Karna Serial OTT: ಕಿರುತೆರೆಯಲ್ಲೇ ಪ್ರಪ್ರಥಮ ಬಾರಿ: ಇತಿಹಾಸ ನಿರ್ಮಿಸಿದ ಕರ್ಣ ಧಾರಾವಾಹಿ
ಸಾಮಾನ್ಯವಾಗಿ ಟಿವಿಯಲ್ಲಿ ಪ್ರಸಾರ ಕಂಡ ಬಳಿಕವೇ ಧಾರಾವಾಹಿಯನ್ನು ಒಟಿಟಿಯಲ್ಲಿ ಪ್ರಸಾರ ಮಾಡೋದು ವಾಡಿಕೆ. ಆದರೆ, ಝೀ ಕನ್ನಡ ಹಾಗೂ ಝೀ 5 ಈಗ ಹೊಸ ತಂತ್ರವನ್ನು ಬಳಸಿ ಟಿವಿಗೂ ಮೊದಲೇ ಒಟಿಟಿಯಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ದಾಖಲೆ ಬರೆದಿದೆ. ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಟಿವಿಗೂ ಮೊದಲೇ ಒಟಿಟಿಯಲ್ಲಿ ಪ್ರಸಾರಗೊಂಡ ಧಾರಾವಾಹಿ ಎಂಬ ಖ್ಯಾತಿಗೆ ಕರ್ಣ ಪಾತ್ರವಾಗಿದೆ.

Karna Serial

ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮೃತಾ ಗೌಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಕರ್ಣ ಧಾರಾವಾಹಿ (Karna Kannada Serial) ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2025 ಜೂನ್ 16ರಂದು ರಾತ್ರಿ 8 ಗಂಟೆಗೆ ಕರ್ಣ ಧಾರಾವಾಹಿ ಪ್ರಸಾರ ಆಗಬೇಕಿತ್ತು. ಆದರೆ, ಕಾನೂನಿನ ತೊಡಕಿನಿಂದ ಧಾರಾವಾಹಿ ಪ್ರಸಾರವನ್ನು ಮುಂದೂಡಲಾಗಿತ್ತು. ಎಲ್ಲ ಅಡೆತಡೆಗಳನ್ನು ದಾಟಿ ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇವೆ ಎಂದು ವಾಹಿನಿಯವರು ಹೇಳಿದ್ದರು. ಆದರೆ, ಇದೀಗ ದಿಢೀರ್ ಎಂಬಂತೆ ಕರ್ಣ ಧಾರಾವಾಹಿಯ ಮೊದಲ ಎಪಿಸೋಡ್ ಯಾವುದೇ ಸೂಚನೆ ಇಲ್ಲದೆ ಟೆಲಿಕಾಸ್ಟ್ ಆಗಿದ್ದು, ಇಷ್ಟು ಮಾತ್ರವಲ್ಲದೆ ಇತಿಹಾಸವೇ ನಿರ್ಮಿಸಿದೆ.
ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದು ಪ್ರಸಾರಕ್ಕೆ ತೊಂದರೆ ಆಯಿತು. ಭವ್ಯಾ ಅವರು ಬಿಗ್ ಬಾಸ್ನಲ್ಲಿ ಭಾಗವಹಿಸುವ ವೇಳೆ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರು. ಆ ಒಪ್ಪಂದದ ಅವಧಿ ಮುಗಿಯುವ ಮೊದಲೇ ಕರ್ಣ ಧಾರಾವಾಹಿ ಪ್ರಸಾರ ಕಂಡಿದ್ದರಿಂದ ಕೇಸ್ ಹಾಕಲಾಯಿತು. ಇದೇ ಕಾರಣದಿಂದ ಕರ್ಣ ಧಾರಾವಾಹಿ ಝೀ ಕನ್ನಡದಲ್ಲಿ ಪ್ರಸಾರ ಕಂಡಿರಲಿಲ್ಲ. ಕರ್ಣ ಬರೋದು ತಡವಾಗಬಹುದು. ಆದರೆ, ಅವನು ಬರೋದು ಖಚಿತ ಎಂದು ವಾಹಿನಿಯವರು ಹೇಳಿದ್ದರು. ಆದರೆ, ಈ ಧಾರಾವಾಹಿಯ ಮೊದಲ ಎಪಿಸೋಡ್ ನಿನ್ನೆ (ಜು. 2 ರಂದು) ಒಟಿಟಿಯಲ್ಲಿ ಪ್ರಸಾರ ಕಂಡಿದೆ.
ಕರ್ಣ ಧಾರಾವಾಹಿಯ ಮೊದಲ ಎಪಿಸೋಡ್ ಝೀ 5 ಆ್ಯಪ್ನಲ್ಲಿ ಅಪ್ಲೋಡ್ ಆಗಿದೆ. ಕರ್ಣನ ಕುಟುಂಬ, ಅವನ ವೃತ್ತಿ ಬದುಕು, ದಾರಿ ಮಧ್ಯೆ ಆಂಬುಲೆನ್ಸ್‌ನಲ್ಲಿಯೇ ಹೆರಿಗೆ ಮಾಡಿಸೋದು, ಮನೆಯವರಿಗೆ ಕರ್ಣನ ಮೇಲಿನ ಅಸಮಾಧಾನ, ನಿಧಿ-ನಿತ್ಯಾ (ಭವ್ಯಾ ಗೌಡ-ನಮ್ರತಾ ಗೌಡ) ಕುಟುಂಬಗಳ ತುಣುಕನ್ನ ಮೊದಲ ಎಪಿಸೋಡ್‌ನಲ್ಲಿ ತೋರಿಸಲಾಗಿದೆ.
Karna Serial: ಎಲ್ಲ ಅಡೆತಡೆ ದಾಟಿ ಬಂದೇ ಬಿಟ್ಟ ಕರ್ಣ: ಮೊದಲ ಎಪಿಸೋಡ್ ಹೇಗಿದೆ?
ಸಾಮಾನ್ಯವಾಗಿ ಟಿವಿಯಲ್ಲಿ ಪ್ರಸಾರ ಕಂಡ ಬಳಿಕವೇ ಧಾರಾವಾಹಿಯನ್ನು ಒಟಿಟಿಯಲ್ಲಿ ಪ್ರಸಾರ ಮಾಡೋದು ವಾಡಿಕೆ. ಆದರೆ, ಝೀ ಕನ್ನಡ ಹಾಗೂ ಝೀ 5 ಈಗ ಹೊಸ ತಂತ್ರವನ್ನು ಬಳಸಿ ಟಿವಿಗೂ ಮೊದಲೇ ಒಟಿಟಿಯಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ದಾಖಲೆ ಬರೆದಿದೆ. ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಟಿವಿಗೂ ಮೊದಲೇ ಒಟಿಟಿಯಲ್ಲಿ ಪ್ರಸಾರಗೊಂಡ ಧಾರಾವಾಹಿ ಎಂಬ ಖ್ಯಾತಿಗೆ ಕರ್ಣ ಪಾತ್ರವಾಗಿದೆ.
ಇನ್ನು ಟಿವಿಯಲ್ಲಿ ಕರ್ಣ ಧಾರಾವಾಹಿಯ ಮೊದಲ ಎಪಿಸೋಡ್ ಇಂದಿನಿಂದ ಟೆಲಿಕಾಸ್ಟ್ ಆಗಲಿದೆ. ಈ ಕುರಿತು ಝೀ ಕನ್ನಡ ಅಧಿಕೃತವಾಗಿ ತಿಳಿಸಿದ್ದು, ‘‘ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮ ಹೃದಯ ಮೀಟಲು ಬರ್ತಿದ್ದಾನೆ ಕರ್ಣ! ರಾತ್ರಿ 8ಕ್ಕೆ’’ ಎಂದು ಬರೆದುಕೊಂಡಿದೆ.