Amitabh Bachchan: ಮಗ ಅಭಿಷೇಕ್ ಬಗ್ಗೆ ಹೆಮ್ಮೆಯಿಂದ ಪೋಸ್ಟ್ ಹಂಚಿಕೊಂಡ ನಟ ಅಮಿತಾಬ್ ಬಚ್ಚನ್
ನಟ ಅಮಿತಾಬ್ ಬಚ್ಚನ್ ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಕುರಿತು ವಿಶೇಷ ಪೋಸ್ಟ್ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಷೇಕ್ ಅವರ ಸಿನಿಮಾ ಕೆರಿಯರ್, ಸವಾಲಿನ ಪಾತ್ರ, ಚಲನಚಿತ್ರಗಳ ಆಯ್ಕೆ ಇತ್ಯಾದಿ ಕುರಿತು ಅಮಿತಾಬ್ ಬಚ್ಚನ್ ಹೇಳಿಕೊಂಡಿದ್ದಾರೆ.

Amitabh Bachchan and Abhishek

ಮುಂಬೈ: ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ (Amitabh Bachchan) ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ (Abhishek Bachchan) ನಡುವಿನ ಬಾಂಡಿಂಗ್ ಹೇಗಿದೆ ಎಂಬುದು ಜನರಿಗೆ ತಿಳಿದೇ ಇದೆ. ಇವರಿಬ್ಬರು ಅನೇಕ ಸಿನಿಮಾದಲ್ಲಿ ಕೂಡ ಜತೆಯಾಗಿ ಕಾಣಿಸಿಕೊಂಡು ಸಿನಿ ಪ್ರಿಯರ ಮನ ಗೆದ್ದಿದ್ದಾರೆ. ಇದೀಗ ಅಮಿತಾಬ್ ಬಚ್ಚನ್ ಅವರು ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಕುರಿತು ವಿಶೇಷ ಪೋಸ್ಟ್ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ನಟ ಅಭಿಷೇಕ್ ಅವರ ಸಿನಿಮಾ ಕೆರಿಯರ್, ಸವಾಲಿನ ಪಾತ್ರ, ಚಲನಚಿತ್ರಗಳ ಆಯ್ಕೆ ಇತ್ಯಾದಿ ಕುರಿತು ಹೆಮ್ಮೆಯ ತಮ್ಮ ಪೋಸ್‌ನಲ್ಲಿ ಬರೆದುಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಅವರಿಗೆ ಬ್ಲಾಗ್, ಪೋಸ್ಟ್ ಹಂಚಿಕೊಳ್ಳುವ ಹವ್ಯಾಸ ಮೊದಲಿನಿಂದಲೂ ಇದೆ. ಈ ಬಾರಿ ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಕುರಿತು ಭಾವನಾತ್ಮಕವಾಗಿ ಕೆಲವು ವಿಚಾರ ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ತಂದೆ, ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಪ್ರಸಿದ್ಧ ಸಾಲುಗಳನ್ನು ಉಲ್ಲೇಖಿಸುವ ಮೂಲಕ ಅಭಿಷೇಕ್ ಅವರನ್ನು ಹೊಗಳಿರುವುದನ್ನು ಪೋಸ್ಟ್‌ನಲ್ಲಿ ಕಂಡು ಬಂದಿದೆ.
T 5418 -
— Amitabh Bachchan (@SrBachchan) June 21, 2025
… and there is immense admiration for Abhishek ..
“मेरे बेटे, बेटे होने से मेरे उत्तराधिकारी नहीं होंगे ; जो मेरे उत्तराधिकारी होंगे वो मेरे बेटे होंगे”
~हरिवंश राय बच्चन
my sons just because you are my sons shall not be my inheritors .. they that shall be my… pic.twitter.com/4hOyjOwczY
ʼʼಅಭಿಷೇಕ್ ಪ್ರತಿ ಸವಾಲಿನ ಪಾತ್ರಗಳನ್ನು ಕೂಡ ಅತ್ಯಂತ ಧೈರ್ಯದಿಂದ ನಿರ್ವಹಿಸುತ್ತಾರೆʼʼ ಎಂದು ಬುಗ್ ಬಿ ಬರೆದಿದ್ದಾರೆ. ತಮ್ಮ ತಂದೆ, ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಪ್ರಸಿದ್ಧ ಸಾಲುಗಳನ್ನು ಕೂಡ ಉಲ್ಲೇಖಿಸಿದ್ದಾರೆ. ʼʼನನ್ನ ಪುತ್ರ ಎಂಬ ಕಾರಣಕ್ಕೆ ಉತ್ತರಾಧಿಕಾರಿಯಾಗಿಲ್ಲ. ನಿಮ್ಮನ್ನು ನೀವು ಗುರುತಿಸಿಕೊಂಡು ನಿಜವಾದ ಉತ್ತರಾಧಿಕಾರಿ ಎನಿಸಿಕೊಂಡಿದ್ದೀರಿʼʼ ಎಂದು ಅಭಿಷೇಕ್ ಅವರ ಫೋಟೊವನ್ನು ಶೇರ್ ಮಾಡಿದ್ದಾರೆ.
ಅಭಿಷೇಕ್ ಪ್ರತಿ ಚಿತ್ರದಲ್ಲಿಯೂ ವಿಭಿನ್ನ ಪಾತ್ರ ನಿರ್ವಹಿಸುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ʼಐ ವಾಂಟ್ ಟು ಟಾಕ್ʼ, ʼಬಿ ಹ್ಯಾಪಿʼ,ʼ ಹೌಸ್‌ಫುಲ್ 5ʼ ಇತ್ಯಾದಿ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಕಾರಣಕ್ಕಾಗಿ ಮಗನ ಸಾಧನೆ ಕಂಡು ಹೆಮ್ಮೆಯಿಂದ ನಟ ಅಮಿತಾಬ್ ಬಚ್ಚನ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಷೇಕ್ ಸದ್ಯ ʼಕಾಳಿಧರ್ ಲಾಪಾಟʼ ಮತ್ತು ʼರಾಜ ಶಿವಾಜಿʼ ಚಿತ್ರಗಳ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಮಿತಾಬ್ ಬಚ್ಚನ್ ಅವರ ಈ ಪೋಸ್ಟ್ ಅಭಿಮಾನಿಗಳ ಮನ ಗೆದ್ದಿದೆ.