Kartik Aaryan-Sreeleela: ಶ್ರೀಲೀಲಾ ಜತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಅನುಮಾನ ಮೂಡಿಸಿದ ತಾಯಿಯ ಹೇಳಿಕೆ
Kartik Aaryan-Sreeleela: ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿದ ಬೆಂಗಳೂರು ಮೂಲದ ಶ್ರೀಲೀಲಾ ಸದ್ಯ ವಿವಿಧ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಆ್ಯಕ್ಟರ್ ಜತೆಗೆ ಡಾಕ್ಟರ್ ಕೂಡ ಆಗಿರುವ ಅವರು ʼಆಶಿಕಿ 3ʼ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಇದರಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸುತ್ತಿದ್ದು, ಇವರ ಮಧ್ಯೆ ಡೇಟಿಂಗ್ ನಡೆಯುತ್ತಿದೆ ಎನ್ನುವ ವದಂತಿ ಹಬ್ಬಿದೆ.

ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್.

ಬೆಂಗಳೂರು: 2019ರಲ್ಲಿ ತೆರೆಕಂಡ, ಎ.ಪಿ.ಅರ್ಜುನ್ ನಿರ್ದೇಶನದ ʼಕಿಸ್ʼ (Kiss) ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಶ್ರೀಲೀಲಾ (Sreeleela) ಸದ್ಯ ಪರಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಟಾಲಿವುಡ್‌ನಲ್ಲಿ ಛಾಪು ಮೂಡಿಸಿದ ಬಳಿಕ ಅವರು ಇದೀಗ ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಅದರಲ್ಲಿಯೂ ಬಹು ನಿರೀಕ್ಷಿತ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿಯಾಗಿಯೇ ಪಾದರ್ಪಣೆ ಮಾಡಿದ್ದಾರೆ. ಈಗಾಗಲೇ ಮ್ಯೂಸಿಕಲ್ ಹಿಟ್ ಎನಿಸಿಕೊಂಡಿರುವ ʼಆಶಿಕಿʼ ಸರಣಿಯ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ʼಆಶಿಕಿ 3ʼ (Aashiqui 3) ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿದ್ದು, ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ (Kartik Aaryan-Sreeleela) ಎನ್ನುವ ಗುಸುಗುಸು ಜೋರಾಗಿ ಕೇಳಿ ಬರುತ್ತಿದೆ.
ಬಾಲಿವುಡ್‌ನಲ್ಲಿ ಸದ್ಯ ಪ್ರವರ್ಧಮಾನಕ್ಕೆ ಬರುತ್ತಿರುವ ನಟರಲ್ಲಿ ಕಾರ್ತಿಕ್ ಆರ್ಯನ್ ಕೂಡ ಒಬ್ಬರು. ತಮ್ಮದೇ ಛಾಪು ಮೂಡಿಸಿರುವ ಈ ಯುವ ನಟನ ಕೈತುಂಬ ಅವಕಾಶಗಳಿವೆ. ಈ ಪೈಕಿ ಬಾಲಿವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ ʼಆಶಿಕಿ 3ʼ ಚಿತ್ರ ಕೂಡ ಇದೆ. ಈ ಸಿನಿಮಾ ಮೂಲಕ ಕಾರ್ತಿಕ್ ಮತ್ತು ಶ್ರೀಲೀಲಾ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Rashmika Mandanna: ನಟಿ ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ನೀಡಿ; ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹ
ಈ ಹಿಂದೆಯೇ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತೆ ಇತ್ತೀಚೆಗೆ ಶ್ರೀಲೀಲಾ ಅವರು ಕಾರ್ತಿಕ್ ಆರ್ಯನ್ ಅವರ ಕುಟುಂಬಸ್ಥರೊಂದಿಗೆ ಪಾರ್ಟಿ ನಡೆಸಿದ್ದರು. ಈ ಫೋಟೊ ವೈರಲ್ ಆಗಿತ್ತು. ಇದೀಗ ಕಾರ್ತಿಕ್ ಆರ್ಯನ್ ಅವರ ತಾಯಿ ಮಾಲಾ ತಿವಾರಿ ನೀಡಿದ ಹೇಳಿಕೆ ಇವರ ಸಂಬಂಧದ ಬಗ್ಗೆ ಇದ್ದ ಅನುಮಾನವನ್ನು ಇನ್ನಷ್ಟು ಗಟ್ಟಿಗೊಳಿಸುವಂತಿದೆ.
ಮಾಲಾ ತಿವಾರಿ ಹೇಳಿದ್ದೇನು?
ಶ್ರೀಲೀಲಾ ತಮ್ಮ ಸೊಸೆ ಎನ್ನುವುದನ್ನು ಮಾಲಾ ತಿವಾರಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಜೈಪುರದಲ್ಲಿ ನಡೆದ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆಯನ್ನು ಕಾರ್ತಿಕ್ ಅರ್ಯನ್ ಹೊತ್ತುಕೊಂಡಿದ್ದರು. ಈ ವೇಳೆ ಅವರ ತಾಯಿಯ ಬಳಿ ಮಾಧ್ಯದವರು ಪ್ರಶ್ನೆ ಕೇಳಿ, ತಮ್ಮ ಸೊಸೆ ಯಾವ ರೀತಿ ಇರಬೇಕು ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಅವರು, ʼʼಸೊಸೆ ಡಾಕ್ಟರ್ ಆಗಿರಬೇಕು ಎನ್ನುವುದು ನಮ್ಮ ಕುಟುಂಬದ ಬೇಡಿಕೆʼʼ ಎಂದು ತಿಳಿಸಿದ್ದರು. ಶ್ರೀಲೀಲಾ ಈಗಾಗಲೇ ವೈದ್ಯಕೀಯ ಪದವಿ ಪೂರೈಸಿದ್ದು, ಆ್ಯಕ್ಟರ್ ಜತೆಗೆ ಡಾಕ್ಟರ್ ಕೂಡ ಆಗಿದ್ದಾರೆ. ಇದೇ ಕಾರಣಕ್ಕೆ ಮಾಲಾ ಅವರ ಹೇಳಿಕೆ ಸಂಚಲನ ಮೂಡಿಸಿದೆ. ಶ್ರೀಲೀಲಾ ಅವರನ್ನು ಉದ್ದೇಶಿಸಿಯೇ ಮಾಲಾ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ʼಆಶಿಕಿ 3ʼ ಚಿತ್ರವನ್ನು ಅನುರಾಗ್ ಬಸು ನಿರ್ದೇಶಿಸುತ್ತಿದ್ದು, ಈ ವರ್ಷದ ದೀಪಾವಳಿ ವೇಳೆಗೆ ತೆರೆಗೆ ಬರಲಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಟೀಸರ್ ಈಗಾಗಲೇ ಗಮನ ಸೆಳೆದಿದೆ. ಈ ರೊಮ್ಯಾಟಿಂಕ್ ಡ್ರಾಮ ಹಿಂದಿನ ಸರಣಿಯಂತೆಯೇ ಮ್ಯೂಸಿಕಲ್ ಹಿಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.