ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ ಸರ್ಕಾರ ಮತ್ತು AIGF ಸಹಭಾಗಿತ್ವದಲ್ಲಿ ಭಾರತದಲ್ಲೇ ಪ್ರಥಮ ಉದ್ಯಮ ನೇತೃತ್ವದ ಡಿಜಿಟಲ್ ಡಿಟಾಕ್ಸ್ ಸೆಂಟರ್ ಬಿಯಾಂಡ್ ಸ್ಕ್ರೀನ್ಸ್ ಉದ್ಘಾಟನೆ

ಜವಾಬ್ದಾರಿಯುತವಾಗಿ ಡಿಜಿಟಲ್ ಸಾಧನಗಳನ್ನು ಬಳಸುವುದು ಮತ್ತು ಯೋಗ ಕ್ಷೇಮವನ್ನು ಪ್ರೋತ್ಸಾ ಹಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (AIGF) ಒಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಡಿಜಿಟಲ್ ಡಿಟಾಕ್ಸ್ ಕಾರ್ಯಕ್ರಮ ಬಿಯಾಂಡ್ ಸ್ಕ್ರೀನ್ಸ್ ಅನ್ನು ಸ್ಥಾಪಿಸಿದೆ.

ಗೇಮಿಂಗ್‌ನಲ್ಲಿ AIGF ಪರಿಣತಿಯ ಪ್ರಾಮುಖ್ಯತೆಗೆ ಶ್ಲಾಘನೆ

Profile Ashok Nayak Mar 19, 2025 4:00 PM

ಬೆಂಗಳೂರು: ಜವಾಬ್ದಾರಿಯುತವಾಗಿ ಡಿಜಿಟಲ್ ಸಾಧನಗಳನ್ನು ಬಳಸುವುದು ಮತ್ತು ಯೋಗ ಕ್ಷೇಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (AIGF) ಒಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಡಿಜಿಟಲ್ ಡಿಟಾಕ್ಸ್ ಕಾರ್ಯಕ್ರಮ ಬಿಯಾಂಡ್ ಸ್ಕ್ರೀನ್ಸ್ ಅನ್ನು ಸ್ಥಾಪಿಸಿದೆ. ಈ ತಿಂಗಳು ಆರಂಭಗೊಂಡ ಈ ಕಾರ್ಯ ಕ್ರಮವು ಭಾರತ ದಲ್ಲೇ ಮೊಟ್ಟ ಮೊದಲ ಬಾರಿಗೆ ಉದ್ಯಮದ ನೇತೃತ್ವದಲ್ಲಿ ಡಿಜಿಟಲ್ ಅವಲಂಬನೆ ಎದುರಿಸುವ ಪ್ರಯತ್ನ ನಡೆಸಲಾಗಿದ್ದು, ಇದಕ್ಕಾಗಿ ರಚನಾತ್ಮಕ ಮಧ್ಯಪ್ರವೇಶ ಮತ್ತು ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಧ್ಯೇಯವನ್ನು ಇನ್ನೂ ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾ ರದ ಗೌರವಯುತ ಐಟಿ ಮತ್ತು ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಬಿಯಾಂಡ್ ಸ್ಕ್ರೀನ್ಸ್ ಡಿಜಿಟಲ್ ಡಿಟಾಕ್ಸ್ ಸೆಂಟರ್ ಮತ್ತು ಅಧಿಕೃತ ವೆಬ್‌ಸೈಟ್ ಅನ್ನು ಉದ್ಘಾಟಿಸಿದರು. ಡಿಜಿಟಲ್ ವ್ಯಸನದ ವಿರುದ್ಧ ಹೋರಾಟ ನಡೆಸು ವಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.

ಇದನ್ನೂ ಓದಿ: Bangalore News: ಅಂಗಾಂಗ ದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದಂತೆ

ಡಿಜಿಟಲ್ ವ್ಯಸನವನ್ನು ತಪ್ಪಿಸಲು ಅಗತ್ಯವಿರುವ ಸಂಪನ್ಮೂಲಗಳು, ಆಪ್ತ ಸಲಹೆ ಮತ್ತು ಮಧ್ಯ ಪ್ರವೇಶದಂತಹ ಕಾರ್ಯಕ್ರಮಗಳಿಗೆ ಈ ಕೇಂದ್ರವು ಮಹತ್ವದ ಸ್ಥಳವಾಗಿರಲಿದ್ದು, ಆರೋಗ್ಯಕರ ಡಿಜಿಟಲ್ ಹವ್ಯಾಸಗಳನ್ನು ಇದು ಪ್ರೋತ್ಸಾ ಹಿಸಲಿದೆ.

ಡಿಜಿಟಲ್ ಯೋಗಕ್ಷೇಮ ಸೌಲಭ್ಯಗಳಿಗೆ ತುರ್ತು ಅಗತ್ಯವಿರುವುದನ್ನು ಗಮನಿಸಿರುವ ಕರ್ನಾಟಕ ಸರ್ಕಾರ ಮತ್ತು AIGF ಜಂಟಿಯಾಗಿ ಒಂದು ಮಹತ್ವದ ರೂಪುರೇಷೆಯನ್ನು ಅಭಿವೃದ್ಧಿಪಡಿಸಿದೆ. ಈ ಕಾರ್ಯಯೋಜನೆಯು ಸ್ಪಷ್ಟ ಮತ್ತು ಕ್ರಿಯಾತ್ಮಕ ಗುರಿಯನ್ನು ಹೊಂದಿದೆ. ಬಿಯಾಂಡ್ ಸ್ಕ್ರೀನ್ಸ್‌ ಒಂದು ಸಮಗ್ರ ಸಂಪನ್ಮೂಲ ಕೇಂದ್ರವಾಗಿ ಕೆಲಸ ಮಾಡುತ್ತದೆ. ಡಿಜಿಟಲ್ ವ್ಯಸನದಿಂದ ಬಳಲು ತ್ತಿರುವ ವ್ಯಕ್ತಿಗೆ ಇದು ನೆರವಾಗುತ್ತದೆ.

ಶಿಕ್ಷಣ, ಬೆಂಬಲ ಮತ್ತು ಸಬಲೀಕರಣದ ಮೇಲೆ ಹೆಚ್ಚಿನ ಗಮನ ಹರಿಸಲಾಗಿದ್ದು, ಸಣ್ಣ, ಮಧ್ಯಮ ಮತ್ತು ದೀರ್ಘಕಾಲೀನ ಕಾರ್ಯಕ್ರಮಗಳ ಮೂಲಕ ರಚನಾತ್ಮಕ ಪರಿಹಾರವನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ಜವಾಬ್ದಾರಿಯುತವಾಗಿ ತಂತ್ರಜ್ಞಾನ ಬಳಕೆ ಮತ್ತು ಡಿಜಿಟಲ್ ಯೋಗಕ್ಷೇಮದ ಕುರಿತು ಮಾರ್ಗ ದರ್ಶನವನ್ನು ಬಯಸುವವರಿಗೆ ಈ ಡಿಜಿಟಲ್ ಡಿಟಾಕ್ಸ್ ಸೆಂಟರ್ ಮತ್ತು ವೆಬ್‌ಸೈಟ್ ಒಂದು ಪ್ರಮುಖ ತಾಣವಾಗಿ ಕೆಲಸ ಮಾಡುತ್ತದೆ.

ಜಿಎಎಫ್‌ಎಕ್ಸ್‌ 2025 ಪ್ರೇಕ್ಷಕ ವರ್ಗವನ್ನು ಉದ್ದೇಶಿಸಿ ಮಾತನಾಡಿದ ಗೌರವಯುತ ಪ್ರಿ ಯಾಂಕ್ ಖರ್ಗೆಯವರು, ಡಿಜಿಟಲ್ ಯೋಗಕ್ಷೇಮದ ಬಗ್ಗೆ ಸರ್ಕಾರ ಎಷ್ಟು ಬದ್ಧವಾಗಿದೆ ಎಂಬು ದನ್ನು ಒತ್ತಿ ಹೇಳಿದರು. ಅವರು ಮಾತನಾಡುತ್ತಾ, "ನಮ್ಮ ಡಿಜಿಟಲ್ ಜೀವನದಲ್ಲಿ ಸಮತೋಲನ ವನ್ನು ಕಾಯ್ದುಕೊಳ್ಳುವ ಬಗ್ಗೆ ಅಪಾರ ನಂಬಿಕೆಯನ್ನು ಹೊಂದಿರುವ ನಾನು, 'ಸ್ಕ್ರೀನ್‌ ಲೈಟ್ ನೋಡುವುದಕ್ಕಿಂತ ಮೊದಲು ಸನ್ ಲೈಟ್ ನೋಡಿ' ಎಂದು ಹೇಳುತ್ತೇನೆ.

ಜವಾಬ್ದಾರಿಯುತ ವಾಗಿ ಡಿಜಿಟಲ್ ಸಾಧನಗಳನ್ನು ಬಳಕೆ ಮಾಡುವುದು ಮತ್ತು ನಮ್ಮ ನಾಗರಿಕರ ಯೋಗಕ್ಷೇಮದ ಬಗ್ಗೆ ನಾವು ಎಷ್ಟು ಬದ್ಧವಾಗಿದ್ದೇವೆ ಎಂಬುದಕ್ಕೆ ಈ ಬಿಯಾಂಡ್ ಸ್ಕ್ರೀನ್ಸ್ ಕಾರ್ಯ ಕ್ರಮವು ಒಂದು ಸಾಕ್ಷಿಯಾಗಿದೆ. ಒಂದು ರಚನಾತ್ಮಕ ಬೆಂಬಲವನ್ನು ಒದಗಿಸುವುದು, ಜಾಗೃತಿ ಯನ್ನು ಮೂಡಿಸು ವುದು ಮತ್ತು ಮುಖ್ಯವಾಹಿನ ಆರೋಗ್ಯ ಸೇವೆಗೆ ಡಿಜಿಟಲ್ ಯೋಗಕ್ಷೇಮ ವನ್ನು ಅಳವಡಿಸುವ ಮೂಲಕ ಡಿಜಿಟಲ್ ವ್ಯಸನ ಎಂಬ ಸವಾಲನ್ನು ನಾವು ಎದುರಿಸಲಿದ್ದೇವೆ."

ಜವಾಬ್ದಾರಿಯುತ ಗೇಮಿಂಗ್‌ನಲ್ಲಿ AIGF ಹೊಂದಿರುವ ಪರಿಣಿತಿಯ ಪ್ರಾಮುಖ್ಯತೆಯನ್ನೂ ಅವರು ಇದೇ ವೇಳೆ ಶ್ಲಾಘಿಸಿದರು. "AIGF ನಮ್ಮ ಪ್ರಮುಖ ಪಾಲುದಾರರಾಗಿದ್ದು, ಜವಾಬ್ದಾರಿಯುತ ಗೇಮಿಂ ಗ್‌ಗೆ ಅವರ ಪರಿಣಿತಿಯು ಅತ್ಯಂತ ಮಹತ್ವದ್ದಾಗಿದೆ. ನಿಮ್ಮ ಸಾಧನದ ಬಗ್ಗೆ ಒಂದು ಗಡಿಯನ್ನು ಗುರುತಿಸುವುದಾಗಿರಲಿ ಅಥವಾ ಯಾವುದೇ ಪಶ್ಚಾತ್ತಾಪದ ಭಾವವಿಲ್ಲದೇ ವ್ಯಸನದಿಂದ ಮುಕ್ತಿ ಪಡೆಯುವುದನ್ನು ಕಲಿಯುವುದಾಗಿರಲಿ, ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ನಾವು ಸಹಾಯ ಮಾಡುತ್ತೇವೆ. ತಂತ್ರಜ್ಞಾನದ ಜೊತೆಗೆ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು, ಈ ಮೂಲಕ ನಮ್ಮ ಜನರು ಆನ್‌ಲೈನ್‌ನಲ್ಲಿ ಮತ್ತು ಆಫ್‌ಲೈನ್‌ನಲ್ಲಿ ಆರೋಗ್ಯಕರವಾಗಿರಬಹುದು."

ಜವಾಬ್ದಾರಿಯುತ ಗೇಮಿಂಗ್ ಮತ್ತು ಡಿಜಿಟಲ್ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಉದ್ಯಮದ ಪ್ರಮುಖ ಸಂಸ್ಥೆಯಾಗಿರುವ AIGF ಈ ಕಾರ್ಯಕ್ರಮವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂಸ್ಥೆಯ ಬದ್ಧತೆಯ ಬಗ್ಗೆ ವಿವರಣೆ ನೀಡಿದ AIGF ಸಿಇಒ ರೋಲ್ಯಾಂಡ್ ಲ್ಯಾಂಡರ್ಸ್, ಭಾರತದಲ್ಲಿ ಆನ್‌ಲೈನ್ ಗೇಮಿಂಗ್‌ಗೆ ಅತಿ ಹಳೆಯ ಮತ್ತು ಅತಿದೊಡ್ಡ ಉದ್ಯಮ ವಾಗಿರುವ AIGF ಹಿಂದಿನಿಂದಲೂ ಸುರಕ್ಷಿತ, ಜವಾಬ್ದಾರಿಯುತ ಮತ್ತು ಸುಸ್ಥಿರ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಪೋಷಿಸಲು ಬದ್ಧವಾಗಿದೆ. ಡಿಜಿಟಲ್ ಯೋಗಕ್ಷೇಮದ ವಿಷಯದಲ್ಲಿ ಒಂದು ಪ್ರಮುಖ ಉಪಕ್ರಮವಾಗಿರುವ ಬಿಯಾಂಡ್ ಸ್ಕ್ರೀನ್ಸ್ ಅನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರದ ಬೆಂಬಲ ಸಿಕ್ಕಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಡಿಜಿಟಲ್ ತೊಡಗಿ ಸಿಕೊಳ್ಳುವಿಕೆಯಲ್ಲಿ ಸಮತೋಲಿತ ಮತ್ತು ಜವಾಬ್ದಾರಿಯುತ ಕಾರ್ಯವಿಧಾನವನ್ನು ಪ್ರೋತ್ಸಾ ಹಿಸುವಲ್ಲಿ ಇದು ಅತ್ಯಂತ ಮಹತ್ವದ ಪ್ರಥಮ ಹೆಜ್ಜೆಯಾಗಿದೆ."

"ಜವಾಬ್ದಾರಿಯುತ ಗೇಮಿಂಗ್ ಮತ್ತು ಮಾನಸಿಕ ಯೋಗಕ್ಷೇಮಕ್ಕೆ AIGF ಬದ್ಧತೆಯನ್ನು ಡಿಜಿಟಲ್ ಡಿಟಾಕ್ಸ್ ಉಪಕ್ರಮದ ಉದ್ಘಾಟನೆ ಖಾತ್ರಿಪಡಿಸುತ್ತದೆ. ಡಿಜಿಟಲ್ ಉದ್ಯಮಕ್ಕೆ ಮಾನದಂಡವನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಜೊತೆಗೆ ಈ ಸಹಭಾಗಿತ್ವವು ಮಹತ್ವದ ಹೆಜ್ಜೆ ಯಾಗಿದೆ."

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಯೋಟೆಕ್ನಾಲಜಿ ಮತ್ತು ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ ಹಾಗೂ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (AIGF) ಸಹಭಾಗಿತ್ವದಲ್ಲಿ ಬಿಯಾಂಡ್ ಸ್ಕ್ರೀನ್ಸ್ ಅನ್ನು ರೂಪಿಸಲಾಗಿದೆ. ಈ ಯೋಜನೆಯು ದೇಶಾದ್ಯಂತ ಚಳವಳಿಯಾಗಿ ಹೊರಹೊಮ್ಮಲಿದ್ದು, ಡಿಜಿಟಲ್ ಡಿಟಾಕ್ಸ್ ಕಾರ್ಯತಂತ್ರವನ್ನು ಸಾರ್ವಜನಿಕ ಆರೋಗ್ಯ ಉಪ ಕ್ರಮಗಳಲ್ಲಿ ಸೇರಿಸಲಾಗುತ್ತಿದೆ ಮತ್ತು ತಮ್ಮ ಡಿಜಿಟಲ್ ಯೋಗಕ್ಷೇಮದ ಉಸ್ತುವಾರಿ ವಹಿಸಿ ಕೊಳ್ಳಲು ಜನರನ್ನು ಸಬಲೀಕರಿಸಲಾಗುತ್ತದೆ.