ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Master Anand: ಡಿವೋರ್ಸ್ ರೂಮರ್ ಹಬ್ಬಿದ್ದು ಹೇಗೆ?: ಎಲ್ಲ ವಿಚಾರ ತೆರೆದಿಟ್ಟ ಮಾಸ್ಟರ್ ಆನಂದ್

ಈ ಮುಂಚೆ ಅದೆಷ್ಟೊ ಸೆಲೆಬ್ರಿಟಿಗಳ ಕುರಿತು ಡಿವೋರ್ಸ್ ಬಗ್ಗೆ ಗಾಳಿ ಸುದ್ದಿ ಹರಿದಾಡಿದೆ. ಆದ್ರೆ, ಈ ಬಗ್ಗೆ ಅವರೆಲ್ಲ ತಲೆಕೆಡೆಸಿಕೊಂಡಿರಲಿಲ್ಲ. ಹಾಗೆಯೆ ಮಾಸ್ಟರ್‌ ಆನಂದ್ ಹಾಗೂ ಯಶಸ್ವಿನಿ ಬಗ್ಗೆ ಕೂಡ ಡಿವೋರ್ಸ್ ಎನ್ನುವ ವಿಚಾರದಲ್ಲಿ ತುಳುಕು ಹಾಕಿಕೊಂಡಿತ್ತು. ಸದ್ಯ ಈ ಕುರಿತು ಮಾಸ್ಟರ್ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ವಿಶ್ವವಾಣಿ ಜೊತೆ ಮಾತನಾಡಿದ್ದಾರೆ.

ಡಿವೋರ್ಸ್ ರೂಮರ್ ಹಬ್ಬಿದ್ದು ಹೇಗೆ?: ಎಲ್ಲ ವಿಚಾರ ತೆರೆದಿಟ್ಟ ಆನಂದ್

Master Anand Interview

Profile Vinay Bhat Feb 17, 2025 7:05 AM

ಖ್ಯಾತ ನಟ ಹಾಗೂ ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್‌ ಆನಂದ್ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ಕೆಲ ಅಚ್ಚರಿಯ ವಿಚಾರ ಬಹಿರಂಗ ಪಡಿಸಿದ್ದಾರೆ. ಮುಖ್ಯವಾಗಿ ಡಿವೋರ್ಸ್​ ಸುದ್ದಿ ಹರಡಲು ಕಾರಣವನ್ನು ತಿಳಿಸಿದ್ದಾರೆ. ಕಲಾವಿದರ ಡಿವೋರ್ಸ್‌ ವದಂತಿಗಳು ವೈರಲ್‌ ಆಗುತ್ತಿರುವುದು ಹೊಸತೇನಲ್ಲ. ಈ ಮುಂಚೆ ಅದೆಷ್ಟೊ ಸೆಲೆಬ್ರಿಟಿಗಳ ಕುರಿತು ಡಿವೋರ್ಸ್ ಬಗ್ಗೆ ಗಾಳಿ ಸುದ್ದಿ ಹರಿದಾಡಿದೆ. ಆದ್ರೆ, ಈ ಬಗ್ಗೆ ಅವರೆಲ್ಲ ತಲೆಕೆಡೆಸಿಕೊಂಡಿರಲಿಲ್ಲ. ಹಾಗೆಯೆ ಮಾಸ್ಟರ್‌ ಆನಂದ್ ಹಾಗೂ ಯಶಸ್ವಿನಿ ಬಗ್ಗೆ ಕೂಡ ಡಿವೋರ್ಸ್ ಎನ್ನುವ ವಿಚಾರದಲ್ಲಿ ತುಳುಕು ಹಾಕಿಕೊಂಡಿತ್ತು.

