Vaastu Tips : ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ಯಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಬೇಡಿ..!
ಮನೆಯಲ್ಲಿ ಮನಿಪ್ಲಾಂಟ್ ಸಮೃದ್ಧವಾಗಿ ಬೆಳೆದರೆ ಹಣಕಾಸು ಅದೇ ರೀತಿಯಾಗಿ ವೃದ್ಧಿಯಾಗುವುದೆಂಬ ನಂಬಿಕೆ ಇದೆ. ಆದರೆ ಮನೆಯಲ್ಲಿ ಮನಿಪ್ಲಾಂಟ್ ನೆಡಲು ಕೆಲವು ನಿಯಮಗಳು ಇದ್ದು, ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದ ಆರ್ಥಿಕ ಸಮಸ್ಯೆ ಎದುರಾಗಲಿದೆ. ಹಾಗಾದ್ರೆ ಮನೆಯಲ್ಲಿ ಎಲ್ಲಿ ಮನಿ ಪ್ಲಾಂಟ್ ಇಡಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಮನಿ ಪ್ಲಾಂಟ್

ವಾಸ್ತು ಶಾಸ್ತ್ರವು ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ವಾಸ್ತು ಪ್ರಕಾರ, ಮನೆಯನ್ನು ಸಿದ್ಧಪಡಿಸಿದರೆ ಮತ್ತು ವಸ್ತುಗಳನ್ನು ಇರಿಸಿದರೆ, ಹಲವಾರು ರೀತಿಯ ದೋಷಗಳನ್ನು, ಸಮಸ್ಯೆಗಳು ದೂರಾಗುತ್ತವೆ. ಹಾಗೆ, ವಾಸ್ತು ಪ್ರಕಾರ, ಕೆಲವು ಸಸ್ಯಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮನೆಯಲ್ಲಿ ಇರಿಸುವುದರಿಂದ ಅಥವಾ ನೆಟ್ಟರೆ, ಧನಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿ, ಸುಖ, ಶಾಂತಿ, ನೆಮ್ಮದಿ ತರುತ್ತದೆ. ಅಂತ ಸಸ್ಯಗಳ ಪೈಕಿ ಮನಿ ಪ್ಲಾಂಟ್ ಕೂಡ ಒಂದಾಗಿದ್ದು, ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಸ್ಥಿತಿ ಮತ್ತು ದಿಕ್ಕು ಸರಿಯಾಗಿದ್ದರೆ ನಿಮ್ಮ ಮನೆ ಹಣದಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಪುಣ್ಯ ಸಿಗುತ್ತದೆ ಮತ್ತು ಹಣದ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ. ಆದರೆ ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟರೂ ಪ್ರಯೋಜನವಾಗುತ್ತಿಲ್ಲ ಎಂದು ದೂರುವವರ ಸಂಖ್ಯೆಯೂ ಹೆಚ್ಚಿದೆ. ನಿಮಗೂ ಈ ರೀತಿ ಆದಲ್ಲಿ ಅದಕ್ಕೆ ಕಾರಣವೇನು ಎನ್ನುವ ವಿಚಾರವನ್ನು ಇಲ್ಲಿ ವಿವರಿಸಲಾಗಿದೆ.
ಈ ದಿಕ್ಕಿನಲ್ಲಿಡಿ
ವಾಸ್ತು ಶಾಸ್ತ್ರದ ಪ್ರಕಾರ ಮನಿಪ್ಲಾಂಟ್ ಅನ್ನು ಮನೆಯ ಆಗ್ನೇಯ ದಿಕ್ಕಿಗೆ ಇಡಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಸದಾ ಇರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗುತ್ತಾ ಬರುತ್ತದೆ. ಅಷ್ಟೇ ಅಲ್ಲದೆ ಆಗ್ನೇಯ ದಿಕ್ಕಿಗೆ ಇಡುವುದರಿಂದ ಹೆಚ್ಚು ಶುಭವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆಗ್ನೇಯ ದಿಕ್ಕು ಪ್ರಥಮ ಪೂಜಕ ಗಣೇಶನ ದಿಕ್ಕಾಗಿದೆ. ಈ ದಿಕ್ಕಿಗೆ ಮನಿಪ್ಲಾಂಟ್ ಇಡುವುದರಿಂದ ಮನೆಯ ಸದಸ್ಯರ ಅದೃಷ್ಟ ಖುಲಾಯಿಸುವಲ್ಲಿ ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ.
ಈ ಸ್ಥಳದಲ್ಲಿ ಇಟ್ಟರೆ ಸಮಸ್ಯೆ ಗ್ಯಾರಂಟಿ
ಮನಿಪ್ಲಾಂಟ್ ಅನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮವಲ್ಲ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈಶಾನ್ಯ ದಿಕ್ಕು ದೇವಗುರು ಬೃಹಸ್ಪತಿಯ ಅಧಿಪತ್ಯದ ದಿಕ್ಕಾಗಿದೆ. ಶುಕ್ರ ಮತ್ತು ಗುರು ಪರಸ್ಪರ ವೈರಿಗಳಾಗಿದ್ದಾರೆ. ಹಾಗಾಗಿ ಅದೃಷ್ಟವನ್ನು ತಂದುಕೊಡುವ ಮನಿಪ್ಲಾಂಟ್ ಅನ್ನು ಈಶಾನ್ಯ ದಿಕ್ಕಿಗೆ ಇಡಬಾರದು.
ಮನೆಯ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಮನಿಪ್ಲಾಂಟ್ ಅನ್ನು ನೆಡಬಾರದು. ಇದರಿಂದ ಮನೆಯ ಸದಸ್ಯರಲ್ಲಿ ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಪರಸ್ಪರ ಭಿನ್ನಾಭಿಪ್ರಾಯ ತಲೆದೋರುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ಮನಿಪ್ಲಾಂಟ್ ನೆಲವನ್ನು ಸೋಕದಂತೆ ಇಡುವುದು ಉತ್ತಮ. ಹಾಗಾದಲ್ಲಿ ಇದು ಅಶುಭವನ್ನು ಸೂಚಿಸುತ್ತದೆ. ಇದರಿಂದ ಆರ್ಥಿಕ ಹಾನಿ ಮತ್ತು ಸುಖ-ಸಮೃದ್ಧಿ ನಾಶವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಒಳಗೆ ಅಥವಾ ಹೊರಗೆ ಎಲ್ಲಿಡಬೇಕು...?
ಮನಿಪ್ಲಾಂಟ್ ಅನ್ನು ಮನೆಯ ಒಳಗೆ ಅಥವಾ ಹೊರಗಡೆ ಎಲ್ಲಿ ಬೇಕಾದರೂ ಇಡಬಹುದು. ಮನಿಪ್ಲಾಂಟ್ ಅನ್ನು ಮನೆಯ ಅಂಗಳದಿಂದ ಅಥವಾ ಕಾಂಪೌಂಡ್‌ನಿಂದ ಹೊರಗೆ ನೆಡಬಾರದು. ಮನಿಪ್ಲಾಂಟ್ ಅನ್ನು ಶುಕ್ರವಾರ ನೆಡುವುದು ಶುಭವೆಂದು ಹೇಳಲಾಗುತ್ತದೆ. ಈ ಸಸ್ಯವು ಕಾಂಪೌಂಡ್‌ನಿಂದ ಹೊರಗಿದ್ದಾಗ ನಕಾರಾತ್ಮಕ ಶಕ್ತಿಗೆ ಹೆಚ್ಚು ಸೋಕುವುದರಿಂದ ಮನಿಪ್ಲಾಂಟ್ ಸೊರಗಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.