Avneet Kaur: ಬಿಕಿನಿ ಧರಿಸಿ ಸೆಕ್ಸಿ ಪೋಸ್ ಕೊಟ್ಟ ಅವನೀತ್ ಕೌರ್; ಸಖತ್ ಹಾಟ್ ಅಂತಿದ್ದಾರೆ ಫ್ಯಾನ್ಸ್
ನಟಿ ಅವನೀತ್ ಕೌರ್ ಹಲವು ರಿಯಾಲಿಟಿ ಶೋ, ಟಿವಿ ಧಾರಾವಾಹಿಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಕೇವಲ ಸಿನಿಮಾ, ಸೀರಿಯಲ್, ರಿಯಾಲಿಟಿ ಶೋಗಳಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುವ ನಟಿ ಬೋಲ್ಡ್ ಫೋಟೊ ಶೂಟ್ ಮೂಲಕ ಪಡ್ಡೆಗಳ ನಿದ್ದೆ ಕದಿಯುತ್ತಾರೆ. ಈ ಬಾರಿ ನಟಿ ಫ್ರಾನ್ಸ್ಗೆ ಜಾಲಿ ಟ್ರಿಪ್ ಕೈಗೊಂಡಿದ್ದು ಬೋಲ್ಡ್ ಫೋಟೊ ಮೂಲಕ ಮಿಂಚಿದ್ದಾರೆ.

Avneet Kaur


ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿರುವ ಅವನೀತ್ ಕೌರ್ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ನಟಿ ವೆಕೇಶನ್ ಮೂಡ್ನಲ್ಲಿದ್ದು ಫ್ರಾನ್ಸ್ನಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದಾರೆ.

ಡಿಸ್ನಿಲ್ಯಾಂಡ್ ಪ್ಯಾರಿಸ್ನಿಂದ ಕಾನ್ ಫಿಲ್ಮ್ ಫೆಸ್ಟಿವಲ್ವರೆಗೆ ಅವನೀತ್ ಕೌರ್ ತಮ್ಮ ಟ್ರೆಂಡಿ ಫ್ಯಾಷನೇಬಲ್ ಲುಕ್ ಮೂಲಕ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಫ್ರಾನ್ಸ್ಗೆ ಭೇಟಿ ನೀಡಿದ್ದು ಅವರ ಬೋಲ್ಡ್ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಇನ್ಸ್ಟಾಗ್ರಾಂನಲ್ಲಿ ಆಗಾಗ್ಗೆ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುವ ಅವನೀತ್ ಬ್ರೇಲೆಟ್ ಮತ್ತು ಶಾರ್ಟ್ಸ್ ಸೆಟ್ನಲ್ಲಿ ತನ್ನ ಫಿಟ್ ಫಿಗರ್ ತೋರಿಸಿದ್ದಾರೆ. ಪ್ಯಾರಿಸ್ನ ಗಾರ್ಡನ್ ಏರಿಯಾದಲ್ಲಿ ನಟಿ ಫೋಟೊ ಶೂಟ್ ಮಾಡಿಸಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ.

ಬಿಕಿನಿ ಧರಿಸಿ ಸ್ವಿಮಿಂಗ್ ಮಾಡುತ್ತಿರುವ ಇವರ ಫೋಟೊ ಪಡ್ಡೆಗಳ ಹಾಟ್ ಫೆವರೇಟ್ ಎನಿಸಿಕೊಂಡಿದೆ. ನಟಿ ವೈಟ್ ಕಲರ್ ಬಿಕಿನಿ ತೊಟ್ಟು ಸೆಕ್ಸಿಯಾಗಿ ಕಂಡಿದ್ದಾರೆ.

ಗ್ರೇ ಅಥ್ಲೀಝರ್ ಡ್ರೆಸ್ ಧರಿಸಿ ಸೈಕ್ಲಿಂಗ್ ಮಾಡುತ್ತಿರುವ ಅವನೀತ್ ಸ್ಪೋರ್ಟ್ ಲುಕ್ನಲ್ಲೂ ಮಿಂಚಿದ್ದಾರೆ.

ವೈಟ್ ಸಮ್ಮರ್ ಡ್ರೆಸ್ ಮತ್ತು ಹೆಡ್ಸ್ಕಾರ್ಫ್ ಜತೆ ಅವನೀತ್ ಕೌರ್ ಫೋಟೊ ತೆಗಿಸಿಕೊಂಡಿದ್ದು ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ.

ಕಿರುತೆರೆಯಲ್ಲಿ ದೂರದರ್ಶನ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದ ಇವರು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಜನಪ್ರಿಯರಾಗಿದ್ದಾರೆ. ಅವರ ಪ್ರತಿಯೊಂದು ಪೋಸ್ಟ್ಗಳು ಲಕ್ಷಾಂತರ ಲೈಕ್ಗಳನ್ನು ಗಳಿಸುತ್ತಿವೆ.

ಅವನೀತ್ ಕೌರ್ ತಮ್ಮ ವೃತ್ತಿಜೀವನವನ್ನು ʼಡ್ಯಾನ್ಸ್ ಇಂಡಿಯಾ ಡ್ಯಾನ್ಸ್ʼ, ʼಲಿಟಲ್ ಮಾಸ್ಟರ್ಸ್ʼ ಮೂಲಕ ಪ್ರಾರಂಭಿಸಿದರು. ಆ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಅವರು ಪ್ರಸ್ತುತ ವೆಬ್ ಸರಣಿಗಳು ಮತ್ತು ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.