ಸದ್ಯ ಈ ಕುರಿತು ಮಾಸ್ಟರ್ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ವಿಶ್ವವಾಣಿ ಜೊತೆ ಮಾತನಾಡಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಆನಂದ್ ಪತ್ನಿ ಯಶಸ್ವಿನಿ ಮತ್ತು ಪುತ್ರಿ ವಂಶಿಕಾ ಕಿರುತೆರೆ ವೀಕ್ಷಕರಿಗೆ ಪರಿಚಯವಾಗಿ ಹತ್ತಿರವಾಗಿಬಿಟ್ಟರು. ಯಶಸ್ವಿನಿ ಇತ್ತೀಚೆಗೆ ಫುಲ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು, ಸಖತ್‌ ಡ್ಯಾನ್ಸ್‌ ಮಾಡಿ ರೀಲ್ಸ್ ಹಂಚಿಕೊಂಡಿದ್ದಾರೆ.

ಈ ಪೋಸ್ಟ್​ಗೆ ಒಬ್ಬರು ‘ಡಿವೋರ್ಸ್ ಶೀಘ್ರದಲ್ಲಿಯೇ ಆಗಲಿದೆ' ಎಂಬರ್ಥದಲ್ಲಿ ಕಮೆಂಟ್‌ ಮಾಡಿದ್ದಾರೆ. ಆದರೆ ಅದಕ್ಕೆ ಅಲ್ಲಿಯೇ ಯಶಸ್ವಿನಿ ಕೂಡ ಉತ್ತರ ಕೊಟ್ಟಿದ್ದು, ‘ಮೇಡಂ ಅದು ಎಂದಿಗೂ ಸಾಧ್ಯವಿಲ್ಲ. ನಾನು ನನ್ನ ಮಕ್ಕಳಿಗಿಂತ ನನ್ನ ಗಂಡನನ್ನು ಹೆಚ್ಚು ಪ್ರೀತಿಸುತ್ತೇನೆ' ಎಂದು ಹಾಕಿದ್ದರು.



ಡಿವೋರ್ಸ್​ ಎನ್ನುವ ಪದವನ್ನೇ ಇಟ್ಟುಕೊಂಡು ಮುಂದೆ ಏನೇನೋ ಗಾಳಿ ಸುದ್ದಿಗಳನ್ನು ಮಾಡಲಾಯಿತು. ಅಲ್ಲಿಂದ ಅದು ಏನೇನೋ ತಿರುವು ಪಡೆದುಕೊಂಡಿತು ಎಂದು ಸಂದರ್ಶನದಲ್ಲಿ ಆನಂದ್ ದಂಪತಿ ಹೇಳಿದ್ದಾರೆ. ಇವತ್ತಿನ ಪ್ರಪಂಚ ಲೈಕ್‌, ಶೇರ್‌ ಆ್ಯಂಡ್‌ ಸಬ್‌ಸ್ಕ್ರೈಬರ್‌ ಮೇಲೆ ಬದುಕುತ್ತಿದ್ದಾರೆ. ಹೀಗಿರುವಾಗ ಚಿಕ್ಕ ವಿಚಾರವು ಸಿಕ್ಕಿದರೆ ಅದನ್ನೇ ಒಂದು ವಿಡಿಯೋ ಮಾಡುತ್ತಾರೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಂಡರೆ ನಾವು ಮುಂದೆ ಹೋಗಲು ಆಗುವುದಿಲ್ಲ. ನಮ್ಮ ಕೆಲಸ ಏನಿದೆ ಅದನ್ನು ನೋಡಿಕೊಂಡು ಹೋಗಬೇಕು. ಈ ಗಾಳಿ ಸುದ್ದಿ ಹರಡಿರುವುರದಲ್ಲಿ ಇವಳದು ಕೂಡ ಅರ್ಧ ತಪ್ಪಿದೆ ಎಂದಿರುವ ಮಾಸ್ಟರ್‌ ಆನಂದ್, ಅಂತಹ ಕಮೆಂಟ್‌ಗಳಿಗೆ ಉತ್ತರ ಕೊಟ್ಟಿರುವುದೇ ಇವಳ ತಪ್ಪು ಎಂದು ಹೇಳಿದ್ದಾರೆ.