ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

French Open 2025: ಫ್ರೆಂಚ್ ಓಪನ್ ಸೆಮಿ ಫೈನಲ್‌ ಪ್ರವೇಶಿಸಿ ದಾಖಲೆ ಬರೆದ ಜೊಕೊವಿಕ್‌

ತನಗಿಂತ 10 ವರ್ಷ ಕಿರಿಯರಾದ ಜ್ವೆರೆವ್ ಅವರನ್ನು 3 ಗಂಟೆ 17 ನಿಮಿಷಗಳ ಹೋರಾಟದಲ್ಲಿ ಮಣಿಸುವ ಮೂಲಕ ಸೆಮಿಫೈನಲ್‌ ತಲುಪಿದ ಜೊಕೊವಿಕ್‌ 51 ನೇ ಗ್ರ್ಯಾಂಡ್ ಸ್ಲ್ಯಾಮ್ ಸೆಮಿಫೈನಲ್ ತಲುಪಿಸ ಸಾಧನೆ ಮಾಡಿದರು. ಇದರಲ್ಲಿ 13 ಬಾರಿ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಫ್ರೆಂಚ್ ಓಪನ್ ಸೆಮಿ ಫೈನಲ್‌ ಪ್ರವೇಶಿಸಿ ದಾಖಲೆ ಬರೆದ ಜೊಕೊವಿಕ್‌

Profile Abhilash BC Jun 5, 2025 12:53 PM

ಪ್ಯಾರಿಸ್: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಹುಡುಕಾಟದಲ್ಲಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಕ್‌(Novak Djokovic), ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್(French Open 2025) ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ ಪ್ರವೇಶಿಸುವ ಮೂಲಕ ಇತಿಹಾಸವೊಂದನ್ನು ನಿರ್ಮಿಸಿದ್ದಾರೆ. ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್(Alexander Zverev) ಅವರನ್ನು 4-6, 6-3, 6-2, 6-4 ಸೆಟ್‌ಗಳಿಂದ ಸೋಲಿಸಿ, 1968ರ ಬಳಿಕ ಫ್ರೆಂಚ್ ಓಪನ್ ಸೆಮಿಫೈನಲ್‌ ತಲುಪಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು.

ಒಟ್ಟಾರೆಯಾಗಿ, ಜೊಕೊವಿಕ್‌(38 ವರ್ಷ) ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ತಲುಪಿದ ಎರಡನೇ ಹಿರಿಯ ಆಟಗಾರ. 1968ರಲ್ಲಿ ಪಾಂಚೋ ಗೊನ್ಜಾಲೆಸ್ 40 ವರ್ಷ ವರ್ಷದಲ್ಲಿ ಸೆಮಿಫೈನಲ್ ತಲುಪಿದ್ದು ದಾಖಲೆ.

ತನಗಿಂತ 10 ವರ್ಷ ಕಿರಿಯರಾದ ಜ್ವೆರೆವ್ ಅವರನ್ನು 3 ಗಂಟೆ 17 ನಿಮಿಷಗಳ ಹೋರಾಟದಲ್ಲಿ ಮಣಿಸುವ ಮೂಲಕ ಸೆಮಿಫೈನಲ್‌ ತಲುಪಿದ ಜೊಕೊವಿಕ್‌ 51 ನೇ ಗ್ರ್ಯಾಂಡ್ ಸ್ಲ್ಯಾಮ್ ಸೆಮಿಫೈನಲ್ ತಲುಪಿಸ ಸಾಧನೆ ಮಾಡಿದರು. ಇದರಲ್ಲಿ 13 ಬಾರಿ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.



25 ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ರೇಸ್‌ನಲ್ಲಿರುವ ಜೊಕೊವಿಕ್, ಶುಕ್ರವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ. ಸಿನ್ನರ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಇಟಾಲಿಯನ್ ಆಟಗಾರ ಅಲೆಕ್ಸಾಂಡರ್ ಬುಬ್ಲಿಕ್ ವಿರುದ್ಧ ನೇರ ಸೆಟ್‌ಗಳಿಂದ (6-1, 7-5, 6-0) ಜಯ ಸಾಧಿಸಿದ್ದರು.

ಮುಖಾಮುಖಿ ದಾಖಲೆಯಲ್ಲಿ, ಜೊಕೊವಿಕ್ ಮತ್ತು ಸಿನ್ನರ್ 4-4 ಸಮಬಲ ಸಾಧಿಸಿದ್ದಾರೆ. ಆದಾಗ್ಯೂ, ಸಿನ್ನರ್ ಕೊನೆಯ ಮೂರು ಮುಖಾಮುಖಿಗಳನ್ನು ಗೆದ್ದಿದ್ದಾರೆ. 2021 ರಲ್ಲಿ ಜೊಕೊವಿಕ್ ತಮ್ಮ ಏಕೈಕ ಮುಖಾಮುಖಿಯನ್ನು ಫ್ರೆಂಚ್‌ ಓಪನ್‌ನಲ್ಲಿಯೇ ಗೆದ್ದಿದ್ದರು. ಸಿನ್ನರ್ ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಸತತ 19 ಪಂದ್ಯಗಳು ಮತ್ತು ಸತತ 26 ಸೆಟ್‌ಗಳನ್ನು ಗೆದ್ದು ಅಜೇಯ ಓಟವನ್ನು ಕಾಯ್ದುಕೊಂಡಿರುವ ಕಾರಣ ಸೆಮಿಫೈನಲ್‌ ಪಂದ್ಯ ಫೈನಲ್ ಪಂದ್ಯದ ರೋಮಾಂಚನ ನಿರೀಕ್ಷೆಯಿದೆ.

ಇದನ್ನೂ ಓದಿ IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್‌ಸಿಬಿ ಪ್ರತಿಕ್ರಿಯೆ!