Techie Dies: ಈಜುಕೊಳದಲ್ಲಿ ತಲೆಗೆ ಪೆಟ್ಟು; ಶ್ರೀಲಂಕಾ ಪ್ರವಾಸದಲ್ಲಿ ಜೇವರ್ಗಿ ಮೂಲದ ಟೆಕ್ಕಿ ಸಾವು
Techie Dies: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್ ಕೆ ಗ್ರಾಮದ ಟೆಕ್ಕಿ ಮೃತಪಟ್ಟಿದ್ದಾರೆ. ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವಾಗ ತಲೆಗೆ ಪೆಟ್ಟು ಬಿದ್ದು ಟೆಕ್ಕಿ ಮೃತಪಟ್ಟಿದ್ದಾರೆ. ಹೈದರಾಬಾದ್ ಮೂಲಕ ಶುಕ್ರವಾರ ಕಲಬುರಗಿಗೆ ಟೆಕ್ಕಿ ಪಾರ್ಥಿವ ಶರೀರ ತಲುಪಲಿದೆ.


ಕಲಬುರಗಿ: ಶ್ರೀಲಂಕಾ ಪ್ರವಾಸದಲ್ಲಿದ್ದ ಜೇವರ್ಗಿ ಮೂಲದ ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್ ಕೆ ಗ್ರಾಮದ ಟೆಕ್ಕಿ ಸಂತೋಷ್ ಮಲ್ಲೆದ್ (34) ಮೃತ ಟೆಕ್ಕಿ. ಇವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರೊಂದಿಗೆ ಫೆ.15 ರಂದು ಶ್ರೀಲಂಕಾದ ಕ್ಯಾಂಡಿಗೆ ಪ್ರವಾಸ ತೆರಳಿದ್ದರು. ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವಾಗ ತಲೆಗೆ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ನಾಳೆ ಹೈದರಾಬಾದ್ ಮೂಲಕ ಕಲಬುರಗಿಗೆ ಟೆಕ್ಕಿ ಪಾರ್ಥಿವ ಶರೀರ ತಲುಪಲಿದೆ.
ಈ ಸುದ್ದಿಯನ್ನೂ ಓದಿ | Udayagiri Violence: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ : ಮೌಲ್ವಿ ಮುಸ್ತಾಕ್ ಬಂಧನ
ಲಾರಿ ಡ್ರೈವರ್‌ಗೆ ಹೃದಯಾಘಾತವಾಗಿ ಸರಣಿ ಅಪಘಾತ; ವ್ಯಾಪಾರಿ ಸಾವು
ಕಲಬುರಗಿ: ಕಂಟೇನರ್ ಲಾರಿ ಡ್ರೈವರ್‌ಗೆ ಹೃದಯಾಘಾತವಾಗಿ ಸರಣಿ ಅಪಘಾತ ಸಂಭವಿಸಿ ತರಕಾರಿ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ. ಮಹಮದ್ ಅಲಿ (32) ಸ್ಥಳದಲ್ಲೆ ಮೃತ ತರಕಾರಿ ವ್ಯಾಪಾರಿ.
ಯಾದಗಿರಿ ಜಿಲ್ಲೆಯ ಶಹಾಪುರದಿಂದ ಕಲಬುರಗಿ ಕಡೆಗೆ ಕಂಟೇನರ್ ಬರುತ್ತಿತ್ತು. ಜೇವರ್ಗಿ ಬಸ್ ನಿಲ್ದಾಣ ಬಳಿ ಹೃದಯಾಘಾತ ಆದ ಹಿನ್ನೆಲೆ ಆಟೋ, ಬೈಕ್‌ಗಳಿಗೆ ಲಾರಿ ಡಿಕ್ಕಿ ಹೊಡೆದು, ವಿದ್ಯುತ್ ಕಂಬಕ್ಕೆ ಗುದ್ದಿದೆ. ಲಾರಿ ಚಾಲಕನನ್ನು ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂಪಿಯಲ್ಲಿ ಈಜಲು ನದಿಗೆ ಹಾರಿದ್ದ ವೈದ್ಯೆ ಶವವಾಗಿ ಪತ್ತೆ

ಕೊಪ್ಪಳ: ಸ್ನೇಹಿತರ ಜೊತೆಗೆ ಹಂಪಿ (Hampi) ಪ್ರವಾಸಕ್ಕೆ ಎಂದು ಬಂದಿದ್ದ ಹೈದರಾಬಾದ್ ಮೂಲದ ವೈದ್ಯೆ (Doctor) ನದಿಗೆ ಹಾರಿದ್ದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದ ಬಳಿ ನಡೆದಿತ್ತು. ಇದೀಗ ವೈದ್ಯೆ ಅನನ್ಯ ರಾವ್ ಶವವಾಗಿ (found dead) ಪತ್ತೆಯಾಗಿದ್ದಾರೆ. ಈಜಲು ಮುಂದಾಗಿದ್ದ (Swimming) ಅವರು ನದಿಗೆ ಹಾರಿದ್ದರು. ಆದರೆ ನೀರಿನ ಸೆಳವಿನಲ್ಲಿ (Drowned) ಕೊಚ್ಚಿಕೊಂಡು ಹೋಗಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಡಾ. ಅನನ್ಯಾ ರಾವ್ ಮತ್ತು ಇತರೆ ಇಬ್ಬರು ಸ್ನೇಹಿತರಾದ ಸತ್ವಿನ್ ಮತ್ತು ಹಶಿತಾ ಜತೆ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದರು. ಇದೇ ಸಂದರ್ಭದಲ್ಲಿ ಅನನ್ಯಾ ರಾವ್ ಸುಮಾರು 25 ಅಡಿ ಎತ್ತರದ ಬಂಡೆಯಿಂದ ನೀರಿಗೆ ಹಾರಿ ಈಜಲು ಬಯಸಿದರು. ಬಂಡೆಯಿಂದ ನೀರಿಗೆ ಹಾರಿದ ಅನನ್ಯಾ ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಈಜುತ್ತಿದ್ದರು. ಆದರೆ, ಶೀಘ್ರದಲ್ಲೇ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋದರು.
ಹೈದರಾಬಾದ್‌ನ ವಿಕೆಸಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಅನನ್ಯ, ರಜೆ ಕಳೆಯಲು ತಮ್ಮ ಸ್ನೇಹಿತರಾದ ಅಶಿತಾ ಮತ್ತು ಸಾತ್ವಿಕ್ ಜೊತೆ ಸಾಣಾಪುರ ಸಮೀಪ ಇರುವ ಖಾಸಗಿ ಗೆಸ್ಟ್ ಹೌಸ್‌ಗೆ ಮಂಗಳವಾರ ಸಂಜೆ ಬಂದಿದ್ದರು. ಗೆಸ್ಟ್ ಹೌಸ್ ಹಿಂದೆ ಇರುವ ತುಂಗಭದ್ರಾ ನದಿಯಲ್ಲಿ ಈ ಮೂವರು ಈಜಲು ಹೋದಾಗ ದುರ್ಘಟನೆ ಸಂಭವಿಸಿದೆ. ಈ ಪೈಕಿ ಅನನ್ಯ, ನದಿಯಲ್ಲಿ ಈಜಲು ಸಮೀಪದ ಬಂಡೆಯೊಂದರ ಮೇಲಿಂದ ನೀರಿಗೆ ಜಿಗಿದಿದ್ದಾರೆ. ನದಿಯಲ್ಲಿನ ನೀರಿನ ಸೆಳೆತದಿಂದ ಕೊಚ್ಚಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಿಯತಮೆಯನ್ನು ಕೊಂದು ಪ್ರಿಯಕರ ಆತ್ಮಹತ್ಯೆ
ಚಿಕ್ಕಮಗಳೂರು : ಪ್ರಿಯತಮೆಯನ್ನು ಕೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಪೂರ್ಣಿಮಾ ಎಂಬ ಯುವತಿಯನ್ನು ಕೊಂದು ಬಳಿಕ ಭದ್ರಾವತಿಯ ಮಧು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ರೀಲ್ಸ್ ಗೀಳು ತಂದ ಆಪತ್ತು; ರೈಲು ಡಿಕ್ಕಿಯಾಗಿ ಮೂವರು ಯುವಕರ ಸಾವು
ಕಾಫಿ ತೋಟದ ರಸ್ತೆಯಲ್ಲಿ ಕಾರಿನಲ್ಲಿ ಪೂರ್ಣಿಮ ಶವ ಪತ್ತೆಯಾಗಿದ್ದು, ಕಾಫಿ ತೋಟದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಧು ಶವ ಪತ್ತೆಯಾಗಿದೆ. ಸದ್ಯ ಚಿಕ್ಕಮಗಳೂರು ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ. ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.