Raju Adakalli Column: ಥ್ಯಾಂಕೋಸ್ ಐಸ್‌ಕ್ರೀಮ್ ಯಶಸ್ಸಿನ ರೂವಾರಿ ಠಾಣೆ
ಮೂಲತಹ ಕಾರವಾರದವರಾದ ರಾಘವೇಂದ್ರ ಠಾಣೆಯವರು, ಇನ್ನೂ ಮಿಳ್ಳೆಯವರಾಗಿದ್ದಾಗಲೇ ತಮ್ಮ ಅಜ್ಜನ ಮನೆ ಶಿರಸಿಗೆ ಬಂದು ಪ್ರತಿಷ್ಠಾಪನೆಗೊಂಡವರು. 20 ವರ್ಷಗಳ ಹಿಂದೆ ಇವರು ಸಣ್ಣ ಪ್ರಮಾಣ ದಲ್ಲಿ ಪ್ರಾರಂಭಿಸಿದ ಥ್ಯಾಂಕೋಸ್ ಐಸ್ ಕ್ರೀಮ್ ಬಿಜಿನೆಸ್ ಇಂದು ಭಾರತಾದ್ಯಂತ, ಅಷ್ಟೇ ಏಕೆ ನೇಪಾಳ ದವರೆಗೂ ವಿಸ್ತರಿಸಿದೆ. ಈಗಾಗಲೇ ಬಹುಕೋಟಿ ವ್ಯಾಪಾರ ವಹಿವಾಟು ನಡೆಸುತ್ತಿರುವ ದಾಖಲೆಯೂ ಈ ಸಂಸ್ಥೆಯದ್ದು


ನೈಸರ್ಗಿಕ ಹಣ್ಣುಗಳನ್ನು ಬಳಸಿ ತಯಾರಿಸಲಾಗುತ್ತಿರುವ ‘ಥ್ಯಾಂಕೋಸ್ ಐಸ್‌ಕ್ರೀಮ್’ ತನ್ನದೇ ಸ್ವಾದ ಹೊಂದಿದೆ. ಶಿರಸಿಯ ರಾಘವೇಂದ್ರ ಥಾಣೆಯವರ ನೇತೃತ್ವದಲ್ಲಿ ಥ್ಯಾಂಕೋ ಸ್ ಐಸ್ ಕ್ರೀಮ್, ಈಗ ನೇಪಾಳದ್ಲೂ ಲಭ್ಯ. ಇತ್ತೀಚೆಗೆ ರಾಘವೇಂದ್ರ ಥಾಣೆಯವರು ‘ವಿಶ್ವವಾಣಿ ಗ್ಲೋಬಲ್ ಅಚೀವರ್ಸ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೇಪಾಳದ ರಾಜಧಾನಿ ಕಾಟ್ಮಂಡುಗೆ ಇತ್ತೀಚಿಗೆ ಹೋದಾಗ ಅಲ್ಲಿನ ‘ಥ್ಯಾಂಕೋಸ್ ಐಸ್ ಕ್ರೀಮ್ ಪಾರ್ಲರಿ’ಗೆ ಹೋಗಿದ್ದೆವು. ಅದೊಂದು ಅದ್ಭುತ ಐಸ್ ಕ್ರೀಮ್ ಲೋಕ. ಆ ಐಸ್ ಕ್ರೀಮಿನ ಬಗ್ಗೆ ಪ್ರಶ್ನಿಸಿದಾಗ ಅದರ ಹುಟ್ಟು ಕರ್ನಾಟಕ ಎಂಬುದನ್ನು ಕೇಳಿದಾಗ ನಮಗಾದ ಆಶ್ಚರ್ಯ ಅಷ್ಟಿಷ್ಟ ಲ್ಲ. ಇದಕ್ಕೆ ಕಾರಣ ರಾಘ ವೇಂದ್ರ. ಕೆ. ಥಾಣೆ.
ಮೂಲತಹ ಕಾರವಾರದವರಾದ ರಾಘವೇಂದ್ರ ಠಾಣೆಯವರು, ಇನ್ನೂ ಮಿಳ್ಳೆಯವರಾಗಿದ್ದಾಗಲೇ ತಮ್ಮ ಅಜ್ಜನ ಮನೆ ಶಿರಸಿಗೆ ಬಂದು ಪ್ರತಿಷ್ಠಾಪನೆಗೊಂಡವರು. 20 ವರ್ಷಗಳ ಹಿಂದೆ ಇವರು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಥ್ಯಾಂಕೋಸ್ ಐಸ್ ಕ್ರೀಮ್ ಬಿಜಿನೆಸ್ ಇಂದು ಭಾರತಾದ್ಯಂತ, ಅಷ್ಟೇ ಏಕೆ ನೇಪಾಳದವರೆಗೂ ವಿಸ್ತರಿಸಿದೆ. ಈಗಾಗಲೇ ಬಹುಕೋಟಿ ವ್ಯಾಪಾರ ವಹಿವಾಟು ನಡೆಸುತ್ತಿರುವ ದಾಖಲೆಯೂ ಈ ಸಂಸ್ಥೆಯದ್ದು.
ಇದನ್ನೂ ಓದಿ: Raju Adakalli Column: ಜಾನಪದದ ಕಾಂತಿ ಈ ನಾಯಕಿ !
ಮೂಲತಹ ಕಾರವಾರದವರಾದ ರಾಘವೇಂದ್ರ ಠಾಣೆಯವರು, ಇನ್ನೂ ಮಿಳ್ಳೆಯವರಾಗಿದ್ದಾಗಲೇ ತಮ್ಮ ಅಜ್ಜನ ಮನೆ ಶಿರಸಿಗೆ ಬಂದು ಪ್ರತಿಷ್ಠಾಪನೆಗೊಂಡವರು. 20 ವರ್ಷಗಳ ಹಿಂದೆ ಇವರು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಥ್ಯಾಂಕೋಸ್ ಐಸ್ ಕ್ರೀಮ್ ಬಿಜಿನೆಸ್ ಇಂದು ಭಾರತಾದ್ಯಂತ, ಅಷ್ಟೇ ಏಕೆ ನೇಪಾಳದವರೆಗೂ ವಿಸ್ತರಿಸಿದೆ. ಈಗಾಗಲೇ ಬಹುಕೋಟಿ ವ್ಯಾಪಾರ ವಹಿವಾಟು ನಡೆಸುತ್ತಿರುವ ದಾಖಲೆಯೂ ಈ ಸಂಸ್ಥೆಯದ್ದು
ಸದ್ಯದಲ್ಲಿಯೇ ಯುರೋಪಿಗೂ ನಮ್ಮ ಕರ್ನಾಟಕದ ಈ ಐಸ್ ಕ್ರೀಮ್ ಲಗ್ಗೆಯಿಡಲು ಸಿದ್ಧತೆ ನಡೆಸಿ ರುವುದು ವಿಶೇಷ. ಐಸ್ ಕ್ರೀಮ್ ಬಾಯಿಗೆ ಸವಿ ರುಚಿ. ಮನಸ್ಸಿಗೆ ತಂಪು. ದೇಹಕ್ಕೆ ಚೇತೋ ಹಾರಿ. ಥ್ಯಾಂಕೋಸ್ ಐಸ್ ಕ್ರೀಮ್ ತಿಂದರೆ ಅಪಾಯವಿಲ್ಲ. ಕಾರಣ ‘ಇದು ಸಂಪೂರ್ಣ ತಾಜಾ ಹಣ್ಣು ಗಳಿಂದ ಮತ್ತು ಶುದ್ಧ ಹಾಲಿನಿಂದ ತಯಾರಾಗುತ್ತದೆ’ ಎಂಬುದು ಥಾಣೆಯವರ ಅಭಿಪ್ರಾಯ.
ಈ ವಿಶಿಷ್ಟ ಗುಣದಿಂದಾಗಿಯೇ ಇವರ ಥ್ಯಾಂಕೋಸ್ ಬ್ರಾಂಡಿನ ನೂರಕ್ಕೂ ಹೆಚ್ಚು ಐಸ್ ಕ್ರೀಮ್ ಪಾರ್ಲರುಗಳು ನಮ್ಮ ದೇಶಾದ್ಯಂತ ಜನಪ್ರಿಯವಾಗಿವೆ.

ನೈಸರ್ಗಿಕ ಬಣ್ಣ ರುಚಿ
ತಾಜಾ ಹಣ್ಣುಗಳನ್ನು ಬಳಸಿ ಬಣ್ಣಗಳನ್ನು ಹಾಕಿ ತಯಾರಿಸಲಾಗುತ್ತಿದೆ. ವೆನಿಲಾ, ಪಿಸ್ತ, ಮ್ಯಾಂ ಗೋ, ಪೈನಾಪಲ್ ಮುಂತಾದ ಹಣ್ಣುಗಗಳಿಂದ ಎಸೆನ್ಸುಗಳನ್ನು ಬಳಸಲಾಗುತ್ತಿದೆ. ಆದರೆ ಥ್ಯಾಂ ಕೋಸ್ ನ್ಯಾಚುರಲ್ ಐಸ್ ಕ್ರೀಮಿನಲ್ಲಿ ಯಾವುದೇ ಕೃತಕ ವಸ್ತು ಅಥವಾ ಡಾಲ್ಡಾ ಬಳಸ ಲಾಗುವುದಿಲ್ಲ.
ಬದಲಿಗೆ ಆಂಧ್ರ ಪ್ರದೇಶದಿಂದ ತಿಂಗಳಿಗೆ 60 ಟನ್ನುಗಳಷ್ಟು ಎಮ್ಮೆ ಹಾಲನ್ನೇ ತರಿಸಿ ಬಳಸ ಲಾಗುತ್ತಿದೆ. ಮಹಾರಾಷ್ಟ್ರದಿಂದ ಸೀತಾ-ಲ, ಮಾವಿನ ಹಣ್ಣುಗಳನ್ನು ಮತ್ತು ಶಿರಸಿಯಿಂದ ಎಳ ನೀರನ್ನು ಖರೀದಿಸಲಾಗುತ್ತಿದೆಯಂತೆ. ಈ ಐಸ್ ಕ್ರೀಮಿನಲ್ಲಿ ಎಮ್ಮೆಯ ಹಾಲನ್ನೇ ಬಳಸುವುದರಿಂದ ವಿಶೇಷ ರುಚಿ ಎಂಬುದು ಹಲವರ ಅನುಭವ.
ನೂರಕ್ಕೂ ಅಧಿಕ ವೈವಿಧ್ಯ
ನೀವು ದಿನಕ್ಕೊಂದು ಐಸ್ ಕ್ರೀಮ್ ತಿನ್ನುವವರಾದರೆ ನಿರಂತರವಾಗಿ ಮೂರು ತಿಂಗಳುಗಳ ಕಾಲ ತಿಂದರೂ ಥ್ಯಾಂಕೋಸ್ ಐಸ್ ಕ್ರೀಮಿನ ಎಲ್ಲಾ ರುಚಿಗಳನ್ನು ನೋಡಲು ಸಾಲುವುದಿಲ್ಲ. ಏಕೆಂದರೆ ಸುಮಾರು ನೂರಕ್ಕೂ ಹೆಚ್ಚು ವಿವಿಧ ಬಗೆಯ, ಅಪರೂಪದ ಸ್ವಾದಗಳ ಐಸ್ ಕ್ರೀಮ್ ಥ್ಯಾಂಕೋ ಸಿನಿಂದ ಲಭ್ಯ. ಹಾರ್ಲಿಕ್ಸ್ ಐಸ್ ಕ್ರೀಮ್ ಕೂಡ ಇಲ್ಲಿಯ ಮತ್ತೊಂದು ಆಕರ್ಷಣೆ. ಕ್ಯಾದಿಗೆ ಗರಿ ಮತ್ತು ಸಂಪಿಗೆ ಹೂವಿನ ಸ್ವಾದಗಳ ಐಸ್ ಕ್ರೀಮುಗಳನ್ನು ಮಾತ್ರ ಇವರು ತಯಾರಿಸುವುದು ಬಾಕಿಯಿದೆ.
ಎಷ್ಟೇ ಗಡಿಬಿಡಿಯಲ್ಲಿದ್ದರೂ ಇಲ್ಲಿಯ ಗಡಬಡ್ ಐಸ್ ಕ್ರೀಮ್ ಚಪ್ಪರಿಸಿದರೆ ನಿಮ್ಮ ಗಡಿಬಿಡಿ ದುಗುಡಗಳೆಲ್ಲವೂ ಕರಗಿ ನಿರಾಳವಾಗುತ್ತೀರಿ. ನೀವು ಸಕ್ಕರೆ ವಿರೋಧಿ ಸಂಘದವರಾಗಿ ಮೆಣಸು ಪ್ರಿಯರಾದರೆ, ನಿಮಗೆ ಮಿರ್ಚಿ ಖಾರಾ ಐಸ್ ಕ್ರೀಮ್ ಕೂಡಾ ಇಲ್ಲಿ ಸಿಗುತ್ತದೆ.
ನಮ್ಮಲ್ಲಿ ಬಡ್ಡೆಯ ಮೇಲೆ ತೊಡದೇವು ಮಾಡುವ ಮಾದರಿಯಲ್ಲೇ ಕಾವಲಿಯ (ತವಾ) ಮೇಲೆ ಐಸ್ ಕ್ರೀಮ್ ಹರಡಿ, ಅದಕ್ಕೆ ಇನ್ನೆಲ್ಲ ಒಂದಷ್ಟು ಮಸಾಲೆ ಸೇರಿಸಿ, ಸುರುಳಿ ಸುತ್ತಿದ ತೆಳ್ಳೇವಿನಂತೆ ಮಾಡಿ ಸ್ಟೋನ್ ಮತ್ತು ರೋಲ್ ಎಂಬ ಅಪರೂಪದ ಐಸ್ ಕ್ರೀಮುಗಳನ್ನು ನೀಡುವುದು ಥ್ಯಾಂಕೋಸಿನ ಮತ್ತೊಂದು ವಿಶೇಷ. ಇವರಲ್ಲಿ ಸಿಗುವ ಲಸ್ಸಿ ಮತ್ತು ಮಿಲ್ಕ್ ಶೇಕ್‌ಗಳು ಅರಬಸ್ತಾನದ ಶೇಖ್ ಅವರನ್ನೇ ಶೇಕ್ ಮಾಡುವಷ್ಟು ರುಚಿಕಟ್ಟು.
ಲೋಕೋ ಭಿನ್ನ ರುಚಿ ಎಂಬಂತೆ ಥ್ಯಾಂಕೋಸ್ ಐಸ್ ಕ್ರೀಮ್ ಕೂಡಾ ಭಿನ್ನ ರುಚಿಯೇ. ಹೀಗಾಗಿ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂ ಅಂತೀಯಾ ಊಹೂ ಅಂತೀಯಾ..ಎಂದು ಹಾಡು ಹೇಳುತ್ತಾ ಈ ಐಸ್ ಕ್ರೀಮ್ ಪಾರ್ಲರಿಗೆ ಬಂದವರು, ಹೊರ ಹೋಗುವಾಗ ಐಸ್ ಕ್ರೀಮಿ ನಲ್ಲಿರೋ ಸುಖ ಗೊತ್ತೇ ಇರಲಿಲ್ಲ.. ಹೂ ಅಂತೀಯಾ.. ಉಹೂ ಅಂತೀಯಾ ಎಂದು ಗುನುಗು ನಿಸುತ್ತಾರಂತೆ !
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುತ್ತಾರೆ. ಇವೆರಡಕ್ಕೂ ಎಷ್ಟೊಂದು ಶ್ರಮ ಅಗತ್ಯ ಎಂಬುದು ಇದರ ತಾತ್ಪರ್ಯ. ಆದರೆ ನಮ್ಮ ರಾಘವೇಂದ್ರ ಥಾಣೆಯವರನ್ನು ನೋಡಿದರೆ ಮದುವೆ ಮಾಡುವುದಕ್ಕಿಂತ, ಮನೆ ಕಟ್ಟಿ ನೋಡುವುದಕ್ಕಿಂತ ಉತ್ತಮ ಐಸ್ ಕ್ರೀಮ್ ಮಾಡುವುದು ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ. ಏಕೆಂದರೆ ಇವರಿಗೆ ಬೆಳಗಿನಿಂದ ರಾತ್ರಿವರೆಗೂ ಐಸ್ ಕ್ರೀಮಿನ ಚಾಕರಿಯೇ.
ಕೊಟ್ಯಂತರ ರೂಪಾಯಿ ಖರ್ಚು ಮಾಡಿ ಇವರು ಬೆಂಗಳೂರಿನಲ್ಲಿ ಐಸ್ ಕ್ರೀಮ್ ಉತ್ಪಾದನಾ ಘಟಕವನ್ನು ಮತ್ತು ದೇಶಾದ್ಯಂತ ಇವುಗಳ ಕಿಯೋಸ್ಕ್, ಪಾರ್ಲರುಗಳನ್ನು ಸ್ಥಾಪಿಸಿದ್ದಾರೆ. ಇಂದ್ರ ಲೋಕದಲ್ಲಿ ಮತ್ತು ಚಂದ್ರಲೋಕದಲ್ಲಿ ಇವರು ಐಸ್ ಕ್ರೀಮ್ ವ್ಯಾಪಾರ ಮಾಡುವುದು ಮಾತ್ರ ಇನ್ನೂ ಬಾಕಿಯಿದೆ!
ಇನ್ನು ನಿಮಗೆ ನಿಮ್ಮ ಹೆಂಡತಿಯನ್ನು ಹಿಮಾಲಯಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ ಎಂದರೆ ಕನಿಷ್ಠ ಥ್ಯಾಂಕೋಸ್ ಐಸ್ ಕ್ರೀಮ್ ಪಾರ್ಲರಿಗಾದರೂ ಕರೆದುಕೊಂಡು ಹೋಗಿ. ಕಾರಣ ಹಿಮಾಲಯದಂಥ ತಂಪು, ಇಂಪು, ಐಸು ಎಲ್ಲವೂ ಇವರಲ್ಲೇ ಸಿಗುವುದು ಸಾಧ್ಯ.
ವಿವಿಧ ರಾಜ್ಯಗಳಲ್ಲಿ
ತಮಿಳುನಾಡು, ಮಹಾರಾಷ್ಟ್ರ ಆಂಧ್ರಪ್ರದೇಶ, ತೆಲಂಗಾಣ, ಜಾಖಂಡ್, ಒರಿಸ್ಸಾ, ದೆಹಲಿ ಬಿಹಾರ್, ಮಧ್ಯ ಪ್ರದೇಶ, ಗೋವಾ, ಅಸ್ಸಾಮ್, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮತ್ತು ನೇಪಾಳ ದೇಶದಲ್ಲಿ ಕೂಡಾ ರಾಘವೇಂದ್ರ ಥಾಣೆಯವರು ತಮ್ಮ ಐಸ್ ಕ್ರೀಮ್ ಠಾಣೆಗಳನ್ನು (ಪಾರ್ಲರು ಗಳನ್ನು) ಸ್ಥಾಪಿಸಿದ್ದಾರೆ.
ಹೀಗಾಗಿ ಮುಂಬೈ, ನಾಗಪುರ, ಅಮರಾವತಿ, ಮಾಲೆಗಾವ್, ಧುಳೇ, ಭೀವಂಡಿ, ವಾರಣಾಸಿ, ಅನಂತ ಪುರ, ಗುಂಟೂರು, ಪೊಂಡಾ, ಪಾಣಿಪತ್, ಕಮ್ಮಮ್, ಸೇಲಂ, ಗಾಂಧಿಧಾಮ ಈ ಮುಂತಾದ ತಾಲೂ ಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಪ್ರವಾಸ ಹೋದರೂ ನಿಮಗೆ ಕಂಪನಿ ಕೊಡಲು ಈ ಥ್ಯಾಂ ಕೋಸ್ ಐಸ್ ಕ್ರೀಮ್ ತಂಪಾಗಿ ಇಂಪಾಗಿ ಅಲ್ಲಿ ಸಿದ್ಧ.
ಹಲ್ಲಿಲ್ಲದವರಿಗೂ ಐಸ್‌ಕ್ರೀಮ್!
ಸಿಹಿಮೂತ್ರ ರೋಗವಿರುವವರು ಕೂಡಾ ಬೇರೆಯವರು ಐಸ್ ಕ್ರೀಮ್ ತಿನ್ನುವುದನ್ನು ಮಿಕಿಮಿಕಿ ನೋಡುತ್ತಾ ಹ್ಯಾಪು ಮುಖ ಹಾಕಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕಾಗಿಲ್ಲ ಅಥವಾ ಸಿಹಿ ಐಸ್ ಕ್ರೀಮನ್ನು ಕದ್ದು ತಿಂದು ಡಯಾಬಿಟಿಸ್ ಹೆಚ್ಚಾಗಿ, ಹೆಂಡತಿಯಿಂದ ಬೈಸಿಕೊಳ್ಳಬೇಕಾಗಿಲ್ಲ. ಏಕೆಂ ದರೆ ಸಿಹಿಮೂತ್ರ ರೋಗವಿರುವವರೂ ತಿನ್ನುವಂಥ ವಿಶೇಷ ಐಸ್ ಕ್ರೀಮುಗಳನ್ನು ಥ್ಯಾಂಕೋ ಸಿನಲ್ಲಿ ತಯಾರಿಸಲಾಗುತ್ತಿದೆ.
ಹಾಗಂತ ಸಿಹಿಮೂತ್ರಕ್ಕೋ ಅಥವಾ ಉರಿಮೂತ್ರಕ್ಕೋ ಕೊಡುವ ಕಹಿ ಔಷಧದಂತೆ ಈ ಐಸ್ ಕ್ರೀಮು ಇರುತ್ತದೆಯೆಂದು ಗಾಬರಿಯಾಗಬೇಡಿ. ಇನ್ನು ಹಲ್ಲಿಲ್ಲದ ವಯಸ್ಸಾದವರು ಸಹಿತ ಆರಾ ಮಾಗಿ ಈ ಐಸ್ ಕ್ರೀಮನ್ನು ತಿನ್ನಬಹುದು. ಏಕೆಂದರೆ ಈ ಐಸ್ ಕ್ರೀಮು ಗಟ್ಟಿ ಮಂಜುಗಡ್ಡೆ ಯಂತಿರುವುದಿಲ್ಲ. ಬದಲಿಗೆ ಈ ಐಸ್ ಕ್ರೀಮನ್ನು ಹಲ್ಲಿಲ್ಲದವರು ಕೂಡಾ ಬಾಯಲ್ಲಿಟ್ಟುಕೊಂಡರೆ ತಕ್ಷಣ ಅದು ನಾಚಿ ನೀರಾಗಿ ಕರಗುತ್ತದೆ. ಹೀಗಾಗಿ ವಯಸ್ಸಾದವರು ಈ ಐಸ್ ಕ್ರೀಮು ತಿನ್ನುವುದಕ್ಕೆ ಹುಡುಗಿಯರಂತೆ ನಾಚಿಕೊಳ್ಳಬೇಕಾಗಿಲ್ಲ.
ರಾಘವೇಂದ್ರ ಥಾಣೆಯವರು ಇನ್ನೂ 47 ವರ್ಷದ ಸಾಹಸಿ. ಇವರ ತಂದೆ ಕೃಷ್ಣರಾವ್ ಕಾರವಾರ ದಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದವರು. ಇವರ ತಾಯಿ ಲಕ್ಷ್ಮಿ ಶಿರಸಿಯವರು. ಈಗ ಶಿರಸಿಯ ಚೌಕಿ ಮಠದಲ್ಲೇ ಇವರ ಮನೆಯಿದೆ. ಇವರ ಪತ್ನಿ ತೆರಕನಹಳ್ಳಿಯ ಶ್ರೇಯಾ ಅವರು ಥ್ಯಾಂಕೋಸಿನ ವಹಿವಾಟುಗಳನ್ನು ನೋಡಿಕೊಳ್ಳುತ್ತಾರೆ. ಇವರ ಸಹೋದರ ರಮೇಶ್ ಥಾಣೆಯವರು ಉತ್ಪಾದನಾ ಘಟಕದ ಉಸ್ತುವಾರಿ ವಹಿಸಿದ್ದಾರೆ. ರಾಘವೇಂದ್ರ ಅವರ ಪುತ್ರ ಋತ್ವಿಕ್ ಬಾಲ್ಯದಿಂದಲೇ ಫುಟ್ಬಾಲ್ ಆಟದಲ್ಲಿ ಚತುರನಾಗಿದ್ದು,
ಈಗ ಸ್ಪೇನ್‌ನಲ್ಲಿ ಈ ಬಗ್ಗೆ ಹೆಚ್ಚಿನ ತರಬೇತಿ ಪಡೆದುಕೊಳ್ಳುತ್ತಾ ಭವಿಷ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದ ಉತ್ತಮ ಫುಟ್ಬಾಲ್ ಆಟಗಾರನಾಗುವ ಭರವಸೆ ಮೂಡಿಸಿದ್ದಾನೆ. ಆಗ ಥ್ಯಾಂಕೋಸ್ ಐಸ್ ಕ್ರೀಮಿಗೆ ಆತನೇ ಬ್ರಾಂಡ್ ಅಂಬಾಸೆಡರ್ ಆಗಿ ಬಂದರೂ ಆಶ್ಚರ್ಯವಿಲ್ಲ. ಹೀಗೆ ಥಾಣೆಯವರ ಕುಟುಂಬ ಶಿರಸಿಗೆ, ಕರ್ನಾಟಕಕ್ಕೆ ತನ್ನದೇ ಆದ ವಿಶಿಷ್ಟ ಖದರು ಮೂಡಿಸುತ್ತಿರುವುದಂತೂ ನಿಜ.
ವಿದೇಶದಲ್ಲಿ ಪ್ರಶಸ್ತಿ
ನಮ್ಮ ನಾಡಿನ ಹೆಮ್ಮೆಯ ಯುವ ಉದ್ಯಮಿಯಾದ ಈ ರಾಘವೇಂದ್ರ ಥಾಣೆಯವರನ್ನು ‘ವಿಶ್ವ ವಾಣಿ’ಯ ಗ್ಲೋಬಲ್ ಫೋರಮ್ ಮತ್ತು ಮಸ್ಕತ್ತಿನ ‘ಕರ್ನಾಟಕ ಸಂಘ’ದ ಸಹಯೋಗದಲ್ಲಿ ಇತ್ತೀ ಚೆಗೆ ಮಸ್ಕತ್ತಿನಲ್ಲಿ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದು ಅರ್ಥಪೂರ್ಣ. ಇದಲ್ಲದೇ ಇವರಿಗೆ, ಇವರ ಕಂಪನಿಗೆ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಸಹಜ ಮತ್ತು ನೈಸರ್ಗಿಕ ರುಚಿ, ಬಣ್ಣಗಳನ್ನು ಬಳಸಿ, ಗುಣಮಟ್ಟ ದ ಹಾಲು ಮತ್ತು ಇತರ ಡ್ರೈ ಫ್ರೂಟ್ ಉಪಯೋಗಿಸಿ ತಯಾರಿಸಲಾಗುತ್ತಿರುವ ಥ್ಯಾಂಕೋಸ್ ಐಸ್ಕ್ರೀಮ್‌ನ್ನು ನೀವೂ ಒಮ್ಮೆ ರುಚಿ ನೋಡಿ.