Karna Serial: ಎಲ್ಲ ಅಡೆತಡೆ ದಾಟಿ ಬಂದೇ ಬಿಟ್ಟ ಕರ್ಣ: ಮೊದಲ ಎಪಿಸೋಡ್ ಹೇಗಿದೆ?
ಕರ್ಣ ಧಾರಾವಾಹಿ ಝೀ ಕನ್ನಡದಲ್ಲಿ ಪ್ರಸಾರ ಕಂಡಿರಲಿಲ್ಲ. ಕರ್ಣ ಬರೋದು ತಡವಾಗಬಹುದು. ಆದರೆ, ಅವನು ಬರೋದು ಖಚಿತ ಎಂದು ವಾಹಿನಿಯವರು ಹೇಳಿದ್ದರು. ಅದರಂತೆ ಈಗ ಎಲ್ಲ ಅಡೆತಡೆಗಳನ್ನು ದಾಟಿ ಇಂದಿನಿಂದ ಕರ್ಣನ ದರ್ಶನ ಆಗಲಿದೆ.

Karna Serial

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಝೀ ಕನ್ನಡ ವಾಹಿನಿಯಲ್ಲಿ ಹೊಸ ಕರ್ಣ ಧಾರಾವಾಹಿ (Karna Kannada Serial) ಪ್ರಸಾರವಾಗಬೇಕಿತ್ತು. ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ಜೂನ್ 16 ಸೋಮವಾರದಿಂದ ರಾತ್ರಿ 8 ಗಂಟೆಯಿಂದ ಪ್ರಸಾರ ಕಾಣಲಿದೆ ಎಂದು ಸ್ವತಃ ಝೀ ಕನ್ನಡ ಹೇಳಿತ್ತು. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ. ಆದರೆ, ಕರ್ಣ ಧಾರಾವಾಹಿಯನ್ನು ಕೊನೇ ಕ್ಷಣದಲ್ಲಿ ರದ್ದು ಮಾಡಲಾಯಿತು.
ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮ್ರತಾ ಮುಖ್ಯ ಭೂಮಿಕೆಯಲ್ಲಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಭವ್ಯಾ ಗೌಡ ಅವರು ಬಿಗ್ ಬಾಸ್ನಲ್ಲಿ ಭಾಗವಹಿಸುವ ವೇಳೆ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರು. ಆ ಒಪ್ಪಂದದ ಅವಧಿ ಮುಗಿಯುವ ಮೊದಲೇ ಕರ್ಣ ಧಾರಾವಾಹಿ ಪ್ರಸಾರ ಕಂಡಿದ್ದರಿಂದ ಕೇಸ್ ಹಾಕಲಾಯಿತು. ಇದೇ ಕಾರಣದಿಂದ ಕರ್ಣ ಧಾರಾವಾಹಿ ಝೀ ಕನ್ನಡದಲ್ಲಿ ಪ್ರಸಾರ ಕಂಡಿರಲಿಲ್ಲ. ಕರ್ಣ ಬರೋದು ತಡವಾಗಬಹುದು. ಆದರೆ, ಅವನು ಬರೋದು ಖಚಿತ ಎಂದು ವಾಹಿನಿಯವರು ಹೇಳಿದ್ದರು. ಅದರಂತೆ ಈಗ ಎಲ್ಲ ಅಡೆತಡೆಗಳನ್ನು ದಾಟಿ ಇಂದಿನಿಂದ ಕರ್ಣನ ದರ್ಶನ ಆಗಲಿದೆ.
ಈ ಕುರಿತು ಝೀ ಕನ್ನಡ ಅಧಿಕೃತವಾಗಿ ತಿಳಿಸಿದ್ದು, ‘‘ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮ ಹೃದಯ ಮೀಟಲು ಬರ್ತಿದ್ದಾನೆ ಕರ್ಣ! ರಾತ್ರಿ 8ಕ್ಕೆ’’ ಎಂದು ಬರೆದುಕೊಂಡಿದೆ.
ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಯಲ್ಲಿ ಕಿರಣ್ ರಾಜ್, ಭವ್ಯಾ, ನಮ್ರತಾ ಜೊತೆ ದೊಡ್ಡ ತಾರೆಯರ ದಂಡೇ ಇದೆ. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್ ನಟಿಸುತ್ತಿದ್ದಾರೆ. ಭವ್ಯಾ ಗೌಡ ಅವರು ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೈನಕಾಲಜಿಸ್ಟ್ ಆಗಿ ಕಿರಣ್ ರಾಜ್ ನಟಿಸುತ್ತಿದ್ದಾರೆ. ಭವ್ಯಾ ನಿಧಿ ಪಾತ್ರ ಮಾಡುತ್ತಿದ್ದಾರೆ. ಇವರ ಜೊತೆಗೆ ನಮ್ರತಾ ಗೌಡ ನಿತ್ಯಾ ಅನ್ನೋ ಪಾತ್ರ ಮಾಡ್ತಿದ್ದಾರೆ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡ್ತಾ ಇರುತ್ತಾರೆ. ಅಜ್ಜಿ ಪಾತ್ರದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಅವರು ಕಾಣಿಸಿಕೊಳ್ತಿದ್ದಾರೆ.
ಚಿಕ್ಕಪ್ಪ-ಚಿಕ್ಕಮ್ಮ, ಅಪ್ಪ-ಅಮ್ಮ, ರಾಧಿಕಾ, ಅಜ್ಜಿ ಸೇರಿ ಇಡೀ ಮನೆಯವರಿಗೆ ಏನು ತಿಂಡಿ ಬೇಕೋ ಅದನ್ನೆಲ್ಲ ಕರ್ಣ ರೆಡಿ ಮಾಡಿ ಅಂತ ಮನೆ ಕೆಲಸದವರಿಗೆ ಹೇಳುತ್ತಾನೆ. ರಂಗೋಲಿ ಹಾಕೋದು ತಪ್ಪಾಗಿದ್ರೆ ಸರಿ ಮಾಡೋದರಿಂದ ಹಿಡಿದು, ಸರ್ಜರಿ ಮಾಡೋವರೆಗೆ ಕರ್ಣ ಎಲ್ಲ ಕೆಲಸಗಳನ್ನು ಮಾಡುತ್ತಾನೆ. ಹೀಗಿದ್ದರೂ ಕರ್ಣನನ್ನು ಕಂಡರೆ ತಂದೆಗೆ ಇಷ್ಟವಿಲ್ಲ, ಟಿವಿಯಲ್ಲಿ ಕರ್ಣನ ಮುಖ ಕಂಡರೆ ತಂದೆಗೆ ಟಿವಿಯನ್ನೇ ಒಡೆದು ಹಾಕುವಷ್ಟು ಕೋಪ. ಅಜ್ಜಿ ಮತ್ತು ಅಮ್ಮನಿಗೆ ಕರ್ಣನನ್ನು ಕಂಡರೆ ಮುದ್ದು.
BBH 19: ಬಿಗ್ ಬಾಸ್ ಆರಂಭಕ್ಕೂ ಮುನ್ನ ಹೊರಬಿತ್ತು ಇಂಟ್ರೆಸ್ಟಿಂಗ್ ಮಾಹಿತಿ: ಮನೆಯೊಳಗೆ ಎಐ ರೋಬೋ
ನಾನು ಮದುವೆ ಆಗೋದಿಲ್ಲ ಎಂದು ತಂದೆಗೆ ಕರ್ಣ ಮಾತುಕೊಟ್ಟಿದ್ದರೆ, ನಾನು ಮದುವೆ ಆದರೆ ಕರ್ಣನನ್ನೇ ಎಂದು ನಿಧಿ ಕಾಯುತ್ತಿದ್ದಾಳೆ. ನಿತ್ಯಾಗೆ ಅಡುಗೆ ಮಾಡೋಕೆ ಬರೋದಿಲ್ಲ, ಆದರೆ ನಿಧಿ ಮಾತ್ರ ಎಲ್ಲದರಲ್ಲೂ ಮುಂದೆ. ಕರ್ಣನಿಗೆ ಪ್ರಪೋಸ್ ಮಾಡೋಕೆ ನಿಧಿ ಕಾಯುತ್ತಿದ್ದಾಳೆ. ತಂಗಿಗೆ ಪ್ರಪೋಸ್ ಮಾಡೋಕೆ ನಿತ್ಯಾ ಸಲಹೆ ಕೊಡ್ತಾಳೆ. ಇದನ್ನೆಲ್ಲ ಮೊದಲ ಎಪಿಸೋಡ್ನಲ್ಲಿ ತೋರಿಸಲಾಗಿದೆ. ಸದ್ಯ ನಿಧಿಯ ಪ್ರಪೋಸ್ಗೆ ಕರ್ಣ ಏನು ಹೇಳುತ್ತಾನೆ ಎಂಬುದು ರೋಚಕತೆ ಸೃಷ್ಟಿಸಿದೆ.