Vidhana Soudha: ಇನ್ನು ಮುಂದೆ ವಿಧಾನಸೌಧ ಪ್ರವಾಸಿ ತಾಣ! ವೀಕ್ಷಣೆಗೆ ಶುಲ್ಕ, ಗೈಡೆಡ್ ಟೂರ್ ಸೌಲಭ್ಯ
ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗದಂತೆ, ಭಾನುವಾರ, ಎರಡನೇ ಶನಿವಾರ ಮತ್ತು ಇತರ ಸರ್ಕಾರಿ ರಜಾದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಪ್ರವಾಸಗಳನ್ನು ನಡೆಸಬಹುದು ಎಂದು ಡಿಪಿಎಆರ್ ತನ್ನ ಆದೇಶದಲ್ಲಿ ತಿಳಿಸಿದೆ. ಸಾರ್ವತ್ರಿಕ ರಜಾದಿನಗಳಂದು ಮಾತ್ರ ಬೆಳಿಗ್ಗೆ 8.00 ರಿಂದ ಸಂಜೆ 6.00ರವರೆಗೆ ವಿಧಾನಸೌಧದ ವೀಕ್ಷಣೆಗೆ ಅವಕಾಶ ಇರಲಿದೆ. ಇದಕ್ಕಾಗಿ “Guided Tour” ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ವಿಧಾನಸೌಧ

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧವನ್ನು (Vidhana Soudha) ಪ್ರವಾಸಿ ತಾಣವನ್ನಾಗಿ (Tourist Place) ಮಾಡಲಾಗುತ್ತಿದ್ದು, ವೀಕ್ಷಣೆಗೆ ಶುಲ್ಕವನ್ನು ವಿಧಿಸಲಾಗುತ್ತಿದೆ. ಗೈಡೆಡ್ ಟೂರ್ (Guided tour) ಸೌಲಭ್ಯವನ್ನೂ ನೀಡಲಾಗುತ್ತದೆ. ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು (vidhana soudha lighting) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ ವಿಧಾನಸೌಧವನ್ನ ಪ್ರವಾಸಿ ತಾಣವಾಗಿ ಮಾಡುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಮನವಿ ಮೇರೆಗೆ ಸರ್ಕಾರ ಷರತ್ತುಬದ್ದ ಅನುಮತಿ ನೀಡಿದೆ. ನಿರ್ದಿಷ್ಟ ಪ್ರವೇಶ ಶುಲ್ಕ ನೀಡಿ ಪ್ರವಾಸಿಗರು ವಿಧಾನಸೌಧ ನೋಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರವಾಸೋದ್ಯಮ ಇಲಾಖೆಯು ಅಂತಹ ಪ್ರವಾಸಗಳನ್ನು ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (DPAR) ಅನುಮತಿಯನ್ನು ಕೋರಿತ್ತು ಮತ್ತು ಅನುಮೋದನೆ ನೀಡಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗದಂತೆ, ಭಾನುವಾರ, ಎರಡನೇ ಶನಿವಾರ ಮತ್ತು ಇತರ ಸರ್ಕಾರಿ ರಜಾದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಪ್ರವಾಸಗಳನ್ನು ನಡೆಸಬಹುದು ಎಂದು ಡಿಪಿಎಆರ್ ತನ್ನ ಆದೇಶದಲ್ಲಿ ತಿಳಿಸಿದೆ. ಸಾರ್ವತ್ರಿಕ ರಜಾದಿನಗಳಂದು ಮಾತ್ರ ಬೆಳಿಗ್ಗೆ 8.00 ರಿಂದ ಸಂಜೆ 6.00ರವರೆಗೆ ವಿಧಾನಸೌಧದ ವೀಕ್ಷಣೆಗೆ ಅವಕಾಶ ಇರಲಿದೆ. ಇದಕ್ಕಾಗಿ “Guided Tour” ವ್ಯವಸ್ಥೆ ಕಲ್ಪಿಸಲಾಗುತ್ತಿದೆ. Guided Tourಗೆ ಅನುವಾಗುವಂತೆ ಪ್ರವಾಸಿಗರು Online ಮುಖಾಂತರ ticket ಪಡೆಯಲು ಪ್ರವಾಸೋದ್ಯಮ ಇಲಾಖೆಯಿಂದ ತಂತ್ರಾಂಶ ಅಭಿವೃದ್ಧಿ ಪಡಿಸಲಾಗುತ್ತಿದೆ.
ಪ್ರವಾಸಿಗರಿಗೆ ನಿಗದಿಪಡಿಸುವ ಪ್ರವೇಶ ದರ ಜನಸ್ನೇಹಿಯಾಗಿರುವಂತೆ ಚಿಂತನೆ ನಡೆಸಲಾಗುತ್ತಿದೆ. ವಿಧಾನಸೌಧ ಕಟ್ಟಡ/ ಉದ್ಯಾನವನಗಳು/ಪ್ರತಿಮೆಗಳಿಗೆ ಯಾವುದೇ ಧಕ್ಕೆ ಉಂಟಾಗದಂತೆ ಎಚ್ಚರಿಕ ವಹಿಸತಕ್ಕದ್ದು ಹಾಗೂ ಈ ಕುರಿತು ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆಯು ಕ್ರಮ ವಹಿಸತಕ್ಕದ್ದು ಎಂಬ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಷ್ಟ್ರಪತಿ ಭವನ ಮಾದರಿ ಅಭಿವೃದ್ಧಿ
ದೆಹಲಿಯ ರಾಷ್ಟ್ರಪತಿ ಭವನ ಮತ್ತು ಸಂಸತ್ತಿನ ಮಾದರಿಯಲ್ಲಿ ಪ್ರವಾಸ ಮಾರ್ಗದರ್ಶಿ ನಡೆಸಲಾಗುವುದು. ಪ್ರವಾಸಿಗರನ್ನು ಆಕರ್ಷಿಸಲು ಕಳೆದ ಭಾನುವಾರದಿಂದ ಸಾರ್ವಜನಿಕ ರಜಾದಿನಗಳಲ್ಲಿ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗುತ್ತಿದೆ. ವಿದೇಶಗಳು ಮತ್ತು ಕರ್ನಾಟಕದ ಹೊರಗಿನಿಂದ ಅನೇಕ ಪ್ರವಾಸಿಗರು ವಿಧಾನಸೌಧಕ್ಕೆ ಭೇಟಿ ನೀಡಿ ಸೌಧದ ಮುಂದೆ ಛಾಯಾಚಿತ್ರಗಳಿಗೆ ಪೋಸ್ ನೀಡಿದರೂ, ಅವರನ್ನು ಒಳಗೆ ಬಿಡಲು ಅನುಮತಿ ಇರಲಿಲ್ಲ. ಗೈಡೆಡ್ ಟೂರ್‌ನಿಂದ ಈಗ ಪ್ರವಾಸಿಗರು 70 ವರ್ಷಗಳಷ್ಟು ಹಳೆಯದಾದ ಭವ್ಯವಾದ ಕಟ್ಟಡದ ಒಳಗೆ ಹೋಗಲು ಅವಕಾಶವಾಗಲಿದೆ.
ವಿಧಾನಸೌಧವನ್ನು ಒಳಗಿನಿಂದ ನೋಡಬೇಕು ಮತ್ತು ಕಟ್ಟಡದ ಇತಿಹಾಸ ಮತ್ತು ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂಬುದು ಸರ್ಕಾರದ ಬಯಕೆಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಸಂಬಂಧ ಡಿಪಿಎಆರ್ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಬೇಕು ಎಂದು ಹೇಳಿದ್ದಾರೆ. ಟಿಕೆಟ್ ದರವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ, ಆದರೆ ಅದು ಜನಸ್ನೇಹಿಯಾಗಿರುತ್ತದೆ ಎಂದು ತಿಳಿಸಿದೆ.
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಕಾರ್ಯ ಕ್ರಮಗಳು ಮತ್ತು ಭದ್ರತಾ ಇಲಾಖೆ ಅಧಿಕಾರಿಗಳ ಸಹಾಯದಿಂದ ಸೌಧದ ಒಳಗೆ ಮಾರ್ಗ ನಕ್ಷೆಯನ್ನು ಇನ್ನೂ ವಿನ್ಯಾಸಗೊಳಿಸಬೇಕಾಗಿದೆ. ನೀಲನಕ್ಷೆ ರೂಪುಗೊಂಡ ನಂತರ, ಪ್ರವಾಸಗಳು ಪ್ರಾರಂಭವಾಗುತ್ತವೆ, ಅದಕ್ಕೂ ಮೊದಲು ಪ್ರವಾಸ ಮಾರ್ಗವನ್ನು ಡಿಪಿಎಆರ್ ಅನುಮೋದಿಸಬೇಕು.
ಇದಲ್ಲದೆ, ಪ್ರವಾಸದ ಸಂಪೂರ್ಣ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡಲು ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ಅಧಿಕಾರಿಯನ್ನು ನಿಯೋಜಿಸಬೇಕು. ಪ್ರವಾಸಿಗರ ತಂಡಗಳನ್ನು ರಚಿಸುವ ಜವಾಬ್ದಾರಿಯನ್ನು ಇಲಾಖೆ ಹೊಂದಿರುತ್ತದೆ, ಪ್ರತಿ ತಂಡದಲ್ಲಿ 30ಕ್ಕಿಂತ ಹೆಚ್ಚು ಸದಸ್ಯರು ಇರಬಾರದು. ಎಲ್ಲಾ ಸಂದರ್ಶಕರ ವಿವರಗಳನ್ನು ಪ್ರತಿದಿನ ಡಿಪಿಎಆರ್ ಮತ್ತು ಭದ್ರತಾ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ನೀರಿನ ಬಾಟಲಿಗಳನ್ನು ಹೊರತುಪಡಿಸಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ವಿಧಾನಸೌಧ ಆವರಣದಲ್ಲಿ ಯಾವುದೇ ತಿನ್ನಬಹುದಾದ ವಸ್ತುಗಳು ಇಡುವಂತಿಲ್ಲ. ಪ್ರತಿಮೆಗಳು ಅಥವಾ ಇತರ ರಚನೆಗಳಿಗೆ ಹಾನಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ತಿಳಿಸಲು ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಇರಿಸಬೇಕು. ಪ್ರವಾಸೋದ್ಯಮ ಇಲಾಖೆಯು ಆಂಬ್ಯುಲೆನ್ಸ್ ನಿಲುಗಡೆ, ಅಗ್ನಿಶಾಮಕ ಸಾಧನಗಳನ್ನು ಇಡುವುದು ಮತ್ತು ಇತರ ಸುರಕ್ಷತಾ ಮುನ್ನೆಚ್ಚರಿಕೆಗಳಂತಹ ವ್ಯವಸ್ಥೆಗಳನ್ನು ಸಹ ಮಾಡಬೇಕು. ಡ್ರೋನ್‌ಗಳನ್ನು ಹಾರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ: Vidhana Soudha lighting: ವಿಧಾನಸೌಧದ ನಿತ್ಯ ದೀಪಾಲಂಕಾರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