Physical Abuse: ಈ ಶಿಕ್ಷಕಿ ಮೇಲೆ ಒಂದಲ್ಲ... ಎರಡಲ್ಲ ಬರೋಬ್ಬರಿ 55ಕೇಸ್ ದಾಖಲು! ಈಕೆ ಮಾಡಿದ ನೀಚ ಕೃತ್ಯ ಏನು ಗೊತ್ತಾ?
ಡೌನರ್ಸ್ ಗ್ರೋವ್ ಸೌತ್ ಹೈಸ್ಕೂಲ್ನ ಮಾಜಿ ಶಿಕ್ಷಕಿಯಾದ ಫಾರ್ಮೆಲ್ಲಾ ವಿರುದ್ಧ ಲೈಂಗಿಕ ದೌರ್ಜನ್ಯ, ಗಂಭೀರ ಲೈಂಗಿಕ ದಾಳಿ, ಮಕ್ಕಳ ಜತೆ ಅನುಚಿತ ಸಂಪರ್ಕ ಮತ್ತು ಗ್ರೂಮಿಂಗ್ನ ಆರೋಪಗಳಿವೆ. ಫಾರ್ಮೆಲ್ಲಾ ಅವರ ಒಂದು ಗಂಡ ಮೈಕಲ್ ಫಾರ್ಮೆಲ್ಲಾ, ಬಂಧನದ ವೇಳೆ ಅವರೊಂದಿಗೆ ಕಾರಿನಲ್ಲಿದ್ದರು. ಇಲಿನಾಯ್ಸ್ ಕೋರ್ಟ್ನಲ್ಲಿ ಮಂಗಳವಾರ ಅವರು ತಮ್ಮ ಪತ್ನಿಯ ಕೈಹಿಡಿದು ಆಗಮಿಸಿದ ದೃಶ್ಯಗಳು ಕಾಣಿಸಿಕೊಂಡಿದ್ದವು.


ಇಲಿನಾಯ್ಸ್: ಅಮೆರಿಕದ (America) ಇಲಿನಾಯ್ಸ್ನ ಹೈಸ್ಕೂಲ್ (Illinois High School) ಶಿಕ್ಷಕಿ (Teacher) 30 ವರ್ಷ ಕ್ರಿಸ್ಟಿನಾ ಫಾರ್ಮೆಲ್ಲಾ (Christina Formella,) ಅವರನ್ನು ಮಾರ್ಚ್ನಲ್ಲಿ 14 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಆರೋಪದಡಿ ಬಂಧಿಸಲಾತ್ತು. ಈಗ ತನಿಖಾಧಿಕಾರಿಗಳು ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವಿನ ಸಾವಿರಾರು ಸಂದೇಶಗಳನ್ನು ಗಮನಿಸಿ ಅವರ ವಿರುದ್ಧ 52 ಹೊಸ ಆರೋಪಗಳನ್ನು ಸೇರ್ಪಡೆ ಮಾಡಿದ್ದು ಒಟ್ಟು 55 ಆರೋಪಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಡೌನರ್ಸ್ ಗ್ರೋವ್ ಸೌತ್ ಹೈಸ್ಕೂಲ್ನ ಮಾಜಿ ಶಿಕ್ಷಕಿಯಾದ ಫಾರ್ಮೆಲ್ಲಾ ವಿರುದ್ಧ ಲೈಂಗಿಕ ದೌರ್ಜನ್ಯ, ಗಂಭೀರ ಲೈಂಗಿಕ ದಾಳಿ, ಮಕ್ಕಳ ಜತೆ ಅನುಚಿತ ಸಂಪರ್ಕ ಮತ್ತು ಗ್ರೂಮಿಂಗ್ನ ಆರೋಪಗಳಿವೆ. ಫಾರ್ಮೆಲ್ಲಾ ಅವರ ಒಂದು ಗಂಡ ಮೈಕಲ್ ಫಾರ್ಮೆಲ್ಲಾ, ಬಂಧನದ ವೇಳೆ ಅವರೊಂದಿಗೆ ಕಾರಿನಲ್ಲಿದ್ದರು. ಇಲಿನಾಯ್ಸ್ ಕೋರ್ಟ್ನಲ್ಲಿ ಮಂಗಳವಾರ ಅವರು ತಮ್ಮ ಪತ್ನಿಯ ಕೈಹಿಡಿದು ಆಗಮಿಸಿದ ದೃಶ್ಯಗಳು ಕಾಣಿಸಿಕೊಂಡಿದ್ದವು.
ಫಾರ್ಮೆಲ್ಲಾ ವಿರುದ್ಧ 20 ಗಂಭೀರ ಲೈಂಗಿಕ ದಾಳಿ, ಬಹು ಲೈಂಗಿಕ ದೌರ್ಜನ್ಯ, ಮಕ್ಕಳ ಜತೆ ಅನುಚಿತ ಸಂಪರ್ಕ, ಮತ್ತು ಆರು ಗ್ರೂಮಿಂಗ್ ಆರೋಪಗಳಿವೆ. “ಅವಳಿಗೆ ತನ್ನ ಕೃತ್ಯ ತಪ್ಪು ಎಂದು ಗೊತ್ತಿತ್ತು. ಆಕೆ ಅತ್ಯಂತ ಕುತಂತ್ರದ ವ್ಯಕ್ತಿ,” ಎಂದು ಪ್ರಾಸಿಕ್ಯೂಟರ್ ಜಾಕ್ಲಿನ್ ಮ್ಯಾಕ್ಆಂಡ್ರೂ ಟ್ರಿಬ್ಯೂನ್ಗೆ ತಿಳಿಸಿದ್ದಾರೆ. ಫಾರ್ಮೆಲ್ಲಾ ತನ್ನ ಗಂಡನನ್ನು ಮದುವೆಯಾಗಲು ಇಚ್ಛಿಸಿರಲಿಲ್ಲ, ಗಂಡ ತನ್ನ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ವಿದ್ಯಾರ್ಥಿಗೆ ತಿಳಿಸಿದ್ದಳು ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ: Jagan Reddy: ಜಗನ್ ಮೋಹನ್ ರೆಡ್ಡಿ ವಾಹನದ ಅಡಿಗೆ ಬಿದ್ದು ವೈಎಸ್ಆರ್ಸಿಪಿಯ ಕಾರ್ಯಕರ್ತ ಸಾವು; ವಿಡಿಯೊ ವೈರಲ್
ನ್ಯಾಯಾಧೀಶರು ಈ ಪ್ರಕರಣವನ್ನು “ಭಯಾನಕ, ಆಘಾತಕಾರಿ” ಎಂದು ಕರೆದರೂ, ಫಾರ್ಮೆಲ್ಲಾ ಅವರಿಗೆ ಕಾಲ್ ಮಾನಿಟರ್ನೊಂದಿಗೆ ಬಿಡುಗಡೆಗೆ ಅನುಮತಿಸಿದ್ದಾರೆ. ಜನವರಿ 2023ರಿಂದ ಸೆಪ್ಟೆಂಬರ್ 2024ರವರೆಗೆ ಶಾಲೆಯ ತರಗತಿಗಳಲ್ಲಿ ಮತ್ತು ತನ್ನ ಮನೆಯಲ್ಲಿ ಸುಮಾರು 50 ಲೈಂಗಿಕ ಕೃತ್ಯಗಳನ್ನು ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಯು ಕೃತ್ಯ ತಪ್ಪು ಎಂದು ಹೇಳಿದಾಗ ಸಂಬಂಧ ಕೊನೆಗೊಂಡಿತು ಎಂದು ಸ್ಟೇಟ್ನ ಅಟಾರ್ನಿ ಕಚೇರಿ ತಿಳಿಸಿದೆ. ಈ ಎಲ್ಲಾ ಆರೋಪಗಳಲ್ಲಿ ದೋಷಿಯೆಂದು ಕಂಡುಬಂದರೆ ಫಾರ್ಮೆಲ್ಲಾ ಅವರಿಗೆ 60 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು.