Virat Kohli: ವಿರಾಟ್ ಕೊಹ್ಲಿಯ ನೂತನ ಕೇಶ ವಿನ್ಯಾಸಕ್ಕೆ ಅಭಿಮಾನಿಗಳು ಫಿದಾ!
IPL 2025: ಕೊಹ್ಲಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದು, ಆರ್‌ಸಿಬಿ ತಂಡದ ಪೂರ್ವ ಸಿದ್ಧತಾ ಶಿಬಿರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ದುಬೈನಿಂದ ನೇರವಾಗಿ ಲಂಡನ್‌ಗೆ ಪ್ರಯಾಣ ಬೆಳೆದಿದ್ದ ಕೊಹ್ಲಿ, ದ್ರಾವಿಡ್-ಪಡುಕೋಣೆ ಖ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಆಯೋಜಿಸಲಾಗಿರುವ ಆರ್‌ಸಿಬಿ ಫ್ರಾಂಚೈಸಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.


ಮುಂಬಯಿ: ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್(IPL 2025) ಟೂರ್ನಿಯ 18ನೇ ಆವೃತ್ತಿಯ ಪಂದ್ಯಾವಗಳಿಗೂ ಮುನ್ನ ಆರ್‌ಸಿಬಿ(Royal Challengers Bengaluru) ತಂಡದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ತಮ್ಮ ಕೇಶ ವಿನ್ಯಾಸ ಬದಲಾಯಿಸಿಕೊಂಡಿದ್ದಾರೆ. ಹಳೆ ಶೈಲಿಗಿಂತ ಕೊಂಚ ಭಿನ್ನ ರೀತಿಯಲ್ಲಿರುವ ಕೊಹ್ಲಿಯ ಹೊಸ ಕೇಶವಿನ್ಯಾಸದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿ ಆವೃತ್ತಿಯ ಐಪಿಎಲ್‌ನಲ್ಲೂ ಕೊಹ್ಲಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಕೊಹ್ಲಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದು, ಆರ್‌ಸಿಬಿ ತಂಡದ ಪೂರ್ವ ಸಿದ್ಧತಾ ಶಿಬಿರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ದುಬೈನಿಂದ ನೇರವಾಗಿ ಲಂಡನ್‌ಗೆ ಪ್ರಯಾಣ ಬೆಳೆದಿದ್ದ ಕೊಹ್ಲಿ, ದ್ರಾವಿಡ್-ಪಡುಕೋಣೆ ಖ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಆಯೋಜಿಸಲಾಗಿರುವ ಆರ್‌ಸಿಬಿ ಫ್ರಾಂಚೈಸಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
Virat Kohli's New hair looks for the IPL 2025....!!!!! 🐐 pic.twitter.com/zkQVKrxSpe
— Virat Kohli Fan Club (@Trend_VKohli) March 13, 2025
ಈಗಾಗಲೇ ಆರ್‌ಸಿಬಿಯ ನೂತನ ನಾಯಕ ರಜತ್ ಪಾಟಿದಾರ್, ಭುವನೇಶ್ವರ್ ಕುಮಾರ್, ದೇವದತ್ತ ಪಡಿಕ್ಕಲ್, ಸ್ಪಿನ್ ಆಲ್‌ರೌಂಡರ್ ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ವೇಗಿ ಯಶ್ ದಯಾಳ್ ಸೇರಿ ಹಲವು ಆಟಗಾರರು ಗುರುವಾರದಿಂದ ಅಭ್ಯಾಸ ಆರಂಭಿಸಿದ್ದಾರೆ. ನೂತನ ಬ್ಯಾಟಿಂಗ್ ಸಲಹೆಗಾರನಾಗಿರುವ ಆರ್‌ಸಿಬಿ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಆಟಗಾರರು ಗುರುವಾರ ನೆಟ್ಸ್‌ನಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಅಭ್ಯಾಸ ನಡೆಸಿದ್ದರು.
ಇದನ್ನೂ ಓದಿ IPL 2025: ಕೊಹ್ಲಿ-ಸಾಲ್ಟ್ ಓಪನರ್ಸ್, ಕೆಕೆಆರ್ ವಿರುದ್ದದ ಆರಂಭಿಕ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI
ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರಿನ್ನೂ ತಂಡ ಸೇರಿಕೊಳ್ಳಬೇಕಿದೆ. ಮಾರ್ಚ್ 22 ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿದೆ.
ಆರ್‌ಸಿಬಿ ತಂಡ
ವಿರಾಟ್ ಕೊಹ್ಲಿ,ರಜತ್ ಪಾಟೀದಾರ್, ಯಶ್ ದಯಾಳ್,ಜೋಶ್ ಹ್ಯಾಸಲ್ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ಸಲಾಂ, ಸುಯಶ್ ಶರ್ಮ, ಭುವನೇಶ್ವರ್ ಕುಮಾರ್,ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ನುವಾನ್ ತುಷಾರ, ರೊಮಾರಿಯೊ ಶೆರ್ಡ್, ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕರ, ಮೋಹಿತ್ ರಾಥೀ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.