Monk the Young Movie: ಕುತೂಹಲ ಮೂಡಿಸಿದೆ ʼಮಾಂಕ್ ದಿ ಯಂಗ್ʼ ಚಿತ್ರದ ಟ್ರೇಲರ್
Monk the Young Movie: ನಟ ಸರೋವರ್ ಅಭಿನಯದ ನಿರ್ದೇಶಕ ಮಾಸ್ಚಿತ್ ಸೂರ್ಯ ನಿರ್ದೇಶನದ ʼಮಾಂಕ್ ದಿ ಯಂಗ್ʼ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ʼಕೃಷ್ಣʼ ಅಜಯ್ ರಾವ್, ನಿರ್ದೇಶಕ ಸಿಂಪಲ್ ಸುನಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ನಟ ಬಬ್ಲು ಪೃಥ್ವಿರಾಜ್, ನಟ ನಿಶ್ಚಿತ್ ಸೇರಿದಂತೆ ಮುಂತಾದ ಗಣ್ಯರು ಟ್ರೇಲರ್ ಅನಾವರಣ ಮಾಡಿದರು.
![Profile](https://vishwavani.news/static/img/user.png)
ಬೆಂಗಳೂರು: ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರನ್ನು ತಲುಪಿರುವ ʼಮಾಂಕ್ ದಿ ಯಂಗ್ʼ ಚಿತ್ರದ (Monk the Young Movie) ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ʼಕೃಷ್ಣʼ ಅಜಯ್ ರಾವ್, ನಿರ್ದೇಶಕ ಸಿಂಪಲ್ ಸುನಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ನಟ ಬಬ್ಲು ಪೃಥ್ವಿರಾಜ್, ನಟ ನಿಶ್ಚಿತ್ ಸೇರಿದಂತೆ ಮುಂತಾದ ಗಣ್ಯರು ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ನೋಡಿದಾಗ ಹೊಸತಂಡದ ಚಿತ್ರ ಎಂದು ಹೇಳಲಾಗುವುದಿಲ್ಲ. ಅಷ್ಟು ಚೆನ್ನಾಗಿದೆ. ಚಿತ್ರ ಕೂಡ ಉತ್ತಮವಾಗಿ ಬಂದಿರುತ್ತದೆ ಎಂಬುದು ಟ್ರೇಲರ್‌ನಲ್ಲೆ ತಿಳಿಯುತ್ತಿದೆ. ಚಿತ್ರ ಯಶಸ್ವಿಯಾಗಲಿ ಎಂದು ಅಜಯ್ ರಾವ್ ಹಾರೈಸಿದರು.
ಇಡೀ ತಂಡದ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ನಿಮಗೆ ಬೇಸರ ತರಿಸದೆ, ನಿಮ್ಮನ್ನು ಎರಡು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುತ್ತದೆ. ಅಂತಹ ಉತ್ತಮ ಕಥಾಹಂದರ ಹೊಂದಿದೆ ʼಮಾಂಕ್ ದಿ ಯಂಗ್ʼ ಎಂದರು ನಟ ಸರೋವರ್.
ಮಾಧ್ಯಮದ ಮಿತ್ರರು ನಮ್ಮ ಚಿತ್ರಕ್ಕೆ ಆರಂಭದಿಂದಲೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ. ನಾವು ನಾಲ್ಕು ಜನ ನಿರ್ಮಾಪಕರು ಒಂದೊಂದು ರಾಜ್ಯದವರು. ಹಾಗಾಗಿ ಇದು ನಿಜವಾಗಲೂ ಪ್ಯಾನ್ ಇಂಡಿಯಾ ಚಿತ್ರ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಫೆಬ್ರವರಿ 28 ರಂದು ನಮ್ಮ ಚಿತ್ರ ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ನಿರ್ಮಾಪಕರಾದ ಕರ್ನಲ್ ರಾಜೇಂದ್ರನ್, ಗೋಪಿಚಂದ್, ಲಾಲ್ ಚಂದ್ ಖತಾರ್ ಹಾಗೂ ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳ.
ʼಮಾಂಕ್ ದಿ ಯಂಗ್ʼ sci fi space odessy ಜಾನರ್‌ನ ಕಥಾಹಂದರ ಹೊಂದಿರುವ ಚಿತ್ರ. ಪ್ರಪಂಚದಲ್ಲಿ ಜನ ಪಾಸಿಟಿವ್‌ಗಿಂತ ನೆಗೆಟಿವ್ ಅನ್ನು ಹೆಚ್ಚು ಬೇಗ ನಂಬುತ್ತಾರೆ. ಆದರೆ ಪಾಸಿಟಿವ್ ಏನು ಎಂಬುದು ನಿಧಾನಕ್ಕೆ ಎಲ್ಲರಿಗೂ ತಿಳಿಯುತ್ತದೆ. ಈ ಅಂಶವನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಸಿಜೆ ವರ್ಕ್‌ಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ನಿರ್ದೇಶಕ ಮಾಸ್ಚಿತ್ ಸೂರ್ಯ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Valentine’s Season Kurta Fashion 2025: ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಟ್ರೆಂಡಿಯಾದ ಕುರ್ತಾಗಳಿವು
ನಾಯಕಿ ಸೌಂದರ್ಯ ಗೌಡ, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಸ್ವಾಮಿನಾಥನ್, ನಟ ಬಬ್ಲು ಪೃಥ್ವಿರಾಜ್, ಉಷಾ ಭಂಡಾರಿ, ನಟ ಪ್ರಣಯ್ ಮೂರ್ತಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ʼಮಾಂಕ್ ದಿ ಯಂಗ್ʼ ಬಗ್ಗೆ ಮಾತನಾಡಿದರು.