಿನಾಥ್ ಔಟಾದರು.ಅವರು ೧೪ ಎಸೆತ ೧೫ ರನ್ ಕಲೆ ಹಾಕಿದ್ದರು. ಇನ್ನು ೨೯ ಎಸೆತಗಳಲ್ಲಿ ೪೪ ರನ್ ಗಳಿಸಿದ್ದ ಮನೋಜ್ ತಿವಾರಿ ತಂಡದ ಒಟ್ಟು ಮೊತ್ತ ೧೪೨ ಆಗಿದ್ದಾಗ ಮುತ್ತಯ್ಯ ಮುರಳೀಧರ್‌ನ್ ವಿಕೆಟ್ ಒಪ್ಪಿಸಿದರು.
೧೯ನೇ ಓವರ್‌ನಲ್ಲಿ ೨೯ ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಯೂಸುಫ್ ಪಠಾನ್ ಬೌಂಡರ್ ಸಿಕ್ಸರ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಂಪೂರ್ಣ ಯಶಸ್ವಿಯಾದರು.೧೯ ವೇ ಓವರ್ ನಲ್ಲಿ ಮೂರು ಎಸೆತೆಗಳು ಬಾಕಿಯಿರುವಾಗ ೩೧ ಎಸೆತಗಳಲ್ಲಿ ೬೧ ರನ್ ಗಳಿಸಿ ತಿಲಾನ್‌ಗೆ ವಿಕೆಟ್ ಒಪ್ಪಿಸಿದಾಗ ತಂಡದ ಮೊತ್ತ ೧೯೨ ಆಗಿತ್ತು.ಯೂಸುಪ್ ಪಠಾನ್ ೬೧ ರನ್‌ಗಳಿಸಿ ಅತಿಹೆಚ್ಚು ರನ್ ಗಳಿಸಿ ಭಾರತದ ತಂಡದಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು. ೨೦ ಓವರುಗಳಲ್ಲಿ ಭಾರತ ತಂಡ ೬ ವಿಕೆಟ್ ನಷ್ಟಕ್ಕೆ ೧೯೫ ರನ್ ಗಳಿಸುವ ಮೂಲಕ ಎದುರಾಳಿ ಶ್ರೀಲಂಕಾಗೆ ೧೯೬ ರನ್‌ಗಳ ಗೆಲುವಿನ ಗುರಿ ನೀಡಿ ಮೊದಲ ಇನ್ನಿಂಗ್ಸ್ ಮುಗಿಸಿತು.
ಮೊದಲ ಇನ್ನಿಂಗ್ಸ್ನಲ್ಲಿ ಶ್ರೀಲಂಕಾದ ಚಮಿಂಡವಾಸ್-೧ ವಿಕೆಟ್,ತಿಲಾನ್-೨ ವಿಕೆಟ್, ಮುತ್ತಯ್ಯ ಮುರಳೀಧರನ್-೧ ವಿಕೆಟ್, ಅಸೆಲಾ-೨ ವಿಕೆಟ್ ಪಡೆದರು.
ಭಾರತದ ೧೯೫ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ೨೦ ಒವರ್ ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೮೯ ರನ್ ಗಳಿಸಲಷ್ಟೇ ಶಕ್ತವಾಗಿ ಆರು ರನ್‌ಗಳ ಆಂತರದಿAದ ಅನಿರೀಕ್ಷಿತ ಸೋಲುನುಭವಿಸಿತು. ಶ್ರೀಲಂಕಾ ತಂಡದಲ್ಲಿ ಉಪುಲ್ ತರಂಗ-೨೧ ಎಸೆತಗಳಲ್ಲಿ ೫೨ ರನ್ ಗಳಿಸಿದರೆ,ಮಿಲಿಂದ ೩೫ಎಸೆತ ೪೦ ೪ನ್,ರೊಮೇಶ್ ಕಲುವಿತರಣ-೪೧ ಎಸೆತ-೬೬ಗಳಿಸಿ ಗಮನ ಸೆಳೆದರೂ ತಂಡವನ್ನು ಗೆಲುವಿ ನತ್ತ ಕೊಂಡೊಯ್ಯುವಲ್ಲಿ ಸಂಪೂರ್ಣ ವಿಫಲರಾದರು.
೬.೨ ಓವರುಗಳವರೆಗೆ ಒಂದೂ ವಿಕೆಟ್ ಕಳೆದುಕೊಳ್ಳದೆ ಆಟವಾಡಿದ ಶ್ರೀಲಂಕಾ ತಂಡದ ಒಟ್ಟು ಮೊತ್ತ ೬೬ ಆಗಿದ್ದಾಗ ಉಪುಲ್ ತರಂಗ ಅವರ ಮೊದಲ ವಿಕೆಟ್ ಒಪ್ಪಿಸಿತು. ನಂತರ ತಂಡದ ಮೊತ್ತ ೧೨೭ ಆಗಿದ್ದಾಗ ೨ನೇ ವಿಕೆಟ್ ೧೪೭ ಆಗಿದ್ದಾಗ ೩ನೇ ವಿಕೆಟ್,೧೫೭ರಲ್ಲಿ ೪,೧೫೮ರಲ್ಲಿ ೫ ಹೀಗೆ ೧೮೯ ಆಗುವಷ್ಟರಲ್ಲಿ ೮ ವಿಕೆಟ್ ಕಳೆದಿಕೊಂಡು ಸೋಲೊಪ್ಪಿಕೊಂಡಿತು.ಭಾರತ ತಂಡದ ನಾಯಕ ವೆಂಕಟೇಶ್ ಪ್ರಸಾದ್ ೩ ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿರುವ ಸಾಯಿ ಕೃಷ್ಣನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸದ್ಗುರು ಮಧುಸೂಧನ್ ಸಾಯಿ ಮಾನವತೆ ಮತ್ತು ಉಚಿತ ಆರೋಗ್ಯ, ಶಿಕ್ಷಣ, ಮತ್ತು ಪೌಷ್ಟಿಕ ಆಹಾರ ಉಚಿತವಾಗಿ ನೀಡುತ್ತಿರುವ ಭಾಗವಾಗಿ ೨೦೨೪ ರಿಂದ ಸತತವಾಗಿ ಒನ್ ಇಂಡಿಯಾ ಒನ್ ಫ್ಯಾಮಿಲಿ ಹೆಸರಿನಲ್ಲಿ ಟಿ.೨೦ ಕ್ರಿಕೆಟ್ ನಡೆಸುತ್ತಾ ಬರಲಾಗಿದ್ದು ಇದಕ್ಕೆ ಜಾಗತಿಕ ಮನ್ನಣೆ ಪ್ರಾಪ್ತಿಯಾಗಿದೆ.
ಶನಿವಾರ ನಡೆದ ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ನಾಯಕ ವೆಂಕಟೇಶ್ ಪ್ರಸಾದ್ ಸೇರಿ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್.ನಮನ್ ಓಝಾ,ಬದರೀನಾಥ್, ಅಶೋಕ್ ದಿಂಡಾ ಪಿಯೂಷ್ ಚಾವ್ಲಾ, ಅಭಿಮನ್ಯು ಮಿಥುನ್, ಸುನಿಲ್ ಜೋಷಿ, ಪಾರ್ಥೀವ್ ಪಟೇಲ್, ಸುಜಿತ್ ಸೋಮಸುಂದರ್, ಮನೋಜ್ ತಿವಾರಿ,ಸ್ಟುವರ್ಟ್ ಬಿನ್ನಿ,ದೊಡ್ಡಗಣೇಶ್ ಮೊದಲಾದವರು ಆಟವಾಡಿದರು.
ಇನ್ನು ಶ್ರೀಲಂಕಾ ತಂಡದಲ್ಲಿ ನಾಯಕ ಅರವಿಂದ ಡಿ ಸಿಲ್ವಾ ಸೇರಿ ಮುತ್ತಯ್ಯ ಮುರಳೀಧರನ್, ಚಂಮಿಡವಾಸ್,ಟಿ.ಎA.ದಿಲ್ಶಾನ್, ವುಪುಲ್ ತರಂಗ, ತರಂಗ ಪರನಾವಿಟ್ಟನ, ಮಿಲಿಂದ ಶ್ರೀವರ್ಧನ, ಅಸೇಲ ಗುಣರ್ಥನೆ,ನುವಾನ್ ಝೋಯೆಸಾ, ತಿಲನ್ ತುಶಾರಾ, ರವೀಂದ್ರ ಪುಷ್ಪಕುಮಾರ, ಅಜೆಂತಾ ಮೆಂಡೀಸ್, ರೋಮೆಶ್ ಕಲುವಿತರಣ, ಮಾರ್ವನ್ ಅಟಪಟ್ಟು ಮೊದಲಾದವರು ಇದ್ದರು.
೬ ಸಾವಿರ ಆಸನಗಳ ಕ್ರಿಕೆಟ್ ಸ್ಟೇಡಿಯಂನಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಿಂದ ಬಂದಿದ್ದ ಕ್ರಿಕೆಟ್ ಅಭಿಮಾನಿಗಳು,ಸ್ಥಳೀಯ ಮುಖಂಡರು, ಗ್ರಾಮಸ್ಥರು ಪತ್ರಕರ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು.ಮೊಟ್ಟ ಮೊದಲಿಗೆ ಅಂತರಾಷ್ಟ್ರೀಯ ಕ್ರಿಕೆಟ್ ತಾರೆಗಳನ್ನು ನೋಡಿದ ಮಂದಿ ಅವರೊಟ್ಟಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು