ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neeraj Chopra: ರಾಷ್ಟ್ರೀಯ ದಾಖಲೆ ಬರೆದ ನೀರಜ್‌ ಚೋಪ್ರಾಗೆ ಮೋದಿ ಅಭಿನಂದನೆ

ನೀರಜ್‌ ತಮ್ಮ ಮೊದಲ ಪ್ರಯತ್ನದಲ್ಲಿ 88.44 ಮೀ. ದೂರಕ್ಕೆ ಎಸೆದರು. ತಮ್ಮ 3ನೇ ಪ್ರಯತ್ನದಲ್ಲಿ 90.23 ಮೀ. ದೂರ ಎಸೆದು 2ನೇ ಸ್ಥಾನ ಪಡೆದರು. ಕೊನೆಯ ಯತ್ನದಲ್ಲಿ 91.06 ಮೀ. ಎಸೆದ ಜರ್ಮನಿಯ ಯೂಲಿಯನ್‌ ವೆಬ್ಬರ್‌ ಮೊದಲ ಸ್ಥಾನ ಪಡೆದರು. ಗ್ರೆನಡಾದ ಆ್ಯಂಡರ್‌ಸನ್‌ ಪೀಟರ್ಸ್‌ 85.64 ಮೀ.ನೊಂದಿಗೆ 3ನೇ ಸ್ಥಾನ ಗಳಿಸಿದರು.

ರಾಷ್ಟ್ರೀಯ ದಾಖಲೆ ಬರೆದ ನೀರಜ್‌ ಚೋಪ್ರಾಗೆ ಮೋದಿ ಅಭಿನಂದನೆ

Profile Abhilash BC May 17, 2025 10:14 AM

ನವದೆಹಲಿ: ಶುಕ್ರವಾರ ರಾತ್ರಿ ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌(Doha Diamond League)ನಲ್ಲಿ ತಮ್ಮ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ 90 ಮೀ. ದೂರ ಜಾವೆಲಿನ್‌ ಎಸೆದು ರಾಷ್ಟ್ರೀಯ ದಾಖಲೆ ಬರೆದ ಅವಳಿ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ(Neeraj Chopra) ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಮೆಚ್ಚುಗೆ ಸೂಚಿಸಿದ್ದಾರೆ. ಅವರ ಅವಿರತ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಕ್ರೀಡಾಪಟುವಿನ ದೀರ್ಘಕಾಲದ ಮಹತ್ವಾಕಾಂಕ್ಷೆ ಅಂತಿಮವಾಗಿ ನನಸಾಗಿದೆ ಎಂದು ಟ್ವಿಟರ್‌ ಎಕ್ಸ್‌ನಲ್ಲಿ ಅಭಿನಂದಿಸಿದ್ದಾರೆ.

"ಒಂದು ಅದ್ಭುತ ಸಾಧನೆ! ದೋಹಾ ಡೈಮಂಡ್ ಲೀಗ್ 2025 ರಲ್ಲಿ 90 ಮೀಟರ್ ಗಡಿ ದಾಟಿದ್ದಕ್ಕಾಗಿ ಮತ್ತು ತಮ್ಮ ವೈಯಕ್ತಿಕ ಅತ್ಯುತ್ತಮ ಎಸೆತವನ್ನು ಸಾಧಿಸಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ಅವಿರತ ಸಮರ್ಪಣೆ, ಶಿಸ್ತು ಮತ್ತು ಉತ್ಸಾಹದ ಫಲಿತಾಂಶವಾಗಿದೆ. ನಿಮ್ಮ ಈ ಸಾಧನೆಯಿಂದ ಭಾರತವು ಸಂತೋಷ ಮತ್ತು ಹೆಮ್ಮೆಪಡುತ್ತದೆ" ಎಂದು ನರೇಂದ್ರ ಮೋದಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.



ನೀರಜ್‌ ತಮ್ಮ ಮೊದಲ ಪ್ರಯತ್ನದಲ್ಲಿ 88.44 ಮೀ. ದೂರಕ್ಕೆ ಎಸೆದರು. ತಮ್ಮ 3ನೇ ಪ್ರಯತ್ನದಲ್ಲಿ 90.23 ಮೀ. ದೂರ ಎಸೆದು 2ನೇ ಸ್ಥಾನ ಪಡೆದರು. ಕೊನೆಯ ಯತ್ನದಲ್ಲಿ 91.06 ಮೀ. ಎಸೆದ ಜರ್ಮನಿಯ ಯೂಲಿಯನ್‌ ವೆಬ್ಬರ್‌ ಮೊದಲ ಸ್ಥಾನ ಪಡೆದರು. ಗ್ರೆನಡಾದ ಆ್ಯಂಡರ್‌ಸನ್‌ ಪೀಟರ್ಸ್‌ 85.64 ಮೀ.ನೊಂದಿಗೆ 3ನೇ ಸ್ಥಾನ ಗಳಿಸಿದರು.

ನೀರಜ್‌ ತಮ್ಮ ವೃತ್ತಿಬದುಕಿನಲ್ಲಿ ಹಲವು ಬಾರಿ 90 ಮೀ. ಸನಿಹಕ್ಕೆ ಬಂದರೂ, ಆ ಗಡಿಯನ್ನು ದಾಟಲು ನೀರಜ್‌ಗೆ ಸಾಧ್ಯವಾಗಿರಲಿಲ್ಲ. ಈ ಋತುವಿನ ಮೊದಲ ಸ್ಪರ್ಧೆಯಲ್ಲೇ ಈ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ನೀರಜ್, ಸೆಪ್ಟೆಂಬರ್‌ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಶಿಪ್‌ ಕೂರ್ನಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ Neeraj Chopra: ಮತ್ತೊಂದು ಇತಿಹಾಸ ಬರೆದ ನೀರಜ್‌ ಚೋಪ್ರಾ; 90.23 ಮೀ. ದೂರಕ್ಕೆ ಜಾವಲಿನ್‌ ಎಸೆದ ಚಿನ್ನದ ಹುಡುಗ